ಹಳೇ ದ್ವೇಷಕ್ಕೆ ಭೀಕರ ಹತ್ಯೆ; ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ

|

Updated on: Sep 04, 2023 | 5:27 PM

ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೂ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಪಲ್ಲಡಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹಳೇ ದ್ವೇಷಕ್ಕೆ ಭೀಕರ ಹತ್ಯೆ; ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ
ಸಾಂದರ್ಭಿಕ ಚಿತ್ರ
Follow us on

ತಿರುಪ್ಪೂರ್: ತಮಿಳುನಾಡಿನ (Tamil Nadu) ತಿರುಪ್ಪೂರ್ ಜಿಲ್ಲೆಯ ಪಲ್ಲಡಂನಲ್ಲಿ ಹಳೇ ದ್ವೇಷಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಅದೇ ಊರಿನ ಮೂವರು ವ್ಯಕ್ತಿಗಳು ಹಳೆಯ ದ್ವೇಷದ ಕಾರಣದಿಂದ ನಾಲ್ವರನ್ನು ಕೊಚ್ಚಿ ಕೊಂದಿದ್ದಾರೆ (Murder News) ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪರಾಧಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೂ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಪಲ್ಲಡಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಟ್ಯೂಟರ್​ನ ಕತ್ತು ಸೀಳಿ ಹತ್ಯೆ ಮಾಡಿದ ಬಾಲಕ

ಪೊಲೀಸರ ಪ್ರಕಾರ, ಮೃತರನ್ನು ಸೆಂಥಿಲ್ ಕುಮಾರ್, ಅವರ ತಾಯಿ ಪುಷ್ಪಾವತಿ, ಸೋದರಸಂಬಂಧಿ ಮೋಹನ್ ಮತ್ತು ಇನ್ನೊಬ್ಬ ಸಂಬಂಧಿ ರತ್ನಾಂಬಳ್ ಎಂದು ಗುರುತಿಸಲಾಗಿದೆ. ಪಲ್ಲಡಂನ ಕಲ್ಲಕಿನಾರುನಲ್ಲಿರುವ ಸೆಂಥಿಲ್ ಕುಮಾರ್ ಅವರ ಅಂಗಡಿಯ ಸಮೀಪವಿರುವ ಮನೆಯ ಬಳಿ ಅವರೆಲ್ಲರ ಮೃತದೇಹಗಳು ಪತ್ತೆಯಾಗಿವೆ. ಆ ಶವಗಳ ಮೇಲೆ ಮಚ್ಚಿನಿಂದ ಕೊಚ್ಚಿದ ಹಲವಾರು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪೋಷಕರ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಸಹೋದರಿಯರು

ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೆಂಥಿಲ್ ಕುಮಾರ್ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬಾತ ಸೆ. 3ರಂದು ರಾತ್ರಿ ಸೆಂಥಿಲ್ ಕುಮಾರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದ್ದ. ಆಗ ಆತನಿಗೆ ಇನ್ನಿಬ್ಬರು ಸ್ನೇಹಿತರು ಸಾಥ್ ನೀಡಿದ್ದರು. ಈ ವೇಳೆ ಸೆಂಥಿಲ್ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ. ಆಗ ಅವರ ಕೂಗನ್ನು ಕೇಳಿ, ಅವರ ಸೋದರಸಂಬಂಧಿ, ತಾಯಿ ಮತ್ತು ಇನ್ನೊಬ್ಬ ಸಂಬಂಧಿ ಅವರನ್ನು ರಕ್ಷಿಸಲು ಧಾವಿಸಿದರು. ಆಗ ಆರೋಪಿಗಳು ಅವರೆಲ್ಲರನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Mon, 4 September 23