ಹಣ ವಿಚಾರವಾಗಿ ಎಸಿಪಿ ಮಗನ ಕೊಲೆ: ಹತ್ಯೆ ರಹಸ್ಯ ಭೇದಿಸಿದ ಪೊಲೀಸರು

ದೆಹಲಿ ಹಿರಿಯ ಪೊಲೀಸ್​​​ ಅಧಿಕಾರಿಯೊಬ್ಬರ ಮಗನ ಹಣಕ್ಕಾಗಿ ಕೊಲೆ ನಡೆದಿದೆ. ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಯಶ್ಪಾಲ್ ಸಿಂಗ್ ಅವರ ಪುತ್ರ ಲಕ್ಷ್ಯ ಚೌಹಾಣ್ ಸೋಮವಾರ ಹರ್ಯಾಣದಲ್ಲಿ ತನ್ನ ಇಬ್ಬರು ಸ್ನೇಹಿತರ ಜೊತೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಮದುವೆ ಮುಗಿಸಿ ಮರುದಿನ ದೆಹಲಿಗೆ ಬರಬೇಕಿತ್ತು. ಕೊಲೆ ನಡೆದಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ನಡೆಸಿ ಕೊಲೆ ಕಾರಣವನ್ನು ಪತ್ತೆ ಮಾಡಿದ್ದಾರೆ.

ಹಣ ವಿಚಾರವಾಗಿ ಎಸಿಪಿ ಮಗನ ಕೊಲೆ: ಹತ್ಯೆ ರಹಸ್ಯ ಭೇದಿಸಿದ ಪೊಲೀಸರು
Follow us
ಅಕ್ಷಯ್​ ಪಲ್ಲಮಜಲು​​
|

Updated on: Jan 27, 2024 | 11:35 AM

ಹರ್ಯಾಣ, ಜ.27: ದೆಹಲಿ (Delhi ) ಹಿರಿಯ ಪೊಲೀಸ್​​​ ಅಧಿಕಾರಿಯೊಬ್ಬರ ಮಗನ ಹಣಕ್ಕಾಗಿ ಕೊಲೆ ನಡೆದಿದೆ. ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಯಶ್ಪಾಲ್ ಸಿಂಗ್ ಅವರ ಪುತ್ರ ಲಕ್ಷ್ಯ ಚೌಹಾಣ್ ಸೋಮವಾರ ಹರ್ಯಾಣದಲ್ಲಿ ತನ್ನ ಇಬ್ಬರು ಸ್ನೇಹಿತರ ಜೊತೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಮದುವೆ ಮುಗಿಸಿ ಮರುದಿನ ದೆಹಲಿಗೆ ಬರಬೇಕಿತ್ತು. ಆದರೆ ಆ ದಿನ ಲಕ್ಷ್ಯ ಚೌಹಾಣ್ ದೆಹಲಿಯಲ್ಲಿರುವ ತನ್ನ ಮನೆಗೆ ಬಂದಿಲ್ಲ. ಇದರಿಂದ ಆತಂಕಗೊಂಡ ತಂದೆ ಎಸಿಪಿ ಯಶ್ಪಾಲ್ ಸಿಂಗ್ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಮ್ಮ ಸಹೋದ್ಯೋಗಿಯ ಮಗ ಎಂದು ವಿಶೇಷ ಕಾಳಜಿ ವಹಿಸಿ ಹುಡುಕಾಟ ನಡೆಸಿದ್ದಾರೆ.

ಲಕ್ಷ್ಯ ಚೌಹಾಣ್​​​ಗಾಗಿ ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಇಂದು ನಾಪತ್ತೆಯ ಕಾರಣ ಸಿಕ್ಕಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನನ್ನು ವಿಕಾಸ್ ಭಾರದ್ವಾಜ್ ಎಂದು ಗುರುತಿಸಲಾಗಿದೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಲಕ್ಷ್ಯ ಚೌಹಾಣ್, ಅದೇ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ವಿಕಾಸ್ ಭಾರದ್ವಾಜ್​​ನಿಂದ ಹಣ ಪಡೆದಿದ್ದರು. ಆದರೆ ಈ ಹಣವನ್ನು ನೀಡದೆ ಲಕ್ಷ್ಯ ಚೌಹಾಣ್ ಸತಾಯಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ವಿಕಾಸ್ ತನ್ನ ಸ್ನೇಹಿತ ಅಭಿಷೇಕ್ ಎಂಬಾತನ ಜತೆಗೆ ಸೇರಿ ಲಕ್ಷ್ಯ ಚೌಹಾಣ್ ಅವರನ್ನು ಕೊಲ್ಲಲು ಪ್ಲಾನ್​​ ಮಾಡಿದ್ದರು. ಇದೇ ಸಮಯದಲ್ಲಿ ಜನವರಿ 22 ರಂದು ಲಕ್ಷ್ಯ ಚೌಹಾಣ್ ಅವರು ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಹರ್ಯಾಣ ಭಿವಾನಿಗೆ ಬಂದಿದ್ದರು ಎಂದು ಹೇಳಲಾಗಿದೆ. ವಿಕಾಸ್ ಮತ್ತು ಅಭಿಷೇಕ್ ಅವರ ಕಾರಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು.

ಇದನ್ನೂ ಓದಿ: ಕೊರೊನಾದಿಂದ ಕೆಲಸ ಕಳಕೊಂಡ ಇಂಜಿನಿಯರ್ ಮೈಸೂರಿನಲ್ಲಿ ಅದ್ಭುತ ನಕಲಿ ನೋಟು ತಯಾರಿಸುತ್ತಿದ್ದ; ಹರಿಹರ ಪೊಲೀಸರಿಗೆ ಸಿಕ್ಕಿಬಿದ್ದ!

ಮದುವೆ ಮುಗಿಸಿ ತಡರಾತ್ರಿ ವಾಪಸ್ಸು ದೆಹಲಿ ಬರಬೇಕಾದರೆ ವಾಶ್‌ರೂಮ್‌ಗೆ ಹೋಗುವ ನೆಪದಲ್ಲಿ ಪಾಣಿಪತ್‌ನ ಮುನಾಕ್ ಕಾಲುವೆ ಬಳಿ ಕಾರು ನಿಲ್ಲಿಸಿದ್ದಾರೆ. ಇದೇ ಸರಿಯಾದ ಸಮಯ ಎಂದು ಲಕ್ಷ್ಯ ಚೌಹಾಣ್ ಅವರನ್ನು ಕಾರಿನಿಂದ ಇಳಿಸಿ ಕಾಲುವೆಗೆ ತಳ್ಳಿದ್ದಾರೆ ಎಂದು ತನಿಖೆಯಲ್ಲಿ ತಿಳಿಸಲಾಗಿದೆ. ತನಿಖೆಯಲ್ಲಿ ಹಣ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಅಭಿಷೇಕ್​​​ ಅವರನ್ನು ಕೂಡ ಬಂಧನ ಮಾಡಲಾಗಿದೆ. ಈ ಕೊಲೆಯ ಹಿಂದೆ ಇನ್ನು ಕೆಲವು ಆರೋಪಿಗಳು ಇದ್ದಾರೆ ಎಂದು ಹೇಳಲಾಗಿದೆ. ಇದೀಗ ಆತನ ದೇಹದ ಪತ್ತೆಯನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು