Crime News: ಚಿಕ್ಕಮ್ಮನ ಜೊತೆ ಸಂಬಂಧ ಬೆಳೆಸಿದ…ಆಮೇಲೆನಾಯ್ತು..?
Crime News In Kannada: ಈ ಜಂಜಾಟಗಳ ನಡುವೆ ಆಕೆ 6 ತಿಂಗಳ ಗರ್ಭಿಣಿಯಾದಳು. ಇನ್ನೇನು ಆಕೆ ಮೂರು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿತ್ತು.
ಬಾಲ್ಯದಲ್ಲೇ ಮಕ್ಕಳಿಗೆ ರಕ್ತ ಸಂಬಂಧಗಳ ಮಹತ್ವ ತಿಳಿಸಿ ಹೇಳಿಕೊಡದಿದ್ದರೆ ಎಂಥೆಂತಹ ಸನ್ನಿವೇಶಗಳು ಎದುರಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಿಹವಾಲ್ ಎಂಬಲ್ಲಿ. ಅವರಿಬ್ಬರೂ ಪ್ರಣಯ ಪಕ್ಷಿಗಳಾಗಿದ್ದರು. ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಆಕೆಯನ್ನು ಬಿಟ್ಟಿರಲು ಆತನಿಗೆ ಆಗುತ್ತಿರಲಿಲ್ಲ. ಆತನಿಗೂ ಆಕೆ ಎಂದರೆ ಪಂಚ ಪ್ರಾಣ. ಆದರೆ ಇಲ್ಲಿ ಸಂಬಂಧದಲ್ಲಿ ಚಿಕ್ಕಮ್ಮ ಮತ್ತು ಸೋದರಳಿಯ. ಅಂದರೆ ಸೋದರಳಿಯ ತನ್ನ ಚಿಕ್ಕಮಳನ್ನೇ ಪ್ರೀತಿಸುತ್ತಿದ್ದ. ಪ್ರೀತಿ ಪ್ರಣಯಕ್ಕೆ ತಿರುಗಿತ್ತು.
ಪ್ರಣಯದಲ್ಲಿ ಇಬ್ಬರೂ ಮೈ ಮರೆತಿದ್ದರು. ಹೀಗೆ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆಯಿತು. ಆಕೆ ಗರ್ಭವತಿಯಾಗುತ್ತಿದ್ದಂತೆ ಮದುವೆ ಆಗುವಂತೆ ತಿಳಿಸಿದ್ದಳು. ಇದಕ್ಕೆ ಸೋದರಳಿ ಕೂಡ ಒಪ್ಪಿಗೆ ಸೂಚಿಸಿದ್ದ. ಆದರೆ ಸಂಬಂಧದಲ್ಲಿ ಚಿಕ್ಕಮ್ಮ-ಸೋದರಳಿಯರಾಗಿರುವ ಇಬ್ಬರ ಮದುವೆಗೆ ಎರಡೂ ಕುಟುಂಬಗಳು ಒಪ್ಪಲಿಲ್ಲ.
ಈ ಜಂಜಾಟಗಳ ನಡುವೆ ಆಕೆ 6 ತಿಂಗಳ ಗರ್ಭಿಣಿಯಾದಳು. ಇನ್ನೇನು ಆಕೆ ಮೂರು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿತ್ತು. ಆದರೆ ಸಿಹವಾಲ್ ಗ್ರಾಮದ ಜನರು ಎಂದಿಗೂ ಇಬ್ಬರ ನಡುವಣ ಬಂಧವನ್ನು ಒಪ್ಪಲು ತಯಾರಿರಲಿಲ್ಲ. ಇಬ್ಬರಿಗೂ ಬೇರೆ ದಾರಿ ತೋಚಲಿಲ್ಲ. ಊರಿನ ಪ್ರಮುಖ ಸೇತುವೆಯಿಂದ ಧುಮುಕಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರು. ಇದನ್ನು ನೋಡಿದ ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರು. ಅದರಂತೆ ಇಬ್ಬರನ್ನು ಹತ್ತಿರದ ಅಮೆಲಿಯಾ ಆಸ್ಪತ್ರೆಗೆ ದಾಖಲಿಸಿದರು. ಇಬ್ಬರ ಸ್ಥಿತಿಯು ಇದೀಗ ಗಂಭೀರವಾಗಿದ್ದು ಜೀವಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ಸಿಹವಾಲ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್ ಆಫರ್ ನೀಡಿದ ಮೂರು ಕಂಪೆನಿಗಳು
ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ
ಇದನ್ನೂ ಓದಿ: ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ
(Crime News: aunt nephew fell in love, both commits suicide)