AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಬ್ರಹ್ಮಾವರದ ಹನೆಹಳ್ಳಿಯಲ್ಲಿ ಗುಂಡಿಕ್ಕಿ ಯುವಕನ ಕೊಲೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ಗುಂಡಿಕ್ಕಿ ಯುವಕನ ಕೊಲೆ ಮಾಡಲಾಗಿದೆ. ಶನಿವಾರ ರಾತ್ರಿ 9:30ರ ಸುಮಾರಿಗೆ ಫೈರಿಂಗ್ ಶಬ್ದ ಕೇಳಿ ಬಂತು. ಪಟಾಕಿಯ ಶಬ್ದವೆಂದು ಸುಮ್ಮನಾದೆವು. ಕೃಷ್ಣ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.

ಉಡುಪಿ: ಬ್ರಹ್ಮಾವರದ ಹನೆಹಳ್ಳಿಯಲ್ಲಿ ಗುಂಡಿಕ್ಕಿ ಯುವಕನ ಕೊಲೆ
ಶೂಟೌಟ್​ ನಡೆದ ಸ್ಥಳ
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ|

Updated on:Mar 03, 2024 | 1:17 PM

Share

ಉಡುಪಿ, ಮಾರ್ಚ್​​ 03: ಬ್ರಹ್ಮಾವರ (Brahmavar) ತಾಲೂಕಿನ ಹನೆಹಳ್ಳಿಯಲ್ಲಿ ಗುಂಡಿಕ್ಕಿ (Firing) ಯುವಕನ ಕೊಲೆ ಮಾಡಲಾಗಿದೆ. ಕೃಷ್ಣ (36) ಮೃತ ಯುವಕ. ಶನಿವಾರ (ಮಾ.02) ರ ರಾತ್ರಿ ಘಟನೆ ನಡೆದಿದೆ. ಶನಿವಾರ ರಾತ್ರಿ 9:30ರ ಸುಮಾರಿಗೆ ಫೈರಿಂಗ್ ಶಬ್ದ ಕೇಳಿ ಬಂತು. ಪಟಾಕಿಯ ಶಬ್ದವೆಂದು ಸುಮ್ಮನಾದೆವು. ಕೃಷ್ಣ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಕೃಷ್ಣ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದನು. ಶನಿವಾರ ರಾತ್ರಿ ಊಟ ಮಾಡುತ್ತಿರುವ ವೇಳೆ ಶೂಟೌಟ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಭೇಟಿ ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಟೋಗಾಗಿ ಕಾಯುತ್ತಿದ್ದ ಮಹಿಳೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ

ಬೆಂಗಳೂರು: ಕಳೆದ ಕಲೆ ದಿನಗಳ ಹಿಂದ ನಗರದ ಶಾಂತಿನಗರದ ಜನತಾಕೋ ಆಪರೇಟಿವ್ ಕಟ್ಟಡದ ಬಳಿ ಶವ ಪತ್ತೆಯಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ  ಮೇಲ್ನೋಟಕ್ಕೆ ಮಹಿಳೆ ಕಟ್ಟಡದಿಂದ ಬಿದ್ದು ಮೃತಪಟ್ಟಂತೆ ಕಾಣುತ್ತಿತ್ತು. ಬಳಿಕ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರವೆಸಗಿ ಕೊಂದಿರುವುದು ದೃಢವಾಗಿತ್ತು. ಕೂಡಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಮುಬಾರಕ್ (28) ಎಂಬ ಆಟೋ ಚಾಲಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂಬ ವಿಚಾರ ತಿಳಿಯುತ್ತದೆ.

ಇದನ್ನೂ ಓದಿ: ನಿದ್ದೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದ ತಂದೆ; ಚಿಕಿತ್ಸೆ ಫಲಿಸದೆ ಸಾವು, ತಾಯಿಯ ಆಕ್ರಂದನ

ಕೂಡಲೆ ಪೊಲೀಸರು ಆರೋಪಿ ಮುಬಾರಕ್​ನನ್ನು ವಶಕ್ಕೆ ಪಡೆದುಕೊಂಡರು. ವಿಚಾರಣೆಗೆ ಒಳಪಡಿಸಿದಾಗ,  “ಫೆಬ್ರವರಿ 20ರ ಮುಂಜಾನೆ ಮಾರ್ಕೆಟ್ ಬಳಿ ನಿಂತಿದ್ದ ಮಹಿಳೆಯನ್ನು ಸಂಪಂಗಿರಾಮನಗರಕ್ಕೆ ಕರೆತಂದೆ. ಜನತಾ ಕೋ ಆಪರೇಟಿವ್ ಕಟ್ಟಡದ ಮೊದಲ ಮಹಡಿಗೆ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರವೆಸಗಿದೆ. ಬಳಿಕ ಕಟ್ಟಡದ  ಮೇಲಿಂದ ತಳ್ಳಿ ಕೊಲೆ ಮಾಡಿದೆ” ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಹತ್ಯೆಗೀಡಾಗಿರುವ ಮಹಿಳೆಯ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಸಂಪಂಗಿರಾಮನಗರ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Sun, 3 March 24