ಅಜ್ಜಿಯಿಂದಲೇ ಮೊಮ್ಮಗನಿಗೆ ಪಂಚ್.. ಹೆತ್ತಮ್ಮನಿಂದಲೇ ಕೂಸಿಗೆ ಟಾರ್ಚರ್
ಬೆಂಗಳೂರು: ಎರಡು ವರ್ಷದ ಮಗು ಮೇಲೆ ಆತನ ಅಜ್ಜಿ ಮತ್ತು ತಾಯಿಯಿಂದ ಮಾರಣಾಂತಿಕ ಹಲ್ಲೆ ನಡೆದಿರೋ ಘಟನೆ ಬೆಳಕಿಗೆ ಬಂದಿದೆ. ಮೈಕೋಲೇಔಟ್ ಠಾಣಾ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ಮಗುವಿನ ಮೇಲೆ ತಾಯಿ ಮತ್ತು ಅಜ್ಜಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಗುವಿಗೆ ಬೆಂಕಿ ಹಚ್ಚಿ ಅಜ್ಜಿ ವಿಕೃತಿ ಮೆರೆದಿದ್ದಾಳೆ. 2 ವರ್ಷ 3 ತಿಂಗಳ ಮಗು ಮೇಲೆ ಅಜ್ಜಿ ಮುಬೀನಾ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ. ಗುರಪ್ಪನಪಾಳ್ಯದ ಇಮ್ರಾನ್ […]
ಬೆಂಗಳೂರು: ಎರಡು ವರ್ಷದ ಮಗು ಮೇಲೆ ಆತನ ಅಜ್ಜಿ ಮತ್ತು ತಾಯಿಯಿಂದ ಮಾರಣಾಂತಿಕ ಹಲ್ಲೆ ನಡೆದಿರೋ ಘಟನೆ ಬೆಳಕಿಗೆ ಬಂದಿದೆ.
ಮೈಕೋಲೇಔಟ್ ಠಾಣಾ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ಮಗುವಿನ ಮೇಲೆ ತಾಯಿ ಮತ್ತು ಅಜ್ಜಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಗುವಿಗೆ ಬೆಂಕಿ ಹಚ್ಚಿ ಅಜ್ಜಿ ವಿಕೃತಿ ಮೆರೆದಿದ್ದಾಳೆ. 2 ವರ್ಷ 3 ತಿಂಗಳ ಮಗು ಮೇಲೆ ಅಜ್ಜಿ ಮುಬೀನಾ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ಗುರಪ್ಪನಪಾಳ್ಯದ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಯ ಪುತ್ರನಾದ ಎರಡು ವರ್ಷದ ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ರೂ ಅವನ ತಾಯಿ ಅಜೀರಾ ನೋಡುತ್ತಾ ಕೂತಿರುತ್ತಾಳಂತೆ.
ಸದ್ಯ, ಗಾಯಾಳು ಮಗುವನ್ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುಬೀನಾ ಪರಾರಿಯಾಗಿದ್ದಾಳೆ.