ಆಸ್ತಿ ವಿಚಾರಕ್ಕೆ ಕೊಡಲಿ, ಕೋಲುಗಳಿಂದ 2 ಕುಟುಂಬಗಳ ಮಧ್ಯೆ ಮಾರಾಮಾರಿ! ಐವರಿಗೆ ಗಾಯ

ಯಾದಗಿರಿ: ಆಸ್ತಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಆಸ್ತಿ ವಿಚಾರವಾಗಿ ಕೈಯಲ್ಲಿ ಕೊಡಲಿ, ಕೋಲು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿವೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ನಾಲ್ಕು ಮಂದಿಗೆ ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಜಗಳ ನಡೀತಾನೆ ಇತ್ತು. […]

ಆಸ್ತಿ ವಿಚಾರಕ್ಕೆ ಕೊಡಲಿ, ಕೋಲುಗಳಿಂದ 2 ಕುಟುಂಬಗಳ ಮಧ್ಯೆ ಮಾರಾಮಾರಿ! ಐವರಿಗೆ ಗಾಯ
ಆಯೇಷಾ ಬಾನು

Updated on: Jun 29, 2020 | 8:21 AM

ಯಾದಗಿರಿ: ಆಸ್ತಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಆಸ್ತಿ ವಿಚಾರವಾಗಿ ಕೈಯಲ್ಲಿ ಕೊಡಲಿ, ಕೋಲು ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಘಟನೆಯಲ್ಲಿ ಐವರಿಗೆ ಗಾಯಗಳಾಗಿವೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ನಾಲ್ಕು ಮಂದಿಗೆ ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಜಗಳ ನಡೀತಾನೆ ಇತ್ತು. ನಿನ್ನೆ ಜಗಳ ವಿಕೋಪಕ್ಕೆ ಹೋಗಿ ಹೊಡೆದಾಡಿಕೊಂಡಿದ್ದಾರೆ. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us