Crime News: ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ!

| Updated By: ಸುಷ್ಮಾ ಚಕ್ರೆ

Updated on: Aug 30, 2021 | 8:40 PM

ಭಾನುವಾರ ಚತರ್​​ಪುರದ ಹಳ್ಳಿಯೊಂದರಲ್ಲಿ ಮಹಿಳೆ ತನ್ನ 10 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ಹಾಕಿ, ನಂತರ ತಾನು ನೇಣು ಬಿಗಿದುಕೊಂಡಿದ್ದಾಳೆ.

Crime News: ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ!
ಪ್ರಾತಿನಿಧಿಕ ಚಿತ್ರ
Follow us on

ಭೂಪಾಲ್: ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಮಾತೊಂದಿದೆ. ಆದರೆ, ಮಧ್ಯಪ್ರದೇಶದ ಚತರ್​ಪುರದಲ್ಲಿ 33 ವರ್ಷದ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತೆಯ ಜೊತೆಗೆ ಮೊಬೈಲ್ ವಿಷಯಕ್ಕೆ ಜಗಳವಾಡಿದ ಸೊಸೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆಸೆದು, ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಭಾನುವಾರ ಚತರ್​​ಪುರದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಮಹಿಳೆ ತನ್ನ 10 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ಹಾಕಿ, ನಂತರ ತಾನು ನೇಣು ಬಿಗಿದುಕೊಂಡಿದ್ದಾಳೆ. ಅದೃಷ್ಟವಶಾತ್ ಆ ಇಬ್ಬರು ಹೆಣ್ಣುಮಕ್ಕಳು ಬಾವಿಯ ಕಲ್ಲಿನ ಸಂದಿಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಶನಿವಾರ ಸಂಜೆ ಆಕೆ ತನ್ನ ಅತ್ತೆಯೊಂದಿಗೆ ಜಗಳವಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ಅತ್ತೆ ಆಕೆಯ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಆಕೆ ಅತ್ತೆಯೊಂದಿಗೆ ಜಗಳವಾಡಿದ್ದಳು. ಇದೇ ವಿಷಯ ದೊಡ್ಡದಾಗಿ ಕೋಪಗೊಂಡ ಆಕೆ ಮರುದಿನ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತೋಟದ ಮನೆಗೆ ಹೋಗಿದ್ದಾಳೆ. ಅಲ್ಲಿ ಮಕ್ಕಳನ್ನು ಬಾವಿಗೆ ತಳ್ಳಿ ಆನು ಮನೆಗೆ ಬಂದು ನೇಣು ಹಾಕಿಕೊಂಡಿದ್ದಾಳೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Crime News: ಬುಡಕಟ್ಟು ವ್ಯಕ್ತಿಯನ್ನು ಲಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಜನರು; ಗಂಭೀರವಾಗಿ ಗಾಯಗೊಂಡಾತ ಸಾವು

Crime News: ಸೊಸೆಯ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಮಾವ ಆತ್ಮಹತ್ಯೆ!

(Madhya Pradesh Woman Dies by Suicide After Throwing two Daughters Into Well)