ಆನೇಕಲ್: ಹಣದ ಆಸೆಗಾಗಿ ಫೈನಾನ್ಶಿಯರ್ನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿಯ ಸಿ.ಕೆ.ಪಾಳ್ಯದಲ್ಲಿ ನಡೆದಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ರವಿ ಎಂಬಾತನನ್ನು ನಾಲ್ವರು ಕಿರಾತಕರು ಅಪಹರಿಸಿದ್ದಾರೆ.
ಮಚ್ಚು ಲಾಂಗುಗಳನ್ನು ಇಟ್ಟುಕೊಂಡಿದ್ದ ಖದೀಮರು, ಫೈನಾನ್ಶಿಯರ್ ರವಿಯನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿದ್ದಾರೆ. ರವಿ ಬಳಿಯಿದ್ದ 6,500 ರೂಪಾಯಿಯನ್ನು ಕಸಿದುಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಕನಕಪುರ ರಸ್ತೆ ಬಳಿ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ.
ಫೈನಾನ್ಶಿಯರ್ ರವಿಯನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ. ಅಪಹರಣವಾದ ಬಗ್ಗೆ ಬನ್ನೇರುಘಟ್ಟ ಪೊಲೀಸರಿಗೆ ರವಿ ಮಾಹಿತಿ ನೀಡಿದ್ದಾನೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.