ಪರೀಕ್ಷೆಯಲ್ಲಿ ಫೇಲ್​; ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 06, 2023 | 1:28 PM

ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನಲೆ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೋರ್ವ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ.

ಪರೀಕ್ಷೆಯಲ್ಲಿ ಫೇಲ್​; ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಮೃತ ವಿದ್ಯಾರ್ಥಿ
Follow us on

ಬೆಂಗಳೂರು: ಕಾಲೇಜು ವಿದ್ಯಾರ್ಥಿ(College Student) ಯೋರ್ವ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ. ಚಾರ್ಲ್ಸ್(18) ಮೃತ ವಿದ್ಯಾರ್ಥಿ. ಚಾರ್ಲ್ಸ್ ಆರು ತಿಂಗಳ ಹಿಂದೆ ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದ. ನಂತರ ಮರು ಪರೀಕ್ಷೆ ಕಟ್ಟಿ ಎಕ್ಸಾಂ ಬರೆದಿದ್ದ ಚಾರ್ಲ್ಸ್, ಅದರಲ್ಲೂ ಫೇಲ್​ಯಾಗಿದ್ದ. ಈ ವೇಳೆ ಕಾಲೇಜಿನವರು ಮೃತ ಬಾಲಕನ ಫೋಷಕರಿಗೆ ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು.

ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಮೊದಲ ಬಾರಿ ಫೇಲಾಗಿದ್ದಾಗಿನಿಂದಲೂ ಮನನೊಂದಿದ್ದ ಚಾರ್ಲ್ಸ್, ಪುನಃ ಅನುತ್ತೀರ್ಣವಾದ ಹಿನ್ನಲೆ ಖಿನ್ನತೆಗೆ ಒಳಗಾಗಿ, ಸಾಯಲು ನಿರ್ಧಾರ ಮಾಡಿದ್ದ. ಅದರಂತೆ ನಿನ್ನೆ(ಜು.5) ರಾತ್ರಿ 9:30 ರ ಸುಮಾರಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಚಾರ್ಲ್ಸ್ ಮೃತದೇಹವನ್ನು ಸಿವಿ ರಾಮನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೆಎಸ್​ಆರ್​​ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗರಂ, ನಾಗಮಂಗಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿ

ನಿಂತಿದ್ದ ಕಾರಿಗೆ ಆಟೋ ಡಿಕ್ಕಿಯಾಗಿ ಚಾಲಕ ದುರ್ಮರಣ

ಬೆಂಗಳೂರು: ನಿಂತಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿದ್ದು, ಗುದ್ದಿರುವ ರಭಸಕ್ಕೆ ಆಟೋ ಚಾಲಕ ರಂಗನಾಥ(40) ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಿನ್ನೆ(ಜು.5) ರಾತ್ರಿ ನಡೆದಿದೆ. ಕೆಎ 01-AH 7625 ನಂಬರಿನ ಆಟೋ ಓಡಿಸುತ್ತಿದ್ದ ಮೃತ ರಂಗನಾಥ, ನಿಯಂತ್ರಣ ತಪ್ಪಿ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ