ಚೆನ್ನೈ: ತನ್ನ ಲವ್ ಸ್ಟೋರಿಗೆ ಗೆಳೆಯನೇ ಅಡ್ಡಿಯಾದನೆಂಬ ಕೋಪದಲ್ಲಿ 17 ವರ್ಷದ ಯುವಕನೊಬ್ಬ ಆಪ್ತ ಸ್ನೇಹಿತನ ತಲೆ ಕತ್ತರಿಸಿ, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತುಟಿಕೊರಿನ್ ಜಿಲ್ಲೆಯಲ್ಲಿ ನಡೆದಿದೆ. ತ್ರಿಕೋನ ಪ್ರೇಮಕತೆಯಿಂದಾಗಿ ಒಬ್ಬ ಯುವಕ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಯುವಕರ ಹುಚ್ಚಾಟದಲ್ಲಿ ಕೊಲೆ ನಡೆದ ಈ ಪ್ರಕರಣಕ್ಕೆ ತಮಿಳುನಾಡು ಬೆಚ್ಚಿಬಿದ್ದಿದೆ.
22 ವರ್ಷದ ಮದನ್ ಕುಮಾರ್ ಎಂಬಾತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೋವಿಲ್ಪಟ್ಟಿಯ ಸ್ಟಾಲಿನ್ ಕಾಲೋನಿಯಲ್ಲಿ ವಾಸವಾಗಿದ್ದ ಈತ ಜುಲೈ 29ರಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಆತನಿಗಾಗಿ ಮನೆಯವರು ಎಲ್ಲ ಕಡೆಯೂ ಹುಡುಕಿದ್ದರು. ಕೊನೆಗೆ ಆತನ ಮೃತದೇಹ ಮಾರನೇ ದಿನ ಬೆಳಗ್ಗೆ ಪತ್ತೆಯಾಗಿತ್ತು. ಆತನ ತಲೆ ಮತ್ತು ದೇಹ ಒಂದೊಂದು ಕಡೆ ಬಿದ್ದಿತ್ತು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಮೃತಪಟ್ಟ ಯುವಕನ ಸ್ನೇಹಿತನ ಬಗ್ಗೆ ಗೊತ್ತಾಗಿತ್ತು. ಬೇರೆ ಗ್ರಾಮದವನಾದ 17 ವರ್ಷದ ಯುವಕ ಕೂಡ ಮದನ್ ಜೊತೆಗೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಮದನ್ನ ಊರಿನ 16 ವರ್ಷದ ಯುವತಿಯನ್ನು ಆತ ಪ್ರೀತಿಸುತ್ತಿದ್ದ. 9ನೇ ಕ್ಲಾಸ್ವರೆಗೂ ಓದಿದ್ದ ಆಕೆ ಬಳಿಕ ಶಾಲೆ ಬಿಟ್ಟು ಮನೆಯಲ್ಲಿದ್ದಳು. ಆಕೆಯ ಜೊತೆಗೆ ಈ ಇಬ್ಬರೂ ಯುವಕರು ಆಪ್ತರಾಗಿದ್ದರು. ಆದರೆ, ಆಕೆಗೆ ಮೃತಪಟ್ಟ ಮದನ್ ಕುಮಾರ್ ಹೆಚ್ಚು ಆತ್ಮೀಯನಾಗಿದ್ದ.
ಆದರೆ, ಆಕೆಯನ್ನು ಬಹಳ ಪ್ರೀತಿಸುತ್ತಿದ್ದ ಆರೋಪಿ ಯುವಕನಿಗೆ ತನ್ನ ಪ್ರೀತಿಗೆ ಗೆಳೆಯ ಮದನ್ ಅಡ್ಡಿಯಾಗುತ್ತಿದ್ದಾನೆ ಎಂಬ ಆತಂಕ ಆತನನ್ನು ಕಾಡುತ್ತಿತ್ತು. ಹೀಗಾಗಿ, ಆತನನ್ನು ಕೊಲ್ಲಲು ನಿರ್ಧರಿಸಿದ್ದ. ಹೀಗಾಗಿ, ಜುಲೈ 29ರಂದು ಗೆಳೆಯನನ್ನು ಆಲ್ಕೋಹಾಲ್ ಕುಡಿಯಲು ಆಹ್ವಾನಿಸಿದ್ದ. ಎಣ್ಣೆ ಪಾರ್ಟಿಗೆಂದು ಸ್ನೇಹಿತನ ಮನೆಗೆ ಬಂದಿದ್ದ ಮದನ್ ದುರಂತ ಅಂತ್ಯ ಕಂಡಿದ್ದಾನೆ.
ಬೈಕ್ನಲ್ಲಿ ಗೆಳೆಯನ ತೋಟಕ್ಕೆ ಬಂದಿದ್ದ ಮದನ್ ಎಣ್ಣೆ ಪಾರ್ಟಿ ಮಾಡಿದ್ದ. ಮದನ್ ಕುಡಿದು ಟೈಟ್ ಆಗುವುದನ್ನೇ ಕಾಯುತ್ತಿದ್ದ ಆರೋಪಿ ಆತನ ತಲೆಯನ್ನು ಕಡಿದು, ಹತ್ಯೆ ಮಾಡಿದ್ದ. ನಂತರ ಆತನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡು, ಮದನನ ತಲೆ ಮತ್ತು ತುಂಡಾದ ದೇಹವನ್ನು ಸ್ವಲ್ಪ ದೂರದಲ್ಲಿದ್ದ ಹೊಂಡದಲ್ಲಿ ಹಾಕಿದ್ದ.
ಆರೋಪಿ ಅಪ್ರಾಪ್ತನಾಗಿದ್ದರಿಂದ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಬಾಲಾಪರಾಧಿ ಎಂದು ಪರಿಗಣಿಸಿ, ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ: Crime News: ಆನ್ಲೈನ್ ಗೇಮ್ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ
Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!
(Tamil Nadu 17 Year Old Murders his Friend and Beheaded Body over Love Affair Triangle Love Story)