ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ

ಧಾರವಾಡ ನಗರದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಪಿಂಚಣಿ ಹಣ ಮತ್ತು ಆಸ್ತಿ ಆಸೆಗಾಗಿ ಮಗ ತಾಯಿಯನ್ನು ಕೊಲೆ ಮಾಡಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ.

ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ
ಸಾಂದರ್ಭಿಕ ಚಿತ್ರ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on: Mar 03, 2024 | 1:51 PM

ಧಾರವಾಡ, ಮಾರ್ಚ್​ 03: ಮಗ (Son) ತಾಯಿಯನ್ನು (Mother) ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ (Dharwad) ನಗರದ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ. ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ. ರಾಜೇಶ ಭಜಂತ್ರಿ (40) ಕೊಲೆ ಮಾಡಿದ ವ್ಯಕ್ತಿ. ರಾಜೇಶ್​ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದನು. ತಾಯಿ ಶಾರದಾ ಭಜಂತ್ರಿ ಬರುತ್ತಿದ್ದ 19 ಸಾವಿರ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ರಾಜೇಶ್​ ಕಣ್ಣಿಟ್ಟಿದ್ದನು. ಪಿಂಚಣಿ ಹಣ ನನಗೆ ನೀಡು ಮತ್ತು ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡುವಂತೆ ರಾಜೇಶ್​​ ತಾಯಿ ಶಾರದಾ ಭಜಂತ್ರಿ ದುಂಬಾಲು ಬಿದ್ದಿದ್ದನು. ಆದರೆ ಶಾರಾದಾ ಭಜಂತ್ರಿ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿದೆ.

ಜಾಗಳ ತಾರಕಕ್ಕೇರಿ ರಾಜೇಶ್​ ತಾಯಿ ಶಾರಾದಾ ಭಜಂತ್ರಿಗೆ ರಾಡ್‌ನಿಂದ ಹಿಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಚಾರಿ ಕುರಿಗಾಹಿ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕಿರೆಸೂರು ಗ್ರಾಮದ ಹೊಲದಲ್ಲಿ ಕುರಿ ಮೇಯಿಸಿದ ಕಾರಣಕ್ಕೆ ಕುರಿಗಾಹಿ ಹೊನ್ನಪ್ಪ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕಿರೆಸೂರು ಗ್ರಾಮದ ವೆಂಕಟೇಶ್ ಸೋಮನಗೌಡ ಹಲ್ಲೆ ಮಾಡಿದ ಆರೋಪಿ. ಕುರಿಗಾಹಿಯನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ

ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಕೊಪ್ಪಳ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ. ದ್ಯಾಮ ನಾಯಕ (28) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ದ್ಯಾಮ ನಾಯಕ ಬ್ಯಾಂಕ್ ಹಾಗೂ ಸ್ವ ಸಹಾಯ ಗುಂಪಿನಲ್ಲಿ ಸಾಲ ಮಾಡಿಕೊಂಡಿದ್ದನು. ಬರ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡು ರೈತ ದ್ಯಾಮ ನಾಯಕ ಕಂಗಾಲಾಗಿದ್ದನು. ಈ ಮಧ್ಯೆ ಸಾಲಭಾದೆ ತಾಳಲಾರದೆ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ