ಫೇಮಸ್ ಮ್ಯೂಸಿಕ್ ಡೈರೆಕ್ಟರ್, ಸ್ಟಾರ್ ನಟ, ರಿಯಾಲಿಟಿ ಶೋ ಸ್ಪರ್ಧಿ ಮೇಲೆ NCB ಕಣ್ಣು
ಬೆಂಗಳೂರು: ರಾಜ್ಯದಲ್ಲಿ NCB ದಾಳಿ ಬಳಿಕ ಸ್ಯಾಂಡಲ್ವುಡ್ ಮಂದಿಗೆ ಇದೀಗ ನಡುಕ ಶುರುವಾಗಿದೆ. ಸ್ಯಾಂಡಲ್ವುಡ್ನ ಹಲವು ನಟರು, ನಟಿಯರಿಗುಂಟು ಡ್ರಗ್ಸ್ ನಂಟು ಇದೆ ಎಂಬ ಮಾಹಿತಿಯನ್ನು NCB ತನಿಖೆ ವೇಳೆ ಅನಿಕಾ ಬಿಚ್ಚಿಟ್ಟಿದ್ದಾಳೆ. NCB ಯ ಮೊದಲನೆಯ ಟಾರ್ಗೆಟ್ ಆ ಮ್ಯೂಸಿಕ್ ಡೈರೆಕ್ಟರ್! ಕನ್ನಡದ ಜೊತೆಗೆ ದಕ್ಷಿಣ ಭಾರತದ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಆಗಿರುವ ವ್ಯಕ್ತಿ ಸಹ ಇದೀಗ NCB ಯ ಮೊದಲನೆಯ ಟಾರ್ಗೆಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿದೇಶದಲ್ಲಿಯೂ ಈತನ ಸ್ಟೇಜ್ ಶೋಗೆ ಬೇಡಿಕೆಯಿರುವ ಸಂಗೀತ […]
ಬೆಂಗಳೂರು: ರಾಜ್ಯದಲ್ಲಿ NCB ದಾಳಿ ಬಳಿಕ ಸ್ಯಾಂಡಲ್ವುಡ್ ಮಂದಿಗೆ ಇದೀಗ ನಡುಕ ಶುರುವಾಗಿದೆ. ಸ್ಯಾಂಡಲ್ವುಡ್ನ ಹಲವು ನಟರು, ನಟಿಯರಿಗುಂಟು ಡ್ರಗ್ಸ್ ನಂಟು ಇದೆ ಎಂಬ ಮಾಹಿತಿಯನ್ನು NCB ತನಿಖೆ ವೇಳೆ ಅನಿಕಾ ಬಿಚ್ಚಿಟ್ಟಿದ್ದಾಳೆ.
NCB ಯ ಮೊದಲನೆಯ ಟಾರ್ಗೆಟ್ ಆ ಮ್ಯೂಸಿಕ್ ಡೈರೆಕ್ಟರ್! ಕನ್ನಡದ ಜೊತೆಗೆ ದಕ್ಷಿಣ ಭಾರತದ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಆಗಿರುವ ವ್ಯಕ್ತಿ ಸಹ ಇದೀಗ NCB ಯ ಮೊದಲನೆಯ ಟಾರ್ಗೆಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿದೇಶದಲ್ಲಿಯೂ ಈತನ ಸ್ಟೇಜ್ ಶೋಗೆ ಬೇಡಿಕೆಯಿರುವ ಸಂಗೀತ ನಿರ್ದೇಶಕನಿಗೂ ಅನಿಕಾಳ ಡ್ರಗ್ಸ್ ಗ್ರಾಹಕ ಎಂದು ಹೇಳಲಾಗಿದೆ.
ಇವರೆಲ್ಲರೂ NCB ಯ ಟಾರ್ಗೆಟ್ ಆಗಿದ್ದಾರೆ ಕೇವಲ ಸಂಗೀತ ನಿರ್ದೇಶಕನಲ್ಲದೆ NCB ಯ ಎರಡನೇ ಟಾರ್ಗೆಟ್ ಆಗಿದ್ದಾನೆ ಕನ್ನಡದ ಆ ಸ್ಟಾರ್ ನಟ. ಪ್ರಭಾವಿ ಪತ್ರಕರ್ತರ ಸಂಬಂಧಿಯಾದ ನಟನೇ ಎರಡನೇ ಟಾರ್ಗೆಟ್ ಆಗಿದ್ದು ಜೊತೆಗೆ ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರೋ ನಟ ಕೂಡ ಮೂರನೇ ಟಾರ್ಗೆಟ್ ಆಗಿದ್ದಾನೆ.
ಅಷ್ಟೇ ಅಲ್ಲ, ರಿಯಾಲಿಟಿ ಶೋ ಸ್ಪರ್ಧಿ ಹಾಗೂ ಡ್ಯಾನ್ಸರ್ ಸಹ ಅನಿಕಾಳ ಪ್ರಮುಖ ಕಸ್ಟಮರ್ ಎಂದು ತಿಳಿದುಬಂದಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಈತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರೋ ಡ್ಯಾನ್ಸರ್. ಇದಲ್ಲದೆ, TikTok ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಹ ಫೇಮಸ್ ಆಗಿದ್ದಾನೆ.
ಕೇವಲ ಸ್ಟಾರ್ ನಟರಲ್ಲದೆ ಉದಯೋನ್ಮುಖ ತಾರೆಯೊಬ್ಬಳು ಕೂಡ ಡ್ರಗ್ಸ್ ಕಿಂಗ್ಪಿನ್ ಅನಿಕಾಳ ಗಿರಾಕಿ. ಜೊತೆಗೆ, ಕನ್ನಡ, ತೆಲುಗು, ತಮಿಳಿನಲ್ಲಿ ನಟಿಸಿದ್ದ ಈ ನಟಿಗಿದೆ ಡ್ರಗ್ಸ್ ನಂಟು. ಕನ್ನಡದ ಮೋಸ್ಟ್ ಕಾಂಟ್ರವರ್ಷಿಯಲ್ ನಟಿಯಾಗಿರುವ ಈಕೆ ಈಗ ಕನ್ನಡ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಬ್ಯುಸಿ ಆಗಿದ್ದಾಳೆ ಎಂದು ತಿಳಿದುಬಂದಿದೆ. ಒಟ್ನಲ್ಲಿ, NCB ತನಿಖೆ ಮುಂದುವರೆಯುತ್ತಿದ್ದು ಮತ್ತಷ್ಟು ಸ್ಯಾಂಡಲ್ವುಡ್ ಮಂದಿಯ ಹೆಸರು ಹೊರಬರುವ ಸಾಧ್ಯತೆಯಿದೆ.
Published On - 9:57 am, Sat, 29 August 20