ವ್ಯಕ್ತಿಯೊಬ್ಬ Drugs ಸೇವಿಸಿರೋದನ್ನ ಖಾಕಿ ಪಡೆ ಪತ್ತೆ ಹಚ್ಚುವುದು ಹೇಗೆ ಗೊತ್ತಾ?
ಬೆಂಗಳೂರು: ವ್ಯಕ್ತಿಯೊಬ್ಬ ಮಾದಕ ವಸ್ತುಗಳನ್ನ ಸೇವಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಸಾಮಾನ್ಯವಾಗಿ ಆತನ ಮೂತ್ರ ಪರೀಕ್ಷೆ ನಡೆಸಲಾಗುತ್ತದೆ ಎಂದು ತಜ್ಞ ವೈದ್ಯ ಡಾ.ಪವನ್ ಟಿವಿ 9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವ್ಯಕ್ತಿಗೆ ಗಂಟಲು ಸ್ವ್ಯಾಬ್ ಮೂಲಕವೂ ಟೆಸ್ಟ್ ಮಾಡಲಾಗುವುದು. ಇದಲ್ಲದೆ, ಆತನ ರಕ್ತ ಮತ್ತು ಕೂದಲಿನ ಮಾದರಿ ಪಡೆದು ಟೆಸ್ಟ್‌ನಿಂದ ಮಾದಕ ವಸ್ತುಗಳನ್ನ ಸೇವಿಸಿರುವ ಬಗ್ಗೆ ತಿಳಿಯಬಹುದಂತೆ. ಕೆಲವೊಂದು ಸಮಯದಲ್ಲಿ ಗರ್ಭಿಣಿಯರು ಗಾಂಜಾ ಸೇವನೆ ಮಾಡಿದ್ದರೆ ಅವರ ಹೊಕ್ಕಳು ಮೂಲಕ ಟೆಸ್ಟ್ ಮಾಡ್ತಾರೆ. ಜೊತೆಗೆ […]
ಬೆಂಗಳೂರು: ವ್ಯಕ್ತಿಯೊಬ್ಬ ಮಾದಕ ವಸ್ತುಗಳನ್ನ ಸೇವಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಸಾಮಾನ್ಯವಾಗಿ ಆತನ ಮೂತ್ರ ಪರೀಕ್ಷೆ ನಡೆಸಲಾಗುತ್ತದೆ ಎಂದು ತಜ್ಞ ವೈದ್ಯ ಡಾ.ಪವನ್ ಟಿವಿ 9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ ವ್ಯಕ್ತಿಗೆ ಗಂಟಲು ಸ್ವ್ಯಾಬ್ ಮೂಲಕವೂ ಟೆಸ್ಟ್ ಮಾಡಲಾಗುವುದು. ಇದಲ್ಲದೆ, ಆತನ ರಕ್ತ ಮತ್ತು ಕೂದಲಿನ ಮಾದರಿ ಪಡೆದು ಟೆಸ್ಟ್‌ನಿಂದ ಮಾದಕ ವಸ್ತುಗಳನ್ನ ಸೇವಿಸಿರುವ ಬಗ್ಗೆ ತಿಳಿಯಬಹುದಂತೆ.
ಕೆಲವೊಂದು ಸಮಯದಲ್ಲಿ ಗರ್ಭಿಣಿಯರು ಗಾಂಜಾ ಸೇವನೆ ಮಾಡಿದ್ದರೆ ಅವರ ಹೊಕ್ಕಳು ಮೂಲಕ ಟೆಸ್ಟ್ ಮಾಡ್ತಾರೆ. ಜೊತೆಗೆ ಆಕೆಯ, ಮಗುವಿನ ಹೊಕ್ಕಳಿನಿಂದ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡ್ತಾರೆ. ಇದರಿಂದಲೂ ಮಾದಕ ವಸ್ತು ಸೇವನೆ ಬಗ್ಗೆ ತಿಳಿಯಬಹುದು ಎಂದು ತಜ್ಞ ವೈದ್ಯ ಡಾ. ಪವನ್ ಹೇಳುತ್ತಾರೆ.
ವ್ಯಕ್ತಿಯೊಬ್ಬ ಡ್ರಗ್ಸ್ ಸೇವನೆ ಮಾಡಿದ್ದರೆ ಅದು ಆತನ ದೇಹದಲ್ಲಿ ಕೆಲವು ಗಂಟೆಗಳ ಕಾಲ ಇರುತ್ತದಂತೆ. ಕಡಿಮೆ ಪ್ರಮಾಣದಲ್ಲಿ ಸೇವಿಸಿದ್ದರೆ ಸುಮಾರು 3 ಗಂಟೆಗಳ ಕಾಲ ಇರುತ್ತದೆ. ಒಂದು ವೇಳೆ, ಡೋಸ್ ಜಾಸ್ತಿ ತೆಗದುಕೊಂಡಿದ್ದರೆ 1 ದಿನದಿಂದ 3 ದಿನದವರೆಗೂ ಸಹ ಡ್ರಗ್ಸ್ ಅಂಶ ಹಾಗೇ ಇರುತ್ತದಂತೆ.
ಯಾವ ಡ್ರಗ್ಸ್ ಎಷ್ಟು ಗಂಟೆ/ದಿನಗಳ ಕಾಲ ಶರೀರದಲ್ಲಿ ಇರುತ್ತದೆ? 1. LSD -30 ನಿಮಷದಿಂದ 24 ಗಂಟೆಗಳವರೆಗೆ 2. ಕೊಕೇನ್ -15 ನಿಮಿಷದಿಂದ 90 ನಿಮಿಷಗಳ ವರೆಗೆ
ಇನ್ನು, ಸತತವಾಗಿ ಮಾದಕ ವಸ್ತು ಸೇವಿಸ್ತಿದ್ದರೆ ಅವರ ರಕ್ತದಲ್ಲಿ ಡ್ರಗ್ಸ್ ಅಂಶ ಬಹಳ ಸುಲಭವಾಗಿ ಪತ್ತೆಯಾಗುತ್ತದೆ.