ಹುಬ್ಬಳ್ಳಿ ಕೋಮುಗಲಭೆ ಪ್ರಕರಣ: ಮಾಸ್ಟರ್​ಮೈಂಡ್ ಮೌಲ್ವಿ ವಸೀಂ ಪಠಾಣ್​ಗೆ ಖಾಕಿ ಪಡೆಯಿಂದ ಸಖತ್ ಗ್ರಿಲ್; ನ್ಯಾಯಾಲಯಕ್ಕೆ ಹಾಜರ

ನ್ಯಾಯಾಲಯಕ್ಕೆ ಹಾಜರು ಪಡಿಸಲು ಮೌಲ್ವಿ ವಸೀಂ ಪಠಾಣ್​ನನ್ನ ಪೊಲೀಸರು ಕರೆ ತಂದಿದ್ದಾರೆ. ನಿನ್ನೆ ತಡರಾತ್ರಿ ನ್ಯಾಯಧೀಶರೆದುರು ಹಾಜಾರಾದ ಹಿನ್ನಲೆ, ಇಂದು ಮತ್ತೆ ಹುಬ್ಬಳ್ಳಿ 4ನೇ ಜೆಎಂಎಫಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ವಸೀಂ ನನ್ನು ಪೊಲೀಸರು ಕರೆ ತಂದಿದ್ದಾರೆ.

ಹುಬ್ಬಳ್ಳಿ ಕೋಮುಗಲಭೆ ಪ್ರಕರಣ: ಮಾಸ್ಟರ್​ಮೈಂಡ್ ಮೌಲ್ವಿ ವಸೀಂ ಪಠಾಣ್​ಗೆ ಖಾಕಿ ಪಡೆಯಿಂದ ಸಖತ್ ಗ್ರಿಲ್; ನ್ಯಾಯಾಲಯಕ್ಕೆ ಹಾಜರ
ಮಾಸ್ಟರ್​ಮೈಂಡ್ ಮೌಲ್ವಿ ವಸೀಂ ಪಠಾಣ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 22, 2022 | 5:36 PM

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ (WhatsApp) ಸ್ಟೇಟಸ್​ನಿಂದ ಗಲಾಟೆ ಪ್ರಕರಣ ಹಿನ್ನೆಲೆ ಗಲಭೆಯ ಮಾಸ್ಟರ್​ಮೈಂಡ್​ ಎಂದು ಹೇಳಲಾಗುತ್ತಿರುವ ಮೌಲ್ವಿ ವಸೀಂ ಪಠಾಣ್​ನನ್ನು ಬಂಧಿಸಿ ಖಾಕಿ ಪಡೆ ಗ್ರಿಲ್ ನಡೆಸಿದೆ. ನಾನೇನು ತಪ್ಪೆ ಮಾಡಿಲ್ಲ ಎಂದಿದ್ದೆಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದು, ಭಯದಿಂದ ಹಾಗೇ ಹೇಳಿದ್ದೆ ಸರ್ ಎಂದಿದ್ದಾನೆ. ತಪ್ಪೆ ಮಾಡಿಲ್ಲ ಎಂದ್ರೆ ಯಾಕೆ ಏಸ್ಕೇಪ್ ಆಗಿದ್ದು ಎಂದು ಖಾಕಿ ಗ್ರಿಲ್‌ ನಡೆಸಿದೆ. ಪ್ರಕರಣದಲ್ಲಿ ನನ್ನನ್ನೆ ಮಾಸ್ಟರ್ ಮೈಂಡ್ ಮಾಡಿದ್ದಕ್ಕೆ ನಂಗೆ ಬಂಧನದ ಭಯವಿತ್ತು, ಹಾಗಾಗಿ ಏಸ್ಕೇಪ್ ಆಗಿದ್ದೆ ಎಂದು ಪೊಲೀಸರೆದರು ವಸೀಂ ಪಠಾಣ್ ತಪ್ಪೊಪ್ಪಿಕೊಂಡಿದ್ದಾನೆ. ಜನ ಜಮಾಯಿಸುವಂತೆ ಮಾಡಿದ್ದ್ಯಾರು ಎಂದು ಖಾಕಿ ಮರು ಪ್ರಶ್ನೆ‌ ಮಾಡಿದ್ದು, ತಾನು ವಾಟ್ಸಫ್ ಗ್ರೂಫ್ ರಚಿಸಿದ್ದು ನಿಜ. ವಾಟ್ಸ್ಆ್ಯಪ್​ ಗ್ರೂಪ್​ನಲ್ಲಿ ಯಾರನ್ನ ಸೇರಿಸಿದ್ದೇ.? ವಾಸೀಂ ಭೇಪಾರಿ, ತುಫೆಲ್ ಮಲ್ಲಾ ಜೊತೆ ಸೇರಿ ಗ್ರೂಪ್ ಮಾಡಿದ್ದೆ. ಗ್ರೂಪ್​ ಮಾಡಿ ಜನರಿಗೆ ಏನು ಹೇಳಿದೆ ಎಂದು ಕೇಳಿದ ಪೊಲೀಸರಿಗೆ, ಕೇವಲ ಜನ ಜಮಾವಣೆ ಆಗುವಂತೆ ಮಾತ್ರ ಹೇಳಿದ್ದೆ. ಅಷ್ಟೊಂದು ದೊಡ್ಡ ಪ್ರಮಾಣ ಕಲ್ಲು ಬಂದಿದ್ದು ಹೇಗೆ.? ಅದು ನಂಗೆ ಗೊತ್ತಿಲ್ಲ,ಆದ್ರೇ ಅವರು ಕಲ್ಲು ತೆಗೆದುಕೊಂಡು ಬರ್ತಾರೆ ಎನ್ನೋದು ನಂಗೆ ಗೊತ್ತಿರಲಿಲ್ಲ. ಅಷ್ಟು ಮಟ್ಟಿಗೆ ಕಲ್ಲು ತಂದಿರುವುದು ಗೊತ್ತಿದ್ದಿಲ್ವ ನಿನಗೆ.? ಗಲಾಟೆಗೆ ನಿನ್ಯಾಕೆ ಯಾಕೆ ಪ್ರಚೋದನೆ ನೀಡಿದ್ದು ಎಂದು ಪೊಲೀಸರು ಕೇಳಿದ್ದು, ಇಲ್ಲ ಸರ್ ನಾನು ಪ್ರಚೋದನೆ ನೀಡಿಲ್ಲ ಬದಲಾಗಿ ಪೊಲೀಸರು ಬಗ್ಗದೇ ಹೋದ್ರೆ ಗಲಾಟೆ ಮಾಡೋಣ, ಪ್ರತಿಭಟನೆ ಮಾಡೋಣ ಎಂದಿದ್ದೆ ಎಂದು ವಸೀಂ ಹೇಳಿದ್ದಾನೆ.

ನೀನು ಬಂದಮೇಲೆ ಗಲಾಟೆ ದೊಡ್ಡಾಯಿತು ಅಲ್ವ. ಬರುವಾಗ ಎಲ್ಲರೂ ಕಲ್ಲು ಹಿಡಿದುಕೊಂಡು ಬಂದಿದ್ದಾರೆ. ನಾ ಬಂದ ಬಳಿಕ ಒಮ್ಮೆಲ್ಲೆ ಕರೆಂಟ್ ಹೊಯ್ತು, ಅದ್ಯಾಕೆ ಆ ರೀತಿ ಅಯ್ತು. ಮತ್ತು ಕೆಲವರು ಮುಸುಕುಧಾರಿಗಳು ಬಂದಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಹುಬ್ಬಳ್ಳಿಯಿಂದ ಮೊದಲಿಗೆ ಹೋಗಿದ್ದೆಲ್ಲಿಗೆ ಎನ್ನುವ ಪೊಲೀಸರ ಪ್ರಶ್ನೆಗೆ ಮೊದಲು ನಾನು ಸವಣೂರಿನ ಹತ್ತಿರೋ ಪತ್ನಿ ಮನೆಗೆ ಹೋಗಿದ್ದೆ‌. ಪೊಲೀಸರು ನಿನ್ನನ್ನ ಬಂದಿಸಲು ಬಂದಾಗ ಯಾಕೆ ತಪ್ಪಿಸಿಕೊಂಡು ಓಡುತ್ತಾಇದ್ದೇ.? ಕೆಲವರು ನಂಗೆ ಜೀವ ಭಯ ಇದೆ ಎಂದು ಹೇಳಿದ್ದರು. ಹೀಗಾಗೇ ವಸೀಂ ಮೊಬೈಲ್ ಜಪ್ತಿ ಮಾಡಿ, ಮಾಹಿತಿಯನ್ನು ಖಾಕಿ ಪಡೆ ತಡಕಾಡಿದೆ. ವಸೀಂ ಮೊಬೈಲ್ ಜಾಲಾಡಿದ್ರೆ, ಇನ್ನಷ್ಟು ಸತ್ಯ ಹೊರಬರೋ ಹಿನ್ನಲೆ ಖಾಕಿಯಿಂದ ಮೊಬೈಲ್ ಜಪ್ತಿ‌ ಮಾಡಲಾಗಿದೆ.

ನ್ಯಾಯಾಲಯಕ್ಕೆ ಹಾಜರು ಪಡಿಸಲು ಮೌಲ್ವಿ ವಸೀಂ ಪಠಾಣ್​ನನ್ನ ಪೊಲೀಸರು ಕರೆ ತಂದಿದ್ದಾರೆ. ನಿನ್ನೆ ತಡರಾತ್ರಿ ನ್ಯಾಯಧೀಶರೆದುರು ಹಾಜಾರಾದ ಹಿನ್ನಲೆ, ಇಂದು ಮತ್ತೆ ಹುಬ್ಬಳ್ಳಿ 4ನೇ ಜೆಎಂಎಫಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ವಸೀಂ ನನ್ನು ಪೊಲೀಸರು ಕರೆ ತಂದಿದ್ದಾರೆ. ಗಲಭೆ ಪ್ರಕರಣ ಸಂಬಂಧ ಹಿನ್ನಲೆ ಬೆಂಗಳೂರಿನ ಕಾಟನ್ ಪೇಟೆ ಬಳಿ ಇಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಟಿವಿ 9ಗೆ ಆರೋಪಿಗಳು ಹೋಟೇಲ್ ಪ್ರವೇಶಿಸಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ನಟೋರಿಯಸ್ ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತುಫೇಲ್ ಮುಲ್ಲಾ ಚಲನವಲನ ಸಿಸಿ‌ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಆರೋಪಿಗಳು ಹುಬ್ಬಳ್ಳಿಯಿಂದ ಬಂದು ತವಕಲ್ ಮಸೀದಿ ಲಾಡ್ಜ್​ನಲ್ಲಿ ರೂಂ ಪಡೆದಿದ್ರು. ನಂತರ ಪಕ್ಕದಲ್ಲೇ ಇದ್ದ ಹೋಟೇಲ್​ಗೆ ಊಟಕ್ಕೆ ಹೋಗ್ತಾರೆ. ಹೋಟೆಲ್​ನಲ್ಲಿ ಆರೋಪಿಗಳ ಚಲನವಲನಗಳನ್ನ ಪೊಲೀಸರು ಪತ್ತೆ ಹಚ್ಚಿದ್ದು, ನಂತರ ಆರೋಪಿಗಳನ್ನು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ:

Janhvi Kapoor: ಹೊಸ ಫೋಟೋಶೂಟ್, ಭಿನ್ನ ಗೆಟಪ್; ಮತ್ತೆ ಪಡ್ಡೆಗಳ ನಿದ್ದೆ ಕದ್ದ ಜಾನ್ವಿ ಕಪೂರ್

Published On - 5:33 pm, Fri, 22 April 22