ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಕೊಲೆ, ಮಗ ನಾಪತ್ತೆ

| Updated By: ಆಯೇಷಾ ಬಾನು

Updated on: Jun 10, 2020 | 2:28 PM

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆಯಾಗುತ್ತಿದ್ದಂತೆ ಬೆಂಗಳೂರಿನಲ್ಲೂ ಕ್ರೈಂಗಳು ಹೆಚ್ಚಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮಹದೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ. ವೃದ್ಧ ದಂಪತಿಯನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನರಸಿಂಹ ರಾಜು(70), ಸರಸ್ವತಿ(60) ಹತ್ಯೆಯಾದ ದುರ್ದೈವಿಗಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೈಸೂರು ಮೂಲದ ದಂಪತಿ: ಮೂಲತಃ ಮೈಸೂರಿನವರಾದ ವೃದ್ಧ ದಂಪತಿ ಕಳೆದ ಒಂದು ವರ್ಷದಿಂದ ಕಾವೇರಿಪುರದ ನಿವಾಸದಲ್ಲಿ ವಾಸವಿದ್ದರು. ಹತ್ಯೆಯಾದ ನರಸಿಂಹರಾಜು ಮದುವೆ ಬ್ರೋಕರ್ ಆಗಿದ್ದರು. ಕಳೆದ 10 ವರ್ಷಗಳ ಹಿಂದೆ ಕೆಲಸ […]

ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಕೊಲೆ, ಮಗ ನಾಪತ್ತೆ
Follow us on

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆಯಾಗುತ್ತಿದ್ದಂತೆ ಬೆಂಗಳೂರಿನಲ್ಲೂ ಕ್ರೈಂಗಳು ಹೆಚ್ಚಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮಹದೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ. ವೃದ್ಧ ದಂಪತಿಯನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನರಸಿಂಹ ರಾಜು(70), ಸರಸ್ವತಿ(60) ಹತ್ಯೆಯಾದ ದುರ್ದೈವಿಗಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.

ಮೈಸೂರು ಮೂಲದ ದಂಪತಿ:
ಮೂಲತಃ ಮೈಸೂರಿನವರಾದ ವೃದ್ಧ ದಂಪತಿ ಕಳೆದ ಒಂದು ವರ್ಷದಿಂದ ಕಾವೇರಿಪುರದ ನಿವಾಸದಲ್ಲಿ ವಾಸವಿದ್ದರು. ಹತ್ಯೆಯಾದ ನರಸಿಂಹರಾಜು ಮದುವೆ ಬ್ರೋಕರ್ ಆಗಿದ್ದರು. ಕಳೆದ 10 ವರ್ಷಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಮೃತ ಸರಸ್ವತಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಇವರೂ ಸಹ ಕಳೆದ 5 ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು.

ಘಟನೆ ಬಳಿಕ ಮಗ ನಾಪತ್ತೆ:
ಘಟನೆ ಬಳಿಕ ನಿನ್ನೆ ರಾತ್ರಿಯಿಂದ ವೃದ್ಧ ದಂಪತಿ ಪುತ್ರ ಸಂತೋಷ್ ನಾಪತ್ತೆಯಾಗಿದ್ದಾರೆ. ತಾಯಿ-ತಂದೆ ಜೊತೆ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸಂತೋಷ್ ವೃತ್ತಿಯಲ್ಲಿ ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ ಕಾಮಾಕ್ಷಿಪಾಳ್ಯದಲ್ಲೇ ತನ್ನ ಸ್ವಂತ ಕಚೇರಿ ಹೊಂದಿದ್ದಾನೆ. ಗರ್ಭಿಣಿ ಹಿನ್ನೆಲೆಯಲ್ಲಿ ಪತ್ನಿಯನ್ನು ಸಂತೋಷ್ ಊರಿಗೆ ಬಿಟ್ಟುಬಂದಿದ್ದ.

ಕೆಲಸದಾಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ:
ಇಂದು ಬೆಳಗ್ಗೆ 8.30ರ ಸುಮಾರಿಗೆ ಕೆಲಸದಾಕೆ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಒಳಗೆ ಬಂದು ನೋಡಿದಾಗ‌ ಹಾಲ್​ನಲ್ಲಿ ನರಸಿಂಹ ರಾಜು ಮೃತದೇಹ ಬಿದ್ದಿತ್ತು. ಬಳಿಕ ರೂಂಗೆ ತೆರಳಿದಾಗ ಅಲ್ಲಿ ಸರಸ್ವತಿ ಮೃತ ದೇಹವಿತ್ತು. ಸರಸ್ವತಿ ಬಾಯಿನಲ್ಲಿ ಬಟ್ಟೆ ತುರುಕಿರುವುದು ಪತ್ತೆಯಾಗಿದೆ. ಕೂಡಲೇ 100ಗೆ ಕರೆ ಮಾಡಿ ಮನೆ ಕೆಲಸದಾಕೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ತಕ್ಷಣ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Published On - 11:21 am, Wed, 10 June 20