ಗಾಜಿಯಾಬಾದ್: ಮೂರನೇ ಮಹಡಿಯಿಂದ ಪತ್ನಿಯನ್ನು ತಳ್ಳಿ ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ
ಪತಿ ಪತ್ನಿ ನಡುವೆ ಜಗಳ ನಡೆದಿದ್ದು, ಅದು ತಾರಕಕ್ಕೇರಿ ಕೋಪದಿಂದ ಪತಿಯೊಬ್ಬ ಪತ್ನಿಯನ್ನು 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಬಳಿಕ ಮಹಿಳೆ ಸಾವನ್ನಪ್ಪಿದ್ದು, ಆರೋಪಿ ವಿಕಾಸ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ, ಪೊಲೀಸರ ಪ್ರಕಾರ ಗೋವಿಂದಪುರಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಪಾರ್ಕಿಂಗ್ ಗುತ್ತಿಗೆದಾರರಾದ ಕುಮಾರ್ ಅವರು ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದ ಮತ್ತು 30 ರ ಹರೆಯದ ಅವರ ಪತ್ನಿ ಜತೆಗೆ ತೀವ್ರ ಜಗಳವಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯನ್ನು ಮೂರನೇ ಮಹಡಿಯಿಂದ ಎಸೆದ ನಂತರ, ಆತನೇ ಪತ್ನಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದನು, ಅಲ್ಲಿ ವೈದ್ಯರು ಆಕೆ ಸತ್ತಿದ್ದಾಳೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಬಾಗಲಕೋಟೆ: ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿಸಿದ್ದ ಮಗ, ಸೊಸೆ ಅರೆಸ್ಟ್
ಪೊಲೀಸರಿಗೆ ಮಾಹಿತಿ ನೀಡುವಂತೆ ವೈದ್ಯರು ಸಿಬ್ಬಂದಿಯನ್ನು ಕೇಳಿದಾಗ ಕುಮಾರ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಕೆಲವು ಗಂಟೆಗಳ ನಂತರ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಕುಮಾರ್ ವಿರುದ್ಧ ಕೊಲೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಅವರನ್ನು ಶನಿವಾರ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ