ಶಬ್ದಮಾಲಿನ್ಯ: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ನೋಟಿಸ್, ಇಲ್ಲಿದೆ ಪಟ್ಟಿ

ಶಬ್ದಮಾಲಿನ್ಯ: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ನೋಟಿಸ್, ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ

sound pollution: ನೋಟಿಸ್ ಕೊಟ್ಟು ಶಬ್ಧ ಮಾಲಿನ್ಯ ನಿಯಮ ಪಾಲಿಸದ ಪ್ರಾರ್ಥನಾ ಮಂದಿರಗಳ ಮೇಲೆ ಪೋಲಿಸರು ನಿಗಾ ಇಟ್ಟಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಪ್ರಾರ್ಥನಾ ಮಂದಿರಗಳಿಗೆ ಪೊಲೀಸರು ವಿಸಿಟ್ ಹಾಕ್ತಿದಾರೆ.

TV9kannada Web Team

| Edited By: sadhu srinath

Apr 22, 2022 | 6:47 PM

ಬೆಂಗಳೂರು: ಪ್ರಾರ್ಥನಾ ಮಂದಿರಗಳ ಮೈಕ್​​ಗಳಿಂದ ಹೊರಹೊಮ್ಮುವ ಶಬ್ದಮಾಲಿನ್ಯದ (Azaan, sound pollution) ವಿಚಾರವಾಗಿ ಹೈಕೋರ್ಟ್ ಆದೇಶ ಉಲ್ಲಂಘಿಸಿದ ಹಿನ್ನೆಲೆ ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸರಿಂದ ನೋಟಿಸ್ (Bangalore police) ಜಾರಿಯಾಗಿದೆ. ಪ್ರಾರ್ಥನಾ ಮಸೀದಿಗಳು, ಚರ್ಚ್ ಮತ್ತು ಮಂದಿರಗಳಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಲ್ಲಿ ಕಳೆದ 15 ದಿನಗಳಲ್ಲಿ ಹೀಗೆ ನೋಟಿಸ್ ನೀಡಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ನಿಯಮ ಪಾಲಿಸದ ಧಾರ್ಮಿಕ ಸ್ಥಳಗಳ ಮೇಲೆ ಪೊಲೀಸರು ಕಣ್ಣು ಇಟ್ಟಿದ್ದು, ಈವರೆಗೆ ಒಟ್ಟು 318 ಮಸೀದಿ, 98 ಚರ್ಚ್​ಗಳಿಗೆ ನೋಟಿಸ್​​​​​​​ ನೀಡಲಾಗಿದೆ. ಒಟ್ಟು 396 ಮಂದಿರಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಗಮನಾರ್ಹವೆಂದರೆ 34 ರೆಸ್ಟೋರೆಂಟ್‌ಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ.

ಹೈಕೋರ್ಟ್ ಆದೇಶ ಉಲ್ಲಂಘಿಸೋ ಮಂದಿರಗಳ ವಿರುದ್ಧ FIR ಹಾಕುವಂತೆಯೂ ಹಿರಿಯ ಪೊಲೀಸ್​ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನೋಟಿಸ್ ಬಳಿಕವೂ ನಿಯಮ ಪಾಲಿಸದಿದ್ದರೆ ಆ ಕ್ರಮದ ಬಗ್ಗೆ ಪೊಲೀಸರು ಹೈಕೋರ್ಟ್​ಗೆ ಮಾಹಿತಿ ನೀಡಲಿದ್ದಾರೆ. ಹೈಕೋರ್ಟ್​ನಲ್ಲಿ ವಿಚಾರಣೆಗೆ ಬರಲಿರುವ ಮೈಕ್ ಬಳಕೆ ವಿಚಾರ ರಜಾ ಕಾಲದ ಅವಧಿ ಮುಗಿದ ಬಳಿಕ ಕೋರ್ಟ್ ವಿಚಾರಣೆ ನಡೆಯಲಿದೆ.

ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸರಿಂದ ನೋಟಿಸ್ -ಏನಿದೆ ಅಂಕಿ ಅಂಶ:

ಮಸೀದಿಗಳು ಹಿಂದೆ – 125 ಈಗ – 193 ಒಟ್ಟು – 318

ಮಂದಿರಗಳು ಹಿಂದೆ – 83 ಈಗ – 313 ಒಟ್ಟು – 396

ಚರ್ಚ್ ಗಳು ಹಿಂದೆ – 22 ಈಗ – 76 ಒಟ್ಟು – 98

ರೆಸ್ಟೋರೆಂಟ್ – 34 ಇತರೆ – 74

ಕಳೆದ 15 ದಿನಗಳಲ್ಲಿ ದುಪ್ಪಟ್ಟು ನೋಟಿಸ್ ನೀಡಿರುವ ಪೊಲೀಸ್ ಇಲಾಖೆ ಈ ಹಿಂದೆ ಕೇವಲ 125 ಮಸೀದಿಗಳಿಗೆ ನೋಟಿಸ್ ನೀಡಿತ್ತು. ಇದೀಗ ಒಟ್ಟಾರೆ 318 ಮಸೀದಿಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು ಈ ಹಿಂದೆ ಕೇವಲ 83 ಮಂದಿರಗಳಿಗೆ ನೋಟಿಸ್ ನೀಡಲಾಗಿತ್ತು. ಇದೀಗ ಮಂದಿರಗಳಿಗೆ ನೀಡಿರುವ ನೋಟಿಸ್ ಗಳ ಸಂಖ್ಯೆ 396 ಆಗಿದೆ. ಕೇವಲ 22 ಚರ್ಚ್ ಗೆ ನೀಡಿದ್ದ ನೋಟಿಸ್ ಇದೀಗ 98 ಚರ್ಚ್ ಗಳಿಗೇರಿದೆ. ನೋಟಿಸ್ ಕೊಟ್ಟು ಶಬ್ಧ ಮಾಲಿನ್ಯ ನಿಯಮ ಪಾಲಿಸದ ಪ್ರಾರ್ಥನಾ ಮಂದಿರಗಳ ಮೇಲೆ ಪೋಲಿಸರು ನಿಗಾ ಇಟ್ಟಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಪ್ರಾರ್ಥನಾ ಮಂದಿರಗಳಿಗೆ ಪೊಲೀಸರು ವಿಸಿಟ್ ಹಾಕ್ತಿದಾರೆ.

ಇದೂ ಓದಿ: ಶಿಕ್ಷಕಿಯ ಅಪಹರಿಸಿ ಲವ್ ಜಿಹಾದ್ ಆರೋಪ: ಪೊಲೀಸರು ಮತ್ತು ಅನ್ಯಕೋಮಿನ ಯುವಕನ ವಿರುದ್ಧ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ಇದೂ ಓದಿ: ಹುಬ್ಬಳ್ಳಿ ಕೋಮುಗಲಭೆ ಪ್ರಕರಣ: ಮಾಸ್ಟರ್​ಮೈಂಡ್ ಮೌಲ್ವಿ ವಸೀಂ ಪಠಾಣ್​ಗೆ ಖಾಕಿ ಪಡೆಯಿಂದ ಸಖತ್ ಗ್ರಿಲ್; ನ್ಯಾಯಾಲಯಕ್ಕೆ ಹಾಜರ

Follow us on

Related Stories

Most Read Stories

Click on your DTH Provider to Add TV9 Kannada