ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು

ರೇವ್‌ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ನಡೆಸಿದ್ದು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಯುವಕ, ಯುವತಿಯರು ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದಾರೆ. ಎದ್ದುಬಿದ್ದು ಓಡಿಹೋಗಿದ್ದಾರೆ.

ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು
ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 11 ಜನರನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ವೀಕೆಂಡ್ ಪಾರ್ಟಿ ಜೋರಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ 30-40 ಜನರು ರೇವ್‌ ಪಾರ್ಟಿ ಮಾಡಿದ್ದಾರೆ. ರೇವ್‌ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ನಡೆಸಿದ್ದು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಯುವಕ, ಯುವತಿಯರು ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದಾರೆ. ಎದ್ದುಬಿದ್ದು ಓಡಿಹೋಗಿದ್ದಾರೆ. ಈ ಪೈಕಿ ಸದ್ಯ ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ 16 ದ್ವಿಚಕ್ರ ವಾಹನ, 7 ಕಾರು ಸೀಜ್ ಮಾಡಿಲಾಗಿದೆ.

ಇನ್ನು ರೇವ್‌ ಪಾರ್ಟಿಯಲ್ಲಿ ಗಾಂಜಾ, ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್ಗಳನ್ನು ಬಳಸಲಾಗುತ್ತಿತ್ತಂತೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ. ಡ್ರಗ್ಸ್ ಸೇವಿಸಿ ನಾವು ತಪ್ಪೇ ಮಾಡಿಲ್ಲ ಎಂಬಂತೆ ಪೊಲೀಸರ ಮುಂದೆ ನಟಿಸಿದ್ದಾರೆ. ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿದ್ದವರಲ್ಲಿ ಬಹುತೇಕರು ಹೊರರಾಜ್ಯದವರು ಎಂದು ತಿಳಿದು ಬಂದಿದೆ. ಕೇರಳ, ಉತ್ತರ ಪ್ರದೇಶ ಮೂಲದವರು ಭಾಗಿ ಮಾಹಿತಿ ಸಿಕ್ಕಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಸೇರಿದಂತೆ ಕನ್ನಡದ ವಿದ್ಯಾರ್ಥಿಗಳೂ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಜಂಗಲ್ ಸಫಾರಿ ಹೆಸರಿನಲ್ಲಿ ರೇವ್ ಪಾರ್ಟಿ
ಡ್ರಗ್ಸ್ ಪೆಡ್ಲರ್‌ಗಳು, ರಷ್ಯಾದಿಂದ ಮಾಡೆಲ್, ಡಿಜೆ ಕರೆಸಿ ಜಂಗಲ್ ಸಫಾರಿ ಹೆಸರಿನಲ್ಲಿ ಈ ರೇವ್ ಪಾರ್ಟಿ ನಡೆಸುತ್ತಿದ್ದರು ಎಂಬುವುದ ತಿಳಿದು ಬಂದಿದೆ. ಮೊದಲು‌ ಇನ್‌ಸ್ಟಾ ಗ್ರಾಂನಲ್ಲಿ ಪಾರ್ಟಿಗೆ ಸದಸ್ಯರ ಆಯ್ಕೆ ಮಾಡಿ ಬಳಿಕ ಎಲ್ಲರೂ ಗೌಪ್ಯವಾಗಿ ಒಂದೆಡೆ ಸೇರಲು ಸ್ಕ್ಯಾನರ್ ಬಳಕೆ ಮಾಡಲಾಗಿದೆ. ಹೆಸರು ನೋಂದಣಿಗೆ 1000, 2000, 5000 ರೂ. ನಿಗದಿ ಮಾಡಿದ್ದಾರೆ. ಸ್ಕ್ಯಾನ್ ಆದರೆ ಮಾತ್ರ ರೇವ್ ಪಾರ್ಟಿ ಒಳಗಡೆ ಪ್ರವೇಶ ನೀಡಲಾಗುತ್ತಿದ್ದು ಒಳಗೆ ಪ್ರವೇಶದ ವೇಳೆ ಬಲಗೈಗೆ ಮ್ಯೂಸಿಕ್ ಕಂಪನಿಯ ಗುರುತಿನ ಸೀಲ್ ಒತ್ತುವ ಮೂಲಕ ಒಳಗಡೆ ಎಂಟ್ರಿ ಕೊಡಲಾಗುತ್ತಿತ್ತು. ಜಂಗಲ್ ಸಫಾರಿ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಡ್ರಗ್ಸ್ ಪೆಡ್ಲರ್‌ಗಳಿಂದ ನೇರವಾಗಿ ಡ್ರಗ್ಸ್ ಖರೀದಿಸಿ ಮೋಜು ಮಸ್ತಿ ಮಾಡಲಾಗುತ್ತಿತ್ತು.

ಇದನ್ನೂ ಓದಿ: ಹಾಸನ ರೆಸಾರ್ಟ್​ನಲ್ಲಿ ರೇವ್ ಪಾರ್ಟಿ; ಮಹಿಳಾ ಕಾನ್ಸ್ಟೇಬಲ್ ಅಮಾನತು

Read Full Article

Click on your DTH Provider to Add TV9 Kannada