AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಮಾರಕಾಸ್ತ್ರಗಳಿಂದ ಕೊಚ್ಚಿ ವಿದ್ಯುತ್ ಬಿಲ್ ಕಲೆಕ್ಟರ್ ಬರ್ಬರ ಹತ್ಯೆ

ಬೈಕ್‌ಗಳ ಮೇಲೆ ಬಂದಿದ್ದ ದುಷ್ಕರ್ಮಿಗಳು, ಬಿಲ್ ಕಲೆಕ್ಟರ್​ ಆಗಿರುವ ರಜಾಕ್ ಕವಲಗೇರಿ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ: ಮಾರಕಾಸ್ತ್ರಗಳಿಂದ ಕೊಚ್ಚಿ ವಿದ್ಯುತ್ ಬಿಲ್ ಕಲೆಕ್ಟರ್ ಬರ್ಬರ ಹತ್ಯೆ
ಪ್ರಾತಿನಿಧಿಕ ಚಿತ್ರ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Oct 13, 2023 | 10:08 PM

Share

ಧಾರವಾಡ, ಅ.13: ಮಾರಕಾಸ್ತ್ರಗಳಿಂದ ಕೊಚ್ಚಿ ವಿದ್ಯುತ್ ಬಿಲ್ ಕಲೆಕ್ಟರ್(Electricity Bill Collector)​ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಹಳಿಯಾಳ ಬೈಪಾಸ್ (Haliyal Bypass) ರಸ್ತೆಯಲ್ಲಿ ನಡೆದಿದೆ. ಬೈಕ್‌ಗಳ ಮೇಲೆ ಬಂದಿದ್ದ ಯುವಕರಿಂದ ರಜಾಕ್ ಕವಲಗೇರಿ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ಯಾಂಟರ್ ಹರಿದು ಬೈಕ್​ ಸವಾರ ಸ್ಥಳದಲ್ಲೇ ದುರ್ಮರಣ

ಕೊಡಗು: ಜಿಲ್ಲೆಯ ಮಡಿಕೇರಿ‌ ಹೊರವಲಯದ ಬೋಯಿಕೇರಿ‌ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದಿದ್ದ ಬೈಕ್​ ಸವಾರನ ಮೇಲೆ ಕ್ಯಾಂಟರ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಘಟನೆ ನಡೆದಿದೆ. ಭೈರವ(30) ಸಾವನ್ನಪ್ಪಿದ ವ್ಯಕ್ತಿ. ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:ಮಂಡ್ಯ: ಅಂಗಡಿಯಲ್ಲಿ ಕೂತು ಟೀ ಕುಡಿಯುತ್ತಿದ್ದ ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಟಾಟಾ ಏಸ್ ವಾಹನ ಪಲ್ಟಿ; 15 ಜನ ಕೂಲಿ ಕಾರ್ಮಿಕರಿಗೆ ಗಾಯ

ವಿಜಯಪುರ: ರಸ್ತೆಯಲ್ಲಿ ಅಡ್ಡ ಬಂದ ಎಮ್ಮೆಯನ್ನು ತಪ್ಪಿಸಲು ಹೋಗಿ ಕೂಲಿ ಕಾರ್ಮಿಕರನ್ನು ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ 15 ಜನ ಕೂಲಿ ಕಾರ್ಮಿಕರಿಗೆ ಗಾಯವಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಂಗಮುರಾಳ ಗ್ರಾಮದ ಬಳಿ ನಡೆದಿದೆ. ಕೂಡಲೇ ಗಾಯಗೊಂಡಿದ್ದ 15 ಜನ ಕೂಲಿ ಕಾರ್ಮಿಕರಿಗೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಗಾಯಗೊಂಡ 15 ಜನರ ಪೈಕಿ 4 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳುಗಳು ಮುದ್ದೇಬಿಹಾಳ ತಾಲೂಕಿನ ಹುಲಗಬಾಳ ಗ್ರಾಮದವರಾಗಿದ್ದು, ಜಮೀನಿನಲ್ಲಿ ಕಸ ತೆಗೆಯುವ ಕೆಲಸ ಮುಗಿಸಿ ವಾಪಸ್ ತಮ್ಮೂರಿಗೆ ತೆರಳುತ್ತಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ