ಹೈ ಡೋಸ್​ನಿಂದ ಗ್ರಾಮ ಲೆಕ್ಕಾಧಿಕಾರಿ ಬಲಿ, ವೈದ್ಯರ ನಿರ್ಲಕ್ಷ್ಯವೆಂದ ಕುಟುಂಬಸ್ಥರು

ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಇಡೀ ಕುಟುಂಬ ಕಣ್ಣೀರು ಹಾಕಿದೆ. ಪ್ರಾಣ ಉಳಿಸಬೇಕಿದ್ದ ವೈದ್ಯರೇ ಇಲ್ಲಿ ಈತನ ಸಾವಿಗೆ ಕಾರಣರಾಗಿದ್ದಾರಂತೆ. ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದರಾ ಗ್ರಾಮ ಲೆಕ್ಕಾಧಿಕಾರಿ..? ಕಲಬುರಗಿ ತಾಲೂಕಿನ ನಂದೂರು ಗ್ರಾಮ ನಿವಾಸಿ ಅಣವೀರಪ್ಪ ಮೃತ ವ್ಯಕ್ತಿ. ಇವರು ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡ್ತಿದ್ರು. 4 ದಿನದ ಹಿಂದೆ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರವೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಯಾಕಂದ್ರೆ, ವೈದ್ಯರು […]

ಹೈ ಡೋಸ್​ನಿಂದ ಗ್ರಾಮ ಲೆಕ್ಕಾಧಿಕಾರಿ ಬಲಿ,  ವೈದ್ಯರ ನಿರ್ಲಕ್ಷ್ಯವೆಂದ ಕುಟುಂಬಸ್ಥರು
ಸಾಧು ಶ್ರೀನಾಥ್​

Updated on: Nov 21, 2019 | 10:56 AM

ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಇಡೀ ಕುಟುಂಬ ಕಣ್ಣೀರು ಹಾಕಿದೆ. ಪ್ರಾಣ ಉಳಿಸಬೇಕಿದ್ದ ವೈದ್ಯರೇ ಇಲ್ಲಿ ಈತನ ಸಾವಿಗೆ ಕಾರಣರಾಗಿದ್ದಾರಂತೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದರಾ ಗ್ರಾಮ ಲೆಕ್ಕಾಧಿಕಾರಿ..?
ಕಲಬುರಗಿ ತಾಲೂಕಿನ ನಂದೂರು ಗ್ರಾಮ ನಿವಾಸಿ ಅಣವೀರಪ್ಪ ಮೃತ ವ್ಯಕ್ತಿ. ಇವರು ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡ್ತಿದ್ರು. 4 ದಿನದ ಹಿಂದೆ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರವೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಯಾಕಂದ್ರೆ, ವೈದ್ಯರು ಸರಿಯಾಗಿ ಟ್ರೀಟ್ಮೇಂಟೇ ನೀಡಿಲ್ವಂತೆ.

ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ಗೆ ಬದಲಾಯಿಸಿದ್ದು ಬಿಟ್ಟರೆ ಸರಿಯಾಗಿ ಟ್ರೀಟ್ಮೇಂಟೇ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ನಿನ್ನೆ ಮಧ್ಯಾಹ್ನ ಹೈ ಡೋಸ್ ಇಂಜೆಕ್ಷನ್ ನೀಡಿದ್ರಿಂದ ಮೃತಪಟ್ಟಿದ್ದಾನೆ ಅಂತಾ ಮೃತನ ಪತ್ನಿ ಆರೋಪಿಸುತ್ತಿದ್ದಾರೆ.

ಕಲಬುರಗಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಬಹುತೇಕ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ಉದಾಸೀನತೆ ತೋರ್ತಾಯಿದ್ದಾರೆ. ಡ್ಯೂಟಿ ಡಾಕ್ಟರ್ ಬದ್ಲಾಗಿ ಸ್ಟೂಡೆಂಟ್ಸೇ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದಾರೆ. ಇದ್ರಿಂದಲೇ ಅನೇಕರು ಮೃತಟ್ಟಿದ್ದಾರೆ ಅನ್ನೋ ಆರೋಪಗಳು ಕೇಳಿಬರ್ತಿವೆ. ಈ ಬಗ್ಗೆ ಜಿಮ್ಸ್ ನಿರ್ದೇಶಕರು, ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಿದ್ರೆ, ಖಂಡಿತವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Published On - 8:47 am, Thu, 21 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us