ವಿಜಯಪುರ: ನಿಧಿ ಆಸೆ ತೋರಿಸಿ 1.87 ಕೋಟಿ ರೂ. ವಂಚಿಸಿದ್ದ ನಕಲಿ ಬಾಬಾ ಅಂದರ್
ಜಮೀನನಲ್ಲಿರುವ ನಿಧಿ ತೆಗೆದುಕೊಡುವುದಾಗಿ ನಂಬಿಸಿ 1ಕೋಟಿ 87 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಾಬಾ ಪೊಲೀಸರ ಅತಿಥಿಯಾಗಿದ್ದಾನೆ. ನಿಧಿ ಹೆಸರಲ್ಲಿ ಸೊಲ್ಲಾಪುರದ ಹಲವರಿಗೆ ಈತ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಆರೋಪಿ ಬಾಬಾ ಮನೆಯಲ್ಲಿ ಮಾಟ ಮಂತ್ರಕ್ಕೆ ಉಪಯೋಗಿಸುವ ಹಲವು ಸಾಮಗ್ರಿಗಳು ಪತ್ತೆಯಾಗಿವೆ.

ವಿಜಯಪುರ, ಅಕ್ಟೋಬರ್ 13: ಜಮೀನನಲ್ಲಿರುವ ನಿಧಿ ತೆಗೆದುಕೊಡುವುದಾಗಿ ನಂಬಿಸಿ 1 ಕೋಟಿ 87 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಾಬಾನನ್ನು ಸೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಕಲಿ ಬಾಬಾನನ್ನು ಮಹ್ಮದ್ ಖಾದರ್ ಶೇಖ್ ಎಂದು ಗುರುತಿಸಲಾಗಿದೆ. ನಿಧಿ ಹೆಸರಲ್ಲಿ ಸೊಲ್ಲಾಪುರದ ಹಲವರಿಗೆ ಈತ ಮೋಸಮಾಡಿದ್ದು, ಆರೋಪಿಯನ್ನು ವಿಜಯಪುರದಲ್ಲಿ (Vijayapura) ಬಂಧಿಸಲಾಗಿದೆ.
ಸೊಲ್ಲಾಪುರದ ಗೋವಿಂದ ವಂಜಾರಿ ಎಂಬವರ ಜಮೀನಲ್ಲಿ ನಿಧಿ ಇದೆ. ಇದನ್ನು ತೆಗೆದುಕೊಡ್ತೀನಿ ಎಂದು ಮಹ್ಮದ್ ಖಾದರ್ ಶೇಖ್ ನಂಬಿಸಿ ವಂಚನೆ ಮಾಡಿದ್ದ. ಈ ಬಗ್ಗೆ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಎಸ್ಪಿ ದತ್ತಾತ್ರೇಯ ಕಾಳೆ ನೇತೃತ್ವ ತಂಡ ಆರೋಪಿಗಾಗಿ ಬಲೆ ಬೀಸಿತ್ತು. ಆರೋಪಿ ಮನೆಯಲ್ಲಿ ಮಾಟ ಮಂತ್ರಕ್ಕೆ ಉಪಯೋಗಿಸುವ ಹಲವು ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: RSS ಸದಸ್ಯರಿಂದ ಲೈಂಗಿಕ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ ಖತರ್ನಾಕ್ ಗ್ಯಾಂಗ್ ಅಂದರ್
ಮನೆ ಮಾಲೀಕರಿಗೆ ಕರೆಂಟ್ ಶಾಕ್ ನೀಡಿ ಕಳ್ಳತನ ಮಾಡುತ್ತಿದ್ದ ಗ್ಯಾಂಗನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಹಂಸತಾರಕಂ ಎಂಬವರ ಮನೆಯಲ್ಲಿ ಕಳ್ಳತನ ಯತ್ನ ನಡೆದಿತ್ತು. ತಡರಾತ್ರಿ ಮನೆಯ ಕಾಲಿಂಗ್ ಬೆಲ್ ಶಬ್ದ ಕೇಳಿ ಎಚ್ಚರಗೊಂಡ ಮನೆಯವರು ಒಳಗಿನಿಂದಲೇ ನೋಡಿದಾಗ ಮಾಸ್ಕ್ ಧರಿಸಿದ್ದ ಮೂವರು ಕಂಡಿದ್ದರು. ಈ ವೇಳೆ ಭಯಗೊಂಡ ಮನೆ ಮಾಲೀಕ ಅಕ್ಕ ಪಕ್ಕದ ಸಂಬಂಧಿಕರಿಗೆ ಪೋನ್ ಮಾಡಿದ್ದು, ಜನ ಬರುತ್ತಿದ್ದಂತೆ ಗ್ಯಾಂಗ್ ಪರಾರಿಯಾಗಿತ್ತು. ಮನೆ ಮಾಲೀಕರು ಬಾಗಿಲು ತೆಗೆದರೆ ಅಲ್ಲಿರುವ ಮೀಟರ್ ನಿಂದ ವೈಯರ್ ಸಂಪರ್ಕಿಸಿ ವಿದ್ಯುತ್ ಶಾಕ್ ನೀಡಲು ಕಳ್ಳರು ಪ್ಲ್ಯಾನ್ ಮಾಡಿದ್ದರು ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದ್ದು, ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Mon, 13 October 25



