ನವದೆಹಲಿ: ಅನೈತಿಕ ಸಂಬಂಧದಿಂದಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಗಂಡನ ಅಕ್ರಮ ಸಂಬಂಧದಿಂದ (Extra Marital Affair) ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೆಂಡತಿಯರಿದ್ದಾರೆ, ಗಂಡನನ್ನೇ ಕೊಲೆ ಮಾಡಿದವರೂ ಇದ್ದಾರೆ. ಹಾಗೇ, ಹೆಂಡತಿಯ ಅಕ್ರಮ ಸಂಬಂಧಕ್ಕೆ (Illegal Relationship) ರೋಸಿಹೋಗಿ ಕೊಲೆಗಾರರಾದ ಗಂಡಂದಿರೂ ಇದ್ದಾರೆ. ಆದರೆ, ಇದು ಸ್ವಲ್ಪ ಬೇರೆ ರೀತಿಯ ಕತೆ. ತನ್ನ ಹೆಂಡತಿಗೆ ಬೇರೊಬ್ಬ ಪುರುಷನ ಜೊತೆ ಅಕ್ರಮ ಸಂಬಂಧವಿದೆ ಎಂದು ಗೊತ್ತಾದ ಕೂಡಲೇ ಕೆಂಡಾಮಂಡಲನಾದ ಗಂಡ ತನ್ನ ಹೆಂಡತಿಯ ಪ್ರೇಮಿಯ ಗುಪ್ತಾಂಗಕ್ಕೆ (Genitals) ಶೂಟ್ ಮಾಡಿದ್ದಾನೆ!
ಕೇರಳ ರಾಜ್ಯದ ಚೆಂಗನೂರ್ ಜಿಲ್ಲೆಯ ಮುಂಡಂಕಾವು ಬಳಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿ ಬೇರೊಬ್ಬನೊಂದಿಗೆ ಸರಸ ಸಲ್ಲಾಪ ಆಡುತ್ತಿರುವ ವಿಷಯ ತಿಳಿದು ಗಂಡ ಕೋಪಗೊಂಡಿದ್ದಾನೆ. ಕೊಟ್ಟಾಯಂನಲ್ಲಿ ವಾಸವಾಗಿದ್ದ 45 ವರ್ಷದ ವ್ಯಕ್ತಿಯ ಹೆಂಡತಿ ಮುಂಡಂಕಾವು ಎಂಬ ಊರಿನಲ್ಲಿದ್ದಳು. ಉದ್ಯೋಗದ ನಿಮಿತ್ತ ಗಂಡ ಬೇರೆ ಊರಿನಲ್ಲಿ ಇದ್ದುದರಿಂದ ತನ್ನೂರಿನಲ್ಲೇ ವಾಸವಾಗಿದ್ದ 45 ವರ್ಷದ ವ್ಯಕ್ತಿಯ ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಹೆಂಡತಿಯ ಮೇಲೆ ಭಾರೀ ನಂಬಿಕೆ ಇಟ್ಟುಕೊಂಡಿದ್ದ ಗಂಡನಿಗೆ ಈ ಯಾವ ವಿಷಯವೂ ಗೊತ್ತಿರಲಿಲ್ಲ.
ಕ್ರಮೇಣ ಆ ಮಹಿಳೆಯ ಮನೆಗೆ ಬೇರೊಬ್ಬ ವ್ಯಕ್ತಿ ಬಂದು ರಾತ್ರಿಯೆಲ್ಲ ಉಳಿದುಕೊಳ್ಳುವ ವಿಷಯ ಇಡೀ ಊರಿಗೆ ತಿಳಿದಿತ್ತು. ಇಡೀ ಊರಿಗೆ ಗೊತ್ತಾದ ವಿಷಯ ಆಕೆಯ ಗಂಡನ ಕಿವಿಗೆ ತಲುಪಲು ಹೆಚ್ಚು ಸಮಯ ಬೇಕಾಗಲಿಲ್ಲ. ಇದು ಗೊತ್ತಾದ ಕೂಡಲೇ ಊರಿಗೆ ಬಂದು ಹೆಂಡತಿಯ ಮೇಲೆ ಕೂಗಾಡಿದ ಆತ ಆಕೆಗೆ ಡೈವೋರ್ಸ್ ಕೊಡುವುದಾಗಿ ಹೆದರಿಸಿದ್ದ. ಆದರೆ, ಅದನ್ನೇ ಕಾಯುತ್ತಿದ್ದ ಆಕೆ ವಿಚ್ಛೇದನ ನೀಡಲು ರೆಡಿಯಾಗಿದ್ದಳು. ಆದರೆ, ತನಗೆ ಹೆಂಡತಿ ಮಾಡಿದ ಮೋಸದಿಂದ ಕೋಪಗೊಂಡಿದ್ದ ಆತ ಹೆಂಡತಿಯ ಮೇಲೆ ಹಲ್ಲೆ ನಡೆಸಲು ಏರ್ ಪಿಸ್ತೂಲ್ ತೆಗೆದುಕೊಂಡು ಮನೆಗೆ ಹೋಗಿದ್ದ.
ಆ ವೇಳೆ ಮನೆಯಲ್ಲಿ ತನ್ನ ಪ್ರೇಮಿಯೊಂದಿಗೆ ಇದ್ದ ಹೆಂಡತಿಯನ್ನು ಕಂಡು ಕೋಪಗೊಂಡ ಗಂಡ ಆಕೆಯ ಪ್ರಿಯಕರನ ಮರ್ಮಾಂಗಕ್ಕೆ ಶೂಟ್ ಮಾಡಿದ್ದಾನೆ. ಇದರಿಂದ ಆತನ ಗುಪ್ತಾಂಗಕ್ಕೆ ತೀವ್ರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರಿಂದ ವಿಚಾರಣೆ ನಡೆಸಿದಾಗ ಅಕ್ರಮ ಸಂಬಂಧದ ವಿಷಯ ಬಯಲಾಗಿದೆ. ಆದರೆ, ಇಬ್ಬರ ಕಡೆಯವರೂ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ದೂರು ದಾಖಲಿಸಿಲ್ಲ.
ಇದನ್ನೂ ಓದಿ: Crime News: 26 ವರ್ಷದ ಹಿಂದಿನ ಕೊಲೆ ಆರೋಪ ಸಾಬೀತು; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ
(Crime News: Kerala Man Injures Wife’s Lover by Shooting at his Private Parts Over Sexual Affair)