ಆನ್​ಲೈನ್ ಡೇಟಿಂಗ್ ಆ್ಯಪ್​ ಮೂಲಕ ಯುವಕನಿಗೆ ಕಿರುಕುಳ: ಕ್ರಮಕೈಗೊಳ್ಳುವಂತೆ ಬಾಲಿವುಡ್ ನಿರ್ದೇಶಕಿ ಬೆಂಗಳೂರು ಪೊಲೀಸರಿಗೆ ಮನವಿ ​

| Updated By: ವಿವೇಕ ಬಿರಾದಾರ

Updated on: Jan 16, 2024 | 7:34 AM

ಆನ್​ಲೈನ್ ಡೇಟಿಂಗ್ ಆ್ಯಪ್​ ಮೂಲಕ ಯುವಕನಿಗೆ ಲೈಂಗಿಕ ಕಿರುಕುಳ ನಿಡುತ್ತಿರುವ ಮಹಿಳೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಾಲಿವುಡ್ ನಿರ್ದೇಶಕಿ ದೀಪಿಕಾ ನಾರಾಯಣ ಭಾರದ್ವಾಜ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಆನ್​ಲೈನ್ ಡೇಟಿಂಗ್ ಆ್ಯಪ್​ ಮೂಲಕ ಯುವಕನಿಗೆ ಕಿರುಕುಳ: ಕ್ರಮಕೈಗೊಳ್ಳುವಂತೆ ಬಾಲಿವುಡ್ ನಿರ್ದೇಶಕಿ ಬೆಂಗಳೂರು ಪೊಲೀಸರಿಗೆ ಮನವಿ ​
ಬೆಂಗಳೂರು ಪೊಲೀಸ್​
Follow us on

ಬೆಂಗಳೂರು, ಜನವರಿ 16: ಆನ್​ಲೈನ್ ಡೇಟಿಂಗ್ ಆ್ಯಪ್‌​ ಮೂಲಕ ಯುವಕನಿಗೆ (Boy) ಲೈಂಗಿಕ ಕಿರುಕುಳ ನಿಡುತ್ತಿರುವ ಮಹಿಳೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಾಲಿವುಡ್ ನಿರ್ದೇಶಕಿ (Bollywood director) ದೀಪಿಕಾ ನಾರಾಯಣ ಭಾರದ್ವಾಜ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ದೀಪಿಕಾ ನಾರಾಯಣ ಭಾರದ್ವಾಜ್​ ಅವರು ಸರಣಿ ಟ್ವೀಟ್​ ಮಾಡಿ ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಓರ್ವ ಯುವಕ ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯನ್ನು ಭೇಟಿಯಾಗಿದ್ದಾನೆ. ನಂತರ ಮಹಿಳೆ ಯುವಕನೊಂದಿಗೆ ಆತ್ಮೀಯವಾಗಿರಲು ಮುಂದಾಗಿದ್ದಾಳೆ. ನಂತರ ಮಹಿಳೆ ಭೇಟಿಯಾಗುವಂತೆ ಯುವಕನ ದುಂಬಾಲು ಬೀಳುತ್ತಾಳೆ. ಆದರೆ ಯುವಕ ಇದನ್ನು ತಿರಸ್ಕರಿಸಿದ್ದಾನೆ. ಕೆಲ ದಿನಗಳ ಬಳಿಕ ಮಹಿಳೆ ಯುವಕನಿಗೆ ಹಣ ಕೇಳಲು ಆರಂಭಿಸುತ್ತಾಳೆ. ಆಗ ಯುವಕ ಹಣ ನೀಡಲು ನಿರಾಕರಿಸಿದ್ದಾನೆ. ಬಳಿಕ ಮಹಿಳೆ ಯುವಕನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿನ ಸೈಬರ್​ ಕ್ರೈಂ ಪ್ರಕರಣಗಳ ಪತ್ತೆಗೆ ನಾಲ್ವರು ಡಿಸಿಪಿಗಳ ನೇಮಕ

ಅಲ್ಲದೇ ಮಹಿಳೆ ದೈಹಿಕ ಸಂಬಂಧ ಬೆಳಸಲು ಒತ್ತಾಯಿಸುತ್ತಾಳೆ. ಆದರೆ ಯುವಕ ತಿರಸ್ಕರಿಸುತ್ತಾನೆ. ಆದರೂ ಬಿಡದ ಮಹಿಳೆ ” ನಿನ್ನ (ಯುವಕ) ಭಾವಚಿತ್ರವನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಾಡುವುದಾಗಿ ಬೆದರಿಸಿ ಕಿರುಕುಳ ನೀಡಲು ಆರಂಭಿಸುತ್ತಾಳೆ. ಹೀಗೆ ಮಾಡಬಾರದಿದ್ದರೇ ಹಣ ನೀಡುವಂತೆ ಕಿರುಕುಳ ನೀಡಿ ಧಮ್ಕಿ ಹಾಕಿದ್ದಾಳೆ. ಇದರಿಂದ ಬೇಸತ್ತ ಯುವಕ ಪೊಲೀಸ್​ ಠಾಣೆಗೆ ದೂರು ನೀಡಲು ಹೋಗಿದ್ದಾರೆ.
ಠಾಣೆಯಲ್ಲಿ ಪೊಲೀಸರು ಮಹಿಳೆ ನಿಮ್ಮ ವಿರುದ್ಧ ದೂರು ನೀಡಿದರೆ ನಾವು ನಿಮ್ಮನ್ನು ಬಂಧಿಸಬೇಕಾಗುತ್ತದೆ, ಆದ್ದರಿಂದ ನೀವು ನಿಜವಾಗಿಯೂ ದೂರು ನೀಡಲು ಬಯಸುತ್ತೀರಾ? ಎಂದು ಯುವಕನಿಗೆ ಕೇಳಿದ್ದಾರೆ. ಇದರಿಂದ ಯುವಕ ಡಿಪ್ರೆಶನ್​ಗೆ ಒಳಗಾಗಿದ್ದಾನೆ.

ಇನ್ನು ಯುವಕನೊಂದಿಗೆ ಮಾತನಾಡಿದ್ದೇನೆ ಮತ್ತು ಅವನಿಗೆ ಹೋರಾಡಲು ಆತ್ಮವಿಶ್ವಾಸವನ್ನು ನೀಡಿದ್ದೇನೆ. ಅಲ್ಲದೇ ಸಂಬಂಧಪಟ್ಟ ಬೆಂಗಳೂರು ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿದ್ದೇನೆ. ಆ ವ್ಯಕ್ತಿ ಪೊಲೀಸರೊಂದಿಗೆ ಮಾತನಾಡಿದ್ದಾನೆ ಮತ್ತು ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಯುವಕ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ ಎಂದು ಎಕ್ಸ್​​ (ಟ್ವಿಟರ್​)ನಲ್ಲಿ ಪೋಸ್ಟ್​ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ