ದೆಹಲಿ: ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕ್ಯಾಬ್​ನಲ್ಲಿ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದ ಯುವಕ

|

Updated on: Oct 13, 2023 | 11:28 AM

ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ತನ್ನ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ. ಇಂಟರ್​ವ್ಯೂ ಇತ್ತೆಂದು ಬೆಳಗ್ಗೆ 6.30ಕ್ಕೆ ಮನೆ ಬಿಟ್ಟಿದ್ದಳು, ಆರೋಪಿಯನ್ನು ಆಕೆ ಪ್ರೀತಿಸುತ್ತಿದ್ದಳು, ಕೆಲವು ದಿನದಿಂದ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈ ಕೋಪದಿಂದ ಮಹಿಳೆಯ ಮುಖ, ತೊಡೆ ಸೇರಿದಂತೆ ಹಲವೆಡೆ 13 ಬಾರಿ ಇರಿದಿದ್ದಾನೆ. ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ದೆಹಲಿ: ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕ್ಯಾಬ್​ನಲ್ಲಿ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದ ಯುವಕ
ಪೊಲೀಸ್
Image Credit source: India TV
Follow us on

ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ತನ್ನ ಗೆಳತಿಗೆ 13 ಬಾರಿ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ. ಇಂಟರ್​ವ್ಯೂ ಇತ್ತೆಂದು ಬೆಳಗ್ಗೆ 6.30ಕ್ಕೆ ಮನೆ ಬಿಟ್ಟಿದ್ದಳು, ಆರೋಪಿಯನ್ನು ಆಕೆ ಪ್ರೀತಿಸುತ್ತಿದ್ದಳು, ಕೆಲವು ದಿನದಿಂದ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈ ಕೋಪದಿಂದ ಮಹಿಳೆಯ ಮುಖ, ತೊಡೆ ಸೇರಿದಂತೆ ಹಲವೆಡೆ 13 ಬಾರಿ ಇರಿದಿದ್ದಾನೆ. ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಯುವತಿಯ ತಾಯಿ ಶಕುಂತಲಾ ಮಾತನಾಡಿ, ಮಗಳು ಲಜಪತ್​ನಗರದಲ್ಲಿ ಇಂಟರ್​ವ್ಯೂಗೆಂದು ಹೋಗುತ್ತಿದ್ದಳು, ಕ್ಯಾಬ್​ನಲ್ಲಿ ಯುವಕ ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾರೆ. ಆಫೀಸ್​ಗೆ ಹೋಗಲು ತಡವಾಗುತ್ತಿದೆ, ಮತ್ತೆ ನಿನ್ನೊಂದಿಗೆ ಮಾತನಾಡಲು ನನಗೆ ಇಷ್ಟವೂ ಇಲ್ಲ ಎಂದು ಎಷ್ಟೇ ಹೇಳಿದರೂ ಕ್ಯಾಬ್​ನಲ್ಲಿ ಕುಳಿತುಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದ, ಕುಳಿತುಕೊಂಡ ಬಳಿಕ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಕಳೆದ 2 ವರ್ಷಗಳಿಂದ ಪ್ರೀತಿ ಮಾಡುವಂತೆ ಆಕೆಯನ್ನು ಪೀಡಿಸುತ್ತಿದ್ದ ಎಂದು ದೂರಿದ್ದಾಳೆ.

ಆಕೆ ಆ ಯುವಕನನ್ನು ಪ್ರೀತಿ ಮಾಡಿಲ್ಲ, ಮನೆಯಲ್ಲಿ ತಂದೆ ಇಲ್ಲದ ಕಾರಣ ನಮ್ಮೆಲ್ಲರ ಜವಾಬ್ದಾರಿ ಆಕೆಯ ಮೇಲಿದೆ, ಕೋರ್ಟ್​ ಮ್ಯಾರೇಜ್ ಆಗೋಣ ಎಂದು ಆತ ಕೇಳಿದ್ದ ಆದರೆ ಆಕೆ ಒಪ್ಪಿರಲಿಲ್ಲ. ಕ್ಯಾಬ್ ಚಾಲಕನೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ಇಬ್ಬರು ಒಂದೇ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿದ್ದರು.

ಮತ್ತಷ್ಟು ಓದಿ: ಕ್ಯಾಬ್​ ಬುಕ್ ಮಾಡಿ ರದ್ದುಗೊಳಿಸಿದ್ದಕ್ಕೆ ಮಹಿಳೆಯ ವಾಟ್ಸಪ್​ಗೆ ನಗ್ನ ವಿಡಿಯೋ, ಫೋಟೋಸ್ ಕಳುಹಿಸಿದ ಚಾಲಕ

ಅಕ್ಟೋಬರ್ 10 ರಂದು, ಮಹಿಳೆ ತನಗೆ ಪಾಲ್ ಕಿರುಕುಳ ನೀಡುತ್ತಿದ್ದಾನೆ ಎಂದು ಪಿಸಿಆರ್ ಕರೆ ಮಾಡಿದ್ದಳು. ವಾಯುವ್ಯ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಬಾಲಕಿಯನ್ನು ಯುವಕನೊಬ್ಬ 20 ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದ. ಆರೋಪಿ ಸಾಹಿಲ್ (20)ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಲಾಗಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ