ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್​ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ

ಈ ಗುಂಪು ಕಳೆದ ಒಂದು ವರ್ಷದಿಂದ ಹಲವು ಕಾರ್​ಗಳಿಂದ ಸೈಲೆನ್ಸರ್ ಕಳವು ಮಾಡಿದ್ದ ಸಂಗತಿ ಈ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್​ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ
ಸೈಲೆನ್ಸರ್ ಕಳ್ಳರಿಗೆ ಬೇಕಿರುವ ಅಪರೂಪದ ಲೋಹಗಳಿರುವ ಹನಿಕಾಂಬ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 23, 2022 | 8:09 AM

ಬೆಂಗಳೂರು: ಮನೆಗಳ ಮುಂದೆ ನಿಂತಿರುವ ಕಾರ್​ಗಳ ಸೈಲೆನ್ಸರ್​ಗಳನ್ನು ಕಳವು ಮಾಡುತ್ತಿದ್ದ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಕಳೆದ ಒಂದು ವರ್ಷದಿಂದ ಹಲವು ಕಾರ್​ಗಳಿಂದ ಸೈಲೆನ್ಸರ್ ಕಳವು ಮಾಡಿದ್ದ ಸಂಗತಿ ಈ ವೇಳೆ ಬೆಳಕಿಗೆ ಬಂದಿದೆ. ಕಾರು ಇದ್ದ ಜಾಗದಲ್ಲಿಯೇ ಇರುವುದರಿಂದ ಅದರ ಮಾಲೀಕರೂ ಸಹ ಸೈಲೆನ್ಸರ್ ಕಳುವಾಗಿರುವುದನ್ನು ಗಮನಿಸಿ ದೂರು ಕೊಡುವುದು ತಡವಾಗುತ್ತದೆ. ಸೈಲೆಂಟ್ ಆಗಿ ಕಾರ್ ಕೆಳಗಿನ ಸೈಲೆನ್ಸರ್ ಕದ್ದು ತಪ್ಪಿಸಿಕೊಳ್ಳುತ್ತಾರೆ. ನಗರದಲ್ಲಿ ಈವರೆಗೆ 15ಕ್ಕೂ ಹೆಚ್ಚು ಸೈಲೆನ್ಸರ್ ಕಳವು ಪ್ರಕರಣಗಳು ವರದಿಯಾಗಿವೆ. ಸೈಲೆನ್ಸರ್​ಗಳಲ್ಲಿ ಪಲೋಡಿಯಂ, ಪ್ಲಾಟಿನಂ, ರೊಡಿಯಂ ಬಳಕೆಯಾಗಿವೆ. ಈ ಲೋಹಗಳನ್ನು ಪುಡಿ ಮಾಡಿ ಮಾರುವುದನ್ನು ಕಳ್ಳರು ರೂಢಿಸಿಕೊಂಡಿದ್ದಾರೆ. ಹೈಫೈ ಕಾರುಗಳು ಮಾತ್ರವಲ್ಲ, ಮಧ್ಯವರ್ಗದ ಮೆಚ್ಚಿನ ಕಾರು ಎನಿಸಿರುವ ‘ಮಾರುತಿ ಇಕೋ’ ಕಾರಿನ ಸೈಲೆನ್ಸರ್​ಗಳಿಗೂ ಭಾರಿ ಬೇಡಿಕೆಯಿದೆ. ಸೈಲೆನ್ಸರ್ ಕಳವು ಪ್ರಕರಣಗಳ ಬಗ್ಗೆ ಕೊಣನಕುಂಟೆ, ತಲಘಟ್ಟಪುರ ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.

ನಗರದಲ್ಲಿ 2021ರಿಂದಲೂ ಸೈಲೆನ್ಸರ್ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಕಾರಿನಲ್ಲಿರುವ ಸೈಲೆನ್ಸರ್​ನ ಕೆಲ ವಸ್ತುಗಳು ಕಾರ್ ಉಗುಳುವ ಹೊಗೆಯ ಅಪಾಯಕಾರಿ ವಸ್ತುಗಳನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಬಳಕೆಯಾಗುವ ರಾಸಾಯನಿಕಗಳು ಹಾಗೂ ಲೋಹಗಳಿಗೆ ಬೇಡಿಕೆಯಿದೆ. ಹೀಗಾಗಿ ಸೈಲೆನ್ಸರ್​ಗಳನ್ನು ಸ್ಕ್ರೂಡೈವರ್ ಮೂಲಕ ಹೊರ ತೆಗೆದು, ಪುಡಿ ಮಾಡಿ ಮಾರುತ್ತಾರೆ. ಸೈಲೆನ್ಸರ್​ನಲ್ಲಿರುವ ಹನಿಕಾಂಬ್​ಗಳನ್ನು ಪುಡಿ ಮಾಡಿ ಮಾರುವುದನ್ನು ರೂಢಿಸಿಕೊಂಡಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಈ ಪುಡಿಗೆ ಭಾರಿ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

ಕುಖ್ಯಾತ ಮನೆಗಳ್ಳರ ಬಂಧನ; 79 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತುಗಳ ಜಪ್ತಿ

ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ತೆಲಂಗಾಣ ಮೂಲದ ವಿನೋದ್, ಪಶ್ಚಿಮ ಬಂಗಾಳ ಮೂಲದ ರೋಹಿತ್ ಮಂಡಲ್ ಬಂಧಿತ ಆರೋಪಿಗಳು. ಇವರು ಎರಡು ತಿಂಗಳಿಂದ ಮನೆ ಕಳವು ಮಾಡ್ತಿದ್ದ ಆರೋಪಿಗಳು. ಹಗಲು ಮನೆಗಳನ್ನ ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ರು. ರಾತ್ರಿ ಆಗುತ್ತಿದ್ದಂತೆ ಕಿಟಕಿ ಕಂಬಿಗಳನ್ನ ಮುರಿದು ಕಳ್ಳತನ ಮಾಡುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಬಂಧಿತರಿಂದ 79 ಲಕ್ಷ ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತೆಲಂಗಾಣ ಮೂಲದವನಾಗಿದ್ದ ವಿನೋದ್ ಕುಮಾರ್, ಮನೆಗಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹೀಗಾಗಿ ಆತನ ಮನೆಯವರು ಹೊರಹಾಕಿದ್ದರು. 2016ರಲ್ಲಿ ಕಲ್ಕತ್ತಾಗೆ ಹೋಗಿ ರೋಹಿತ್ ಮಂಡಲ್ ಜೊತೆ 3 ವರ್ಷ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. 2019ರಲ್ಲಿ ಬಾಂಗ್ಲಾ ಯುವತಿಯನ್ನ ಪ್ರೀತಿಸಿ ಮದುವೆಯಾಗಿ ಬಾಂಗ್ಲಾಗೆ ತೆರಳಿದ್ದ. ಮೂವರೂ ಹೆಸರು ಬದಲಾಯಿಸಿಕೊಂಡು 1 ವರ್ಷ ಢಾಕಾದಲ್ಲಿ ವಾಸವಿದ್ರು. ಜೀವನ ನಿರ್ವಹಣೆ ಕಷ್ಟವಾದಾಗ ಮೂವರೂ ಭಾರತಕ್ಕೆ ಮರಳಿದ್ದರು. ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ವಿನೋದ್ ಕುಮಾರ್. ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ ಆರಂಭಿಸಿದ್ದ. ಬಳಿಕ ಪತ್ನಿಯನ್ನ ವಾಪಾಸ್ ಬಾಂಗ್ಲಾಗೆ ಕರೆದೊಯ್ದು ಬಿಟ್ಟು ಬಂದಿದ್ದ. ರೋಹಿತ್ ಮಂಡಲ್ ಜೊತೆ ಸೇರಿ ಕಳ್ಳತನ ಮುಂದುವರೆಸಿದ್ದ.

ಇದನ್ನೂ ಓದಿ: ಬೆಳಗ್ಗೆ ಸ್ಕೆಚ್ ಹಾಕಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದ ಕುಖ್ಯಾತ ಮನೆಗಳ್ಳರ ಬಂಧನ; 79 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತುಗಳ ಜಪ್ತಿ

ಇದನ್ನೂ ಓದಿ: ಚಲಿಸುವ ಬೈಕ್ ಮೇಲೆ ರೊಮಾನ್ಸ್: ಪ್ರಕರಣ ದಾಖಲಿಸಿ ಯುವಕ, ಬೈಕ್ ವಶಕ್ಕೆ ಪಡೆದ ಚಾಮರಾಜನಗರ ಪೊಲೀಸರು

Published On - 8:08 am, Sat, 23 April 22

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ