ವಿಲಾಸಿ ಜೀವನಕ್ಕಾಗಿ ಮನೆಗಳವು ಮಾಡ್ತಿದ್ದ ಆರೋಪಿಯ ಬೆರಳಚ್ಚು ಆಧರಿಸಿ ಅರೆಸ್ಟ್
ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ 42 ವರ್ಷದ ಖಲೀಲ್ ಖಾನ್ ಎಂದು ತಿಳಿದುಬಂದಿದೆ. ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಂದ ಆರೋಪಿಯ ಬಂಧನವಾಗಿದೆ. ಜುಲೈ 6 ರಂದು ಬನಶಂಕರಿಯಲ್ಲಿ ಮನೆಗಳವು ಮಾಡಿದ್ದ ಆರೋಪಿಯ ವಿರುದ್ಧ ಈ ಹಿಂದೆಯೂ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಬೆರಳಚ್ಚು ಆಧರಿಸಿ ಪರಿಶೀಲನೆ ನಡೆಸುವಾಗ ಖಲೀಲ್ ಕೃತ್ಯ ಬಯಲಾಗಿದೆ. ಬಂಧಿತನಿಂದ 19.65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನ ಸಹ […]
ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ 42 ವರ್ಷದ ಖಲೀಲ್ ಖಾನ್ ಎಂದು ತಿಳಿದುಬಂದಿದೆ.
ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಂದ ಆರೋಪಿಯ ಬಂಧನವಾಗಿದೆ. ಜುಲೈ 6 ರಂದು ಬನಶಂಕರಿಯಲ್ಲಿ ಮನೆಗಳವು ಮಾಡಿದ್ದ ಆರೋಪಿಯ ವಿರುದ್ಧ ಈ ಹಿಂದೆಯೂ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಬೆರಳಚ್ಚು ಆಧರಿಸಿ ಪರಿಶೀಲನೆ ನಡೆಸುವಾಗ ಖಲೀಲ್ ಕೃತ್ಯ ಬಯಲಾಗಿದೆ.
ಬಂಧಿತನಿಂದ 19.65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನ ಸಹ ವಶಕ್ಕೆ ಪಡೆಯಲಾಗಿದೆ. ಆರೋಪಿಯ ಬಂಧನದಿಂದ ಸದ್ಯ 5 ಮನೆ ಕಳ್ಳತನ ಹಾಗೂ 2 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬಗೆ ಹರಿದಿದೆ.