ದೆಹಲಿ ಶಾಸ್ತ್ರಿ ಪಾರ್ಕ್ ಬಳಿ ಜನ ನಿಬಿಡ ಪ್ರದೇಶದಲ್ಲಿ ವ್ಯಕ್ತಿಗೆ ನಾಲ್ವರಿಂದ ಚಾಕು ಇರಿತ, ಗುಂಡಿನ ದಾಳಿ
ದೆಹಲಿಯ ಶಾಸ್ತ್ರಿ ಪಾರ್ಕ್ ಬಳಿಕ ಜನನಿಬಿಡ ಪ್ರದೇಶದಲ್ಲಿ ಯುವಕನ ಮೇಲೆ ನಾಲ್ವರು ದಾಳಿ ನಡೆಸಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಾರ್ಕ್ ಬಳಿ ಎಲ್ಲೆರೆದುರೆ ಯುವಕನ ಮೇಲೆ ನಾಲ್ವರು ಚಾಕುವಿನಿಂದ ಇರಿದಿದ್ದಾರೆ ಜತೆಗೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಾಲ್ವರು ಬ್ಯಾಗ್ ತಯಾರಕರಾದ ಸಮೀರ್ ಅಹ್ಮದ್ ಅವರನ್ನು ಹಿಂಬಾಲಿಸಿದ್ದರು ಮತ್ತು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ, ದಾಳಿಕೋರರು ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಸಮೀರ್‌ಗೆ ಎರಡೂ ಕಾಲುಗಳಿಗೆ ಗಾಯಗಳಾಗಿದ್ದು, ಆರಂಭದಲ್ಲಿ ಜೆಪಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಜಿಟಿಬಿ ಆಸ್ಪತ್ರೆಗೆ ಮತ್ತು ನಂತರ ಆರ್‌ಎಂಎಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಿಕ್ಕಿರಿದ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಜನರು ಓಡಿಹೋಗುವುದನ್ನು ಕಾಣಬಹುದಾಗಿದೆ. ವ್ಯಕ್ತಿಗೆ ಓಡಲಾಗದೆ ನೆಲದ ಮೇಲೆ ಮಲಗಿದ್ದ, ಆರೋಪಿಗಳಲ್ಲಿ ಓರ್ವ ಸ್ಕೂಟಿಯಲ್ಲಿ ಓಡಿ ಹೋದರೆ ಉಳಿದ ಮೂವರು ಆರೋಪಿಗಳು ಅದೇ ಸ್ಕೂಟಿ ಹಿಂಬಾಲಿಸಿ ಓಡಿ ಹೋಗಿದ್ದಾರೆ.
ಮತ್ತಷ್ಟು ಓದಿ: ಗಾಜಿಯಾಬಾದ್: ಮೂರನೇ ಮಹಡಿಯಿಂದ ಪತ್ನಿಯನ್ನು ತಳ್ಳಿ ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ
ಪ್ರಕರಣದಲ್ಲಿ ನಾಲ್ವರು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ- ಬಿಲಾಲ್, ಸೌದ್, ಫಿರೋಜ್ ಮತ್ತು ಸಲೀಂ. ಆರೋಪಿಗಳ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಯುವಕ ಹಾಗೂ ನಾಲ್ವರು ಆರೋಪಿಗಳು ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದಾಗ ಸಮೀರ್ ಬಿಲಾಲ್‌ಗೆ ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಬಿಲಾಲ್ ಮತ್ತು ಆತನ ಮೂವರು ಸ್ನೇಹಿತರು ಸಮೀರ್ ಮೇಲೆ ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ