ನವದೆಹಲಿ: ಜನವರಿ 1ರಂದು ರಾತ್ರಿ ನವದೆಹಲಿಯ(Delhi Accident)) ಸುಲ್ತಾನ್ಪುರಿ ಪ್ರದೇಶದಲ್ಲಿ ಅಂಜಲಿ ಎನ್ನುವ ಯುವತಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಕಿ.ಮೀ.ಗಟ್ಟಲೆ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಎಳೆದೊಯ್ಯುವ ಮುನ್ನ ಕೊಂದು ಹಾಕಿರಬಹುದು ಎಂದು ಶಂಕಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಿಗ ಮೃತ ಯುವತಿ ಅಂಜಲಿ ಮರಣೋತ್ತರ ಪರೀಕ್ಷೆ ವರದಿ(post mortem report) ಬಹಿರಂಗವಾಗಿದ್ದು, ಅತ್ಯಾಚಾರ ಮಾಡಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಕಿಲೋಮೀಟರ್ಗಟ್ಟಲೇ ಕಾರು ಎಳೆದುಕೊಂಡು ಹೋಗಿದ್ದರಿಂದ ಆಕೆಯ ದೇಹದ ಬಹುತೇಕ ಎಲ್ಲಾ ಭಾಗಗಳಲ್ಲಿ ಗಾಯಗಳಾಗಿವೆ. ಅಲ್ಲದೇ ದೇಹದ ಹಿಂಬದಿಯ ಚರ್ಮ ಕಿತ್ತುಹೋಗಿ ಪಕ್ಕೆಲುಬುಗಳು ಕೂಡ ಹೊರಗೆ ಕಾಣಿಸುತ್ತಿದ್ದವು. ಹಾಗೇ ಅಂಜಲಿ ಮೆದುಳು ನಾಪತ್ತೆಯಾಗಿದೆ. ಆದ್ರೆ, ಅತ್ಯಾಚಾರ ಮಾಡಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಬದಲಾಗಿ ಅಘಾತದಿಂದ ರಕ್ತಸ್ರಾವವಾಗಿ ಮೃತಟ್ಟಿದ್ದಾಳೆ ಎನ್ನುವ ಅಂಶ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸುಲ್ತಾನ್ಪುರಿ ಪೊಲೀಸ್ ಠಾಣೆಗೆ ಇಂದು(ಜನವರಿ 04) FSL ತಜ್ಞರು ಭೇಟಿ ನೀಡಿದ್ದು, ಯುವತಿಗೆ ಡಿಕ್ಕಿ ಹೊಡೆಸಿ ಎಳೆದೊಯ್ದಿದ್ದ DL 8CAY 6414 ನಂಬರ್ನ ಕಾರು ಪರಿಶೀಲನೆ ಮಾಡಿದರು.
ಜನವರಿ 01ರಂದು ನಸುಕಿನ ವೇಳೆ ಅಂಜಲಿ ಸ್ಕೂಟರ್ ಅಪಘಾತಕ್ಕೀಡಾಗಿತ್ತು. ಕಾರಿನ ಚಕ್ರಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡು ಕಿಲೋಮೀಟರ್ ವರೆಗೂ ಎಳೆದೊಯ್ದಿತ್ತು. ದೇಹ ರಸ್ತೆ ಬದಿಯಲ್ಲಿ ಅಂಜಲಿ ಸಿಂಗ್ ಅವರ ಮೃತದೇಹದ ಮೇಲೆ ಬಟ್ಟೆಗಳೇ ಇರಲಿಲ್ಲ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗರಬಹುದು ಎಂದು ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲದೇ ಈ ಬಗ್ಗೆ ಯುವತಿಯ ತಾಯಿಯೂ ಸಹ ಶಂಕೆ ವ್ಯಕ್ತಪಡಿಸಿದ್ದರು.
ಸುಲ್ತಾನ್ಪುರಿ ಪ್ರದೇಶದಲ್ಲಿ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಆಕೆಯ ಕಾಲು ಆಕ್ಸೆಲ್‌ಗೆ ಸಿಕ್ಕಿಕೊಂಡಿತ್ತು. ಒಳಗಿದ್ದ ಐವರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದರಿಂದ ತಮಗೆ ಇದರ ಪರಿವೇ ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಕಾರು ಮುಂದೆ ಸಾಗಿದಂತೆ, ಅಂಜಲಿಯ ದೇಹ ನೆಲದ ಮೇಲೆಯೇ ಹೋಗುತ್ತಿತ್ತು. ಇದರಿಂದ ಬಟ್ಟೆಗಳು ಹರಿದುಹೋಗಿವೆ ಎನ್ನಲಾಗಿದೆ. ಕೊನೆಗೂ ಕಾರಿನಲ್ಲಿದ್ದ ಒಬ್ಬಾತ ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಕಾರಿನ ಅಡಿ ಆಕೆಯ ಕೈ ಕಂಡಿದ್ದ. ತಿರುವು ಪಡೆಯುವಾಗ ದೇಹ ಬಿದ್ದಿದ್ದರಿಂದ ಗಾಬರಿಗೊಂಡಿದ್ದ ಅವರು, ಅಲ್ಲಿಂದ ಪರಾರಿಯಾಗಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ