ಕಣ್ವ ಸಂಸ್ಥೆಯ ನೂರಾರು ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED
ಬೆಂಗಳೂರು: ಕಣ್ವ ಸಂಸ್ಥೆಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಸುಮಾರು 255.17 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು ಹಾಕಿದೆ. ಆಸ್ತಿ ಮುಟ್ಟುಗೋಲಿನ ಕುರಿತು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದ್ದು PMLA ಕಾಯ್ದೆಯಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಮಾಹಿತಿ ನೀಡಿದೆ. ಕಣ್ವ ಸಂಸ್ಥೆಯ MD ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಹೂಡಿಕೆ 650 ಕೋಟಿ ರೂ- 255 ಕೋಟಿ ಆಸ್ತಿ ಮುಟ್ಟುಗೋಲು! ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಯಷ್ಟು […]
ಬೆಂಗಳೂರು: ಕಣ್ವ ಸಂಸ್ಥೆಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಸುಮಾರು 255.17 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು ಹಾಕಿದೆ.
ಆಸ್ತಿ ಮುಟ್ಟುಗೋಲಿನ ಕುರಿತು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದ್ದು PMLA ಕಾಯ್ದೆಯಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಮಾಹಿತಿ ನೀಡಿದೆ. ಕಣ್ವ ಸಂಸ್ಥೆಯ MD ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.
ಹೂಡಿಕೆ 650 ಕೋಟಿ ರೂ- 255 ಕೋಟಿ ಆಸ್ತಿ ಮುಟ್ಟುಗೋಲು! ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಕಣ್ವ ಗ್ರೂಪ್ ನಂತರ ಹೂಡಿಕೆದಾರರಿಗೆ ಬಡ್ಡಿ ನೀಡುವಲ್ಲಿ ವಿಫಲವಾಗಿತ್ತು. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ನಂತರ ಈ ಪ್ರಕರಣ CIDಗೆ ವರ್ಗಾವಣೆಯಾಗಿತ್ತು. ಈ ಕುರಿತು ED ಕೂಡ ಕೇಸ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿತ್ತು.