ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2,100 ಕೋಟಿ ರೂ. ಮೌಲ್ಯದ 3,000 ಕೆಜಿ ಡ್ರಗ್ಸ್ ವಶ

| Updated By: ಸುಷ್ಮಾ ಚಕ್ರೆ

Updated on: Sep 20, 2021 | 7:45 PM

ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2 ದೋಣಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3000 ಕೆ.ಜಿ ಹೆರಾಯಿನ್​ ಅನ್ನು ವಶಕ್ಕೆ ಪಡೆಯಲಾಗಿದೆ.

ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2,100 ಕೋಟಿ ರೂ. ಮೌಲ್ಯದ 3,000 ಕೆಜಿ ಡ್ರಗ್ಸ್ ವಶ
ಸಾಂದರ್ಭಿಕ ಚಿತ್ರ
Follow us on

ಅಹಮದಾಬಾದ್: ಗುಜರಾತ್​ನ ಮುಂದ್ರಾ ಬಂದರಿನಲ್ಲಿ ಸುಮಾರು 2,100 ಕೋಟಿ ರೂ. ಮೌಲ್ಯದ 2,988.22 ಕೆಜಿ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2 ದೋಣಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3000 ಕೆ.ಜಿ ಹೆರಾಯಿನ್​ ಅನ್ನು ವಶಕ್ಕೆ ಪಡೆಯಲಾಗಿದೆ. ಒಂದು ಕೆ.ಜಿ ಹೆರಾಯಿನ್​ ಮೌಲ್ಯ 7 ಕೋಟಿ ರೂ. ಇದೆ. ಈ ಘಟನೆಗೆ ಸಂಬಂಧಿಸಿದಂತೆ ಡ್ರಗ್ಸ್​ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದ ಆಶಿ ಟ್ರೇಡಿಂಗ್ ಕಂಪನಿಯಿಂದ ಸಾಗಿಸಲಾಗುತ್ತಿದ್ದ ಭಾರೀ ಮೊತ್ತದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಅಫ್ಘಾನಿಸ್ತಾನದಿಂದ ಈ ನೆರೋಟಿಕ್ ಡ್ರಗ್ ಅನ್ನು ಸಾಗಿಸಲಾಗುತ್ತಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೊದಲ ದೋಣಿಯಿಂದ 1,999.58 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದ್ದು, ಮತ್ತೊಂದು ದೋಣಿಯಿಂದ 988.64 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಇದರ ಬೆನ್ನಲ್ಲೇ ದೆಹಲಿ, ಚೆನ್ನೈ, ಅಹಮದಾಬಾದ್, ಗಾಂಧಿಧಾಮ, ಗುಜರಾತ್​ನ ಮಾಂಡವಿ ಪ್ರದೇಶಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಡ್ರಗ್ಸ್​ ಬಚ್ಚಿಟ್ಟಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದರ ಹಿಂದೆ ಅಫ್ಘಾನ್ ಪ್ರಜೆಗಳ ಕೈವಾಡವಿರುವ ಸಂಶಯವಿದೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ:ನಾನು ಡ್ರಗ್ ಟೆಸ್ಟ್​ಗೆ ಸಿದ್ಧನಿದ್ದೇನೆ, ರಾಹುಲ್ ಗಾಂಧಿ ತಯಾರಿದ್ದಾರಾ?; ವೈಟ್ ಚಾಲೆಂಜ್​ಗೆ ಸಚಿವ ಕೆಟಿ ರಾಮರಾವ್ ಮರು ಸವಾಲು

ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು

(Crime News: Nearly 3000 kg Drugs seized worth 21,000 crore Rupees from Afghanistan seized at Gujarat Mundra port)