ಬೆಳಗ್ಗೆ ಸ್ಕೆಚ್ ಹಾಕಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದ ಕುಖ್ಯಾತ ಮನೆಗಳ್ಳರ ಬಂಧನ; 79 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತುಗಳ ಜಪ್ತಿ
ಹಗಲು ಮನೆಗಳನ್ನ ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ರು. ರಾತ್ರಿ ಆಗುತ್ತಿದ್ದಂತೆ ಕಿಟಕಿ ಕಂಬಿಗಳನ್ನ ಮುರಿದು ಕಳ್ಳತನ ಮಾಡುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ತೆಲಂಗಾಣ ಮೂಲದ ವಿನೋದ್, ಪಶ್ಚಿಮ ಬಂಗಾಳ ಮೂಲದ ರೋಹಿತ್ ಮಂಡಲ್ ಬಂಧಿತ ಆರೋಪಿಗಳು. ಇವರು ಎರಡು ತಿಂಗಳಿಂದ ಮನೆ ಕಳವು ಮಾಡ್ತಿದ್ದ ಆರೋಪಿಗಳು. ಹಗಲು ಮನೆಗಳನ್ನ ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ರು. ರಾತ್ರಿ ಆಗುತ್ತಿದ್ದಂತೆ ಕಿಟಕಿ ಕಂಬಿಗಳನ್ನ ಮುರಿದು ಕಳ್ಳತನ ಮಾಡುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಬಂಧಿತರಿಂದ 79 ಲಕ್ಷ ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ತೆಲಂಗಾಣ ಮೂಲದವನಾಗಿದ್ದ ವಿನೋದ್ ಕುಮಾರ್, ಮನೆಗಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹೀಗಾಗಿ ಆತನ ಮನೆಯವರು ಹೊರಹಾಕಿದ್ದರು. 2016ರಲ್ಲಿ ಕಲ್ಕತ್ತಾಗೆ ಹೋಗಿ ರೋಹಿತ್ ಮಂಡಲ್ ಜೊತೆ 3 ವರ್ಷ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. 2019ರಲ್ಲಿ ಬಾಂಗ್ಲಾ ಯುವತಿಯನ್ನ ಪ್ರೀತಿಸಿ ಮದುವೆಯಾಗಿ ಬಾಂಗ್ಲಾಗೆ ತೆರಳಿದ್ದ. ಮೂವರೂ ಹೆಸರು ಬದಲಾಯಿಸಿಕೊಂಡು 1 ವರ್ಷ ಢಾಕಾದಲ್ಲಿ ವಾಸವಿದ್ರು. ಜೀವನ ನಿರ್ವಹಣೆ ಕಷ್ಟವಾದಾಗ ಮೂವರೂ ಭಾರತಕ್ಕೆ ಮರಳಿದ್ದರು. ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ವಿನೋದ್ ಕುಮಾರ್. ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ ಆರಂಭಿಸಿದ್ದ. ಬಳಿಕ ಪತ್ನಿಯನ್ನ ವಾಪಾಸ್ ಬಾಂಗ್ಲಾಗೆ ಕರೆದೊಯ್ದು ಬಿಟ್ಟು ಬಂದಿದ್ದ. ರೋಹಿತ್ ಮಂಡಲ್ ಜೊತೆ ಸೇರಿ ಕಳ್ಳತನ ಮುಂದುವರೆಸಿದ್ದ.
ಕೆಲಸಗಾರರು, ಅಡುಗೆ ಮಾಡುವವರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್ ಅಪಾರ್ಟ್ಮೆಂಟ್ಗಳನ್ನೆ ಟಾರ್ಗೆಟ್ ಮಾಡ್ತಿದ್ದ ಕುಖ್ಯಾತ ಆರೋಪಿ ಇಸಾಯ್ ರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಅಪಾರ್ಟ್ಮೆಂಟ್ಗಳಿಗೆ ಕೆಲಸಗಾರರು, ಅಡುಗೆ ಮಾಡುವವರ ಸೋಗಿನಲ್ಲಿ ಎಂಟ್ರಿಯಾಗ್ತಿದ್ದ ಆರೋಪಿ, ಯಾವ ಪ್ಲ್ಯಾಟ್ ನಲ್ಲಿ ಕಳವು ಮಾಡಬೇಕೆಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದ. ಬಳಿಕ ಟೆರೆಸ್ ಮೇಲೆ ಸೇರಿಕೊಳ್ತಿದ್ದ. ಕತ್ತಲಾಗ್ತಿದ್ದಾಗೆ ಟೆರೆಸ್ ಮೇಲಿಂದ ಕೆಳಗಿಳಿದು ಕಳ್ಳತನ ಮಾಡ್ತಿದ್ದ. ಬಾಗಿಲ ಬಳಿ ಇರುವ ಕಿಟಕಿ ಮೂಲಕ ಕೈ ಹಾಕಿ ಲಾಕ್ ಓಪನ್ ಮಾಡ್ತಿದ್ದ. ಮನೆಯಲ್ಲಿ ಮಾಲೀಕರು ಇದ್ದಾಗಲೇ ನಿರ್ಭೀತಿಯಿಂದ ಕಳ್ಳತನಕ್ಕೆ ಇಳಿಯುತ್ತಿದ್ದ. ಡಾಕ್ಟರ್ ಮನೆಯೊಂದಕ್ಕೆ ನುಗ್ಗಿ ಆರೋಪಿ ಲಾಕರ್ ದೋಚಿದ್ದ. ಕಳವು ಮಾಡಿದ ಬಳಿಕ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರು ಬರುವುದನ್ನ ಕಂಡು ಅವ್ರ ಜೊತೆಯಲ್ಲೆ ಎಸ್ಕೇಪ್ ಆಗ್ತಿದ್ದ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದೆ. 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ ಕುರಿಸಿಕೊಂಡು ಯುವಕನ ಜಾಲಿ ರೈಡ್ ನಡುರಸ್ತೆಯಲ್ಲಿ ಪ್ರೇಮಿಗಳ ಹುಚ್ಚಾಟ ಭಾರಿ ವೈರಲ್ ಆಗಿದೆ. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದಾನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿರುವ ಘಟನೆ ಎನ್ನಲಾದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು, ವಾಹನಗಳ ಸಂಚಾರವಿದ್ದರೂ ಯಾವುದಕ್ಕೂ ಕೇರ್ ಮಾಡದೆ. ಯುವಕ ಯುವತಿಯನ್ನ ಟ್ಯಾಂಕ್ ಮೇಲೆ ಕೂರಿಸಿ ಅಪ್ಪಿಕೊಂಡು ಜಾಲಿ ರೈಡ್ ಹೊಡೆದಿದ್ದಾನೆ.
ಸರ್ಕಾರಿ ಸೇವೆಯಿಂದ ಕೆಎಎಸ್ ಅಧಿಕಾರಿ ಅಮಾನತು ಕರ್ತವ್ಯ ಲೋಪ ಹಿನ್ನೆಲೆ ಸರ್ಕಾರಿ ಸೇವೆಯಿಂದ ಕೆಎಎಸ್ ಅಧಿಕಾರಿ ಅಮಾನತು ಗೊಳಿಸಲಾಗಿದೆ. ಎಲಿಷಾ ಆಂಡ್ರೂಸ್ರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ-3 ಆಗಿದ್ದ ಎಲಿಷಾ ಆಂಡ್ರೂಸ್, ಇಂಜಿನಿಯರ್‌ಗಳಿಗೆ ಬಡ್ತಿ ವಿಚಾರದಲ್ಲಿ ಕರ್ತವ್ಯಲೋಪ ಆರೋಪ ಹಿನ್ನೆಲೆ ಇಲಾಖಾ ವಿಚಾರಣೆ ಬಾಕಿಯಿಟ್ಟು ಅಮಾನತು ಆದೇಶ ಹೊರಡಿಸಲಾಗಿದೆ.
ಗಂಗಮ್ಮ ದೇವಸ್ಥಾನಕ್ಕೆ ಪೊಲೀಸರಿಂದ ವಾರ್ನ್ ನಿನ್ನೆ ಬೆಂಗಳೂರಿನ ಗಂಗಮ್ಮ ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿತ್ತು. ಪೊಲೀಸ್ ಸಿಬ್ಬಂದಿಗಳಿಂದ ಹೆಚ್ಚು ಧ್ವನಿವರ್ಧಕ ಬಳಸದಂತೆ ಮೌಕಿಕವಾಗಿ ನೋಟಿಸ್ ನೀಡಲಾಗಿತ್ತು. ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ, ಹೆಚ್ಚು ಧ್ವನಿವರ್ಧಕಗಳನ್ನ ಬಳಸಬೇಡಿ ಅಂತ ಹೇಳಿದ್ರು. ನಮ್ಮ ದೇವಸ್ಥಾನದಲ್ಲಿ ಇಲ್ಲಿಯವರೆಗೆ ಮೈಕ್ ಬಳಸಿಲ್ಲ. ಹಬ್ಬದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆದು ಬಳಸುತ್ತೇವೆ. ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ನೋಟಿಸ್ ಕೊಟ್ಟಿಲ್ಲ, ಮೌಕಿಕವಾಗಿ ಎಚ್ಚರಿಸಿದ್ದಾರೆ ಅಷ್ಟೆ ಎಂದು ಮಲ್ಲೇಶ್ವರಂನ ಗಂಗಮ್ಮ ದೇವಸ್ಥಾನದ ಅಧ್ಯಕ್ಷ ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ದೃಷ್ಟಿಯಲ್ಲಿ ಗಲಭೆ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ: ಬಿಜೆಪಿ ಆಕ್ರೋಶ
‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್ಗೆ ಸ್ಟೈಲಿಶ್ ಸ್ಟಾರ್ ಫಿದಾ
Published On - 2:56 pm, Fri, 22 April 22