AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆಗೆ ಹಾಜರಾದ ಹುಬ್ಬಳ್ಳಿ ಗಲಭೆ ಆರೋಪಿ ಅಭಿಷೇಕ್ ಹಿರೇಮಠ

ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ ಮೂಲಕ ಹುಬ್ಬಳ್ಳಿಯಲ್ಲಿ ಗಲಭೆಗೆ ಮೂಲ ಕಾರಣನಾಗಿದ್ದ ವಿದ್ಯಾರ್ಥಿ ಅಭಿಷೇಕ್ ಹಿರೇಮಠನನ್ನು ಪರೀಕ್ಷೆ ಬರೆಸಲು ಪೊಲೀಸರು ಕರೆತಂದರು.

ಪರೀಕ್ಷೆಗೆ ಹಾಜರಾದ ಹುಬ್ಬಳ್ಳಿ ಗಲಭೆ ಆರೋಪಿ ಅಭಿಷೇಕ್ ಹಿರೇಮಠ
ಪೋಸ್ಟ್ ಹಂಚಿಕೊಂಡಿದ್ದ ಆರೋಪಿ ಅಭಿಷೇಕ್ ಹಿರೇಮಠ ಮತ್ತು ಕಲ್ಲು ತೂರಾಟದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
TV9 Web
| Edited By: |

Updated on:Apr 22, 2022 | 11:30 AM

Share

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ ಮೂಲಕ ಹುಬ್ಬಳ್ಳಿಯಲ್ಲಿ ಗಲಭೆಗೆ ಮೂಲ ಕಾರಣನಾಗಿದ್ದ ವಿದ್ಯಾರ್ಥಿ ಅಭಿಷೇಕ್ ಹಿರೇಮಠನನ್ನು ಪರೀಕ್ಷೆ ಬರೆಸಲು ಪೊಲೀಸರು ಹುಬ್ಬಳ್ಳಿ ಉಪ ಕಾರಾಗೃಹದಿಂದ ಪ್ರಿಯದರ್ಶಿನಿ ಬಡಾವಣೆಯ ಮಹೇಶ್ ಪಿಯುಸಿ ಕಾಲೇಜಿಗೆ ಕರೆತಂದರು. ಪರೀಕ್ಷೆ ಬರೆಯಲು ಅಭಿಷೇಕ್​ಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.15 ಪಿಯುಸಿ ಪರೀಕ್ಷೆ ಆರಂಭವಾಗಿದೆ. ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಪರೀಕ್ಷಾ ಕೇಂದ್ರ

ಮತ್ತೊಬ್ಬ ಪೊಲೀಸ್ ವಶಕ್ಕೆ ಹುಬ್ಬಳ್ಳಿ ಗಲಭೆ ಪ್ರಕರಣದ ಮುಖ್ಯ ಆರೋಪಿ ಅಭಿಷೇಕ್ ಹಿರೇಮಠಗೆ ವಿಡಿಯೊ ಕಳಿಸಿದ್ದ ಮತ್ತೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿವಾದಿತ ಪೋಸ್ಟ್​ ಮೂಲ ರೂವಾರಿ ಇವನೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಬರೆಯಲಿಲ್ಲ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು ಉಡುಪಿ: ರಾಜ್ಯಾದ್ಯಂತ ಇಂದಿನಿಂದ (ಏ್ರಪ್ರಿಲ್ 22) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ವಿವಾದದ ಕೇಂದ್ರವಾಗಿದ್ದ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನತ್ತ ಎಲ್ಲರ ಗಮನ ನೆಟ್ಟಿದೆ. ವಿದ್ಯಾರ್ಥಿನಿಯರು ಬುರ್ಖಾ ತೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಹಿಜಾಬ್, ಬುರ್ಖಾ ತೆಗೆದಿಡಲು ಕಾಲೇಜು ಆಡಳಿತ ಮಂಡಳಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದೆ. ಉಡುಪಿ ನಗರ ಠಾಣಾ ಪೊಲೀಸರು ಪಿಯು ಕಾಲೇಜಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪ್ರಾಂಶುಪಾಲರ ಜೊತೆ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಹೋರಾಟಗಾರ್ತಿ ರೇಷಂ ಆಗಮಿಸಿದರು. ಇತರ ವಿದ್ಯಾರ್ಥಿನಿಯರಂತೆ ಪರೀಕ್ಷೆ ಬರೆಯಲು ಕಾಲೇಜು ಒಳಗೆ ಹೋದರು. ಹಿಜಾಬ್ ಹೋರಾಟದ ಮುಂಚೂಣಿಯಲ್ಲಿದ್ದ ಆಲಿಯಾ ಅಸಾದಿ ಸಹ ಹಾಲ್​ ಟಿಕೆಟ್ ಪಡೆದುಕೊಂಡರು. ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಕೋರಿ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಇಂದು ಪರೀಕ್ಷೆ ಇತ್ತು. ಇವರಿಬ್ಬರೂ ಹಾಲ್ ಟಿಕೆಟ್ ಪಡೆದು, ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದಾರೆ. ಪರೀಕ್ಷೆ ಆರಂಭವಾಗುವ ಮೊದಲು ರಾಜ್ಯ ಸರ್ಕಾರದ ಸುತ್ತೋಲೆಯನ್ನು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಗೋಡೆಗೆ ಅಂಟಿಸಿದರು. ಈ ಸಂಬಂಧ ಒಟ್ಟು 11 ಅಂಶಗಳಿರುವ ಸುತ್ತೋಲೆಯನ್ನು ಸರ್ಕಾರ ಪ್ರಕಟಿಸಿತ್ತು.

ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಮನವಿ ಮಾಡಿದರು. ಪರೀಕ್ಷೆ ಆರಂಭವಾದರೂ ಇವರಿಬ್ಬರೂ ಪ್ರಾಚಾರ್ಯರ ಕಚೇರಿಯಲ್ಲಿಯೇ ಕುಳಿತಿದ್ದು ಚರ್ಚೆ ಮುಂದುವರಿಸಿದರು. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ ನಂತರ ಇವರಿಬ್ಬರೂ ಪರೀಕ್ಷೆ ಬರೆಯದೆ ವಿದ್ಯೋದಯ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಮನೆಗೆ ಮರಳಿದರು. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿ, ಅಟೋ ಹತ್ತಿ ಮನೆಯ ಕಡೆಗೆ ಹೋದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಾಟೆಗೆ ಕಾರಣ ಇಲ್ಲಿದೆ

ಇದನ್ನೂ ಓದಿ: ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ವಶ, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು

Published On - 11:30 am, Fri, 22 April 22

ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
ಡಿಜಿಪಿ ರಾಮಚಂದ್ರ ರಾವ್ ಅಮಾನತು
ಡಿಜಿಪಿ ರಾಮಚಂದ್ರ ರಾವ್ ಅಮಾನತು
VIDEO: ಪಾಕ್ ಆಟಗಾರನ ಕ್ಯಾಚ್​ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
VIDEO: ಪಾಕ್ ಆಟಗಾರನ ಕ್ಯಾಚ್​ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಧ್ರುವಂತ್
‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಧ್ರುವಂತ್
ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ
ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ