ಬೆಂಗಳೂರು: ಬಾರ್​​ನಲ್ಲಿ ಶುರುವಾದ ಗೆಳೆಯರ ಗಲಾಟೆ ಮನೆ ಮುಂದೆ ಕೊಲೆಯಲ್ಲಿ ಅಂತ್ಯ

ದೊಡ್ಡಮ್ಮ ನೀಡಿದ 3 ಸಾವಿರ ರೂ. ತೆಗೆದುಕೊಂಡು ಸ್ನೇಹಿತರನ್ನು ಕರೆದುಕೊಂಡು ದರ್ಶನ ಎಂಬ ಯುವಕ ಬಾರ್​ಗೆ ಹೋಗಿದ್ದಾನೆ. ಅಲ್ಲಿ ದರ್ಶನಗೆ ಪರಿಚಯವಿರುವ ಮತ್ತೊಂದು ಗುಂಪು ಬಂದಿದೆ. ಆದರೆ ಅದೇನಾಯ್ತೊ ಏನೊ ಗೆಳಯರ ನಡುವೆ ಗಲಾಟೆ ಶುರುವಾಗಿದೆ. ಮುಂದೇನಾಯ್ತು ಈ ಸ್ಟೋರಿ ಓದಿ..

ಬೆಂಗಳೂರು: ಬಾರ್​​ನಲ್ಲಿ ಶುರುವಾದ ಗೆಳೆಯರ ಗಲಾಟೆ ಮನೆ ಮುಂದೆ ಕೊಲೆಯಲ್ಲಿ ಅಂತ್ಯ
ಪ್ರಾತಿನಿಧಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:Jan 28, 2024 | 10:18 AM

ಬೆಂಗಳೂರು, ಜನವರಿ 28: ಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ. ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಕೊಲೆ ಮಾಡಿದ ಆರೋಪಿಗಳು. ಸುಬ್ರಹ್ಮಣ್ಯಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹಾಗದರೆ ದರ್ಶನ್ ಕೊಲೆಗೆ ಕಾರಣ ಏನು?

ಜನವರಿ 24 ರಂದು ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಕೊಡಲು 3 ಸಾವಿರ ಹಣವನ್ನು ದರ್ಶನಗೆ ನೀಡಿದ್ದಳು. ಇದೇ ಹಣವನ್ನು ತೆಗೊಂಡು ದರ್ಶನ್​ ಸ್ನೇಹಿತ ನಿತಿನ್, ರಮೇಶ್ ಜೊತೆಗೆ ಬಾರ್​ಗೆ ಬಂದಿದ್ದನು. ಇದೇ ಬಾರ್​ಗೆ ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಬಂದಿದ್ದರು.

ಆರೋಪಿಗಳು ಮತ್ತು ದರ್ಶನ್ ಟೀಂ ಎಲ್ಲರೂ ಸ್ನೇಹಿತರೆ. ಆದರೆ ಅದೇನಾಯ್ತೊ ಏನೊ ನಿತಿನ್ ಹಾಗೂ ಪ್ರೀತಂ ನಡುವೆ ಕಿರಿಕ್ ಆಗುತ್ತೆ. ಇಷ್ಟಾದ ಮೇಲೆ ದರ್ಶನ್ ಆ್ಯಂಡ್ ಟೀಮ್ ರಮೇಶ್ ಮನೆ ಬಳಿಗೆ ಹೋಗುತ್ತಾರೆ. ಪ್ರೀತಂ ಆ್ಯಂಡ್​ ಗ್ಯಾಂಗ್​ ಇಲ್ಲಿಗೂ ಬರುತ್ತಾರೆ. ಈ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆ ಆಗುತ್ತೆ. ಆಗ ನಿತಿನ್​ಗೆ ಪ್ರೀತಂ ಹೊಡೆದಿದ್ದಾನೆ.

ಇದನ್ನೂ ಓದಿ: ಬಾಗಲಕೋಟೆ: ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿಸಿದ್ದ ಮಗ, ಸೊಸೆ ಅರೆಸ್ಟ್

ಈ ವೇಳೆ ದರ್ಶನ್ ಮಧ್ಯಪ್ರವೇಶಿಸಿ ನಿತಿನ್​ಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಾನೆ. ಆಗ ದರ್ಶನ್​ಗೆ ಪ್ರೀತಂ ಹಾಲೋಬ್ಲಾಕ್ (ಸಿಮೆಂಟ್​ ಇಟ್ಟಿಗೆ) ಯಿಂದ ಹೊಡೆದಿದ್ದಾನೆ. ಇದರಿಂದ ದರ್ಶನ್​ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಲ ವಾಪಸ್​ ಕೇಳಿದ್ದಕ್ಕೆ ಯುವಕನ ಮೇಲೆ ಡೆಡ್ಲಿ ಅಟ್ಯಾಕ್

ಸಾಲ ವಾಪಸ್​ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್​​​ನ ಲಗ್ಗೆರೆ ಸಮೀಪ ನಡೆದಿದೆ. ಮಾರುತಿ ಹಲ್ಲೆಗೊಳಗಾದ ಕಾರು ಚಾಲಕ. ಕೆಂಚ ಎಂಬುವ ಕಾರು ಚಾಲಕ ಮಾರುತಿ ಅವರ ಬಳಿ 25 ಸಾವಿರ ರೂ. ಸಾಲ ಪಡೆದಿದ್ದನು. ಆದರೆ ಕೆಂಚ ಸಾಲವನ್ನು ನೀಡದೆ ತಲೆ ಮರಿಸಿಕೊಂಡು ತಿರುಗಾಡುತ್ತಿದ್ದನು. ಅದೊಂದು ದಿನ ಕೆಂಚ ಕೈಗೆ ಸಿಕ್ಕಿದ್ದು, ಮಾರುತಿ ಸಾಲ ವಾಪಸ್​ ನೀಡುವಂತೆ ಹೇಳಿದ್ದಾರೆ.

ಇದರಿಂದ ಕೋಪಗೊಂಡ ಕೆಂಚ ಮತ್ತು ಆತನ ಸ್ನೇಹಿತರಾದ ತೇಜು, ನವೀನ್, ವೆಂಕಟೇಶ್, ಕೆಂಚ, ಮಯೂರ್ ತುಮಕೂರಿನ ಹೆಬ್ಬೂರಿನಿಂದ ಬರೊಬ್ಬರಿ 100 ಕಿಮೀ ಮಾರುತಿಯನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ನಂದಿನಿ ಲೇಔಟ್​​​ನ ಲಗ್ಗೆರೆ ಸಮೀಪ ಗ್ಯಾಂಗ್​ ಮಾರುತಿ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮಾರುತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:18 am, Sun, 28 January 24

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು