ವಾಹನ ನಿಲ್ಲಿಸಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕ ಚಾಲಕ

ರಾಮನಗರ: ಮಧ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕು ಮಾಕಳಿ ಮೂಲದ ಟಾಟಾ ಏಸ್ ಚಾಲಕನಾಗಿದ್ದ ಗಿರೀಶ್ ಬಿಡದಿಯಿಂದಲೂ ಗಾಡಿಯಲ್ಲೇ‌ ಕುಡಿದುಕೊಂಡು ಅಡ್ಡಾದಿಡ್ಡಿ ವಾಹನ ಚಲಾಯಿಸಿಕೊಂಡು ಬಂದಿದ್ದ. ಪ್ರಶ್ನೆ ಮಾಡಿದ ಇತರೆ ವಾಹನಗಳ ಚಾಲಕರಿಗೂ ಈತ ಅವಾಜ್ ಹಾಕಿದ್ದ. ಕೂಡಲೇ ಸಾರ್ವಜನಿಕರು ಪೊಲೀಸ್ ಠಾಣೆಗೆ‌ ಮಾಹಿತಿ ನೀಡಿದ್ದರು. ಈ ಹಿನ್ನಲೆ ನಿನ್ನೆ ತಡರಾತ್ರಿ ಮಧ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ಗಿರೀಶ್​ನನ್ನು ರಾಮನಗರ […]

ವಾಹನ ನಿಲ್ಲಿಸಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕ ಚಾಲಕ
sadhu srinath

|

Dec 06, 2019 | 1:28 PM

ರಾಮನಗರ: ಮಧ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕು ಮಾಕಳಿ ಮೂಲದ ಟಾಟಾ ಏಸ್ ಚಾಲಕನಾಗಿದ್ದ ಗಿರೀಶ್ ಬಿಡದಿಯಿಂದಲೂ ಗಾಡಿಯಲ್ಲೇ‌ ಕುಡಿದುಕೊಂಡು ಅಡ್ಡಾದಿಡ್ಡಿ ವಾಹನ ಚಲಾಯಿಸಿಕೊಂಡು ಬಂದಿದ್ದ.

ಪ್ರಶ್ನೆ ಮಾಡಿದ ಇತರೆ ವಾಹನಗಳ ಚಾಲಕರಿಗೂ ಈತ ಅವಾಜ್ ಹಾಕಿದ್ದ. ಕೂಡಲೇ ಸಾರ್ವಜನಿಕರು ಪೊಲೀಸ್ ಠಾಣೆಗೆ‌ ಮಾಹಿತಿ ನೀಡಿದ್ದರು. ಈ ಹಿನ್ನಲೆ ನಿನ್ನೆ ತಡರಾತ್ರಿ ಮಧ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ಗಿರೀಶ್​ನನ್ನು ರಾಮನಗರ ಎಸ್ಪಿ ಕಚೇರಿ ಮುಂಭಾಗ ಟ್ರಾಫಿಕ್ ಪೊಲೀಸ್ ಹಾಗೂ ರಾಮನಗರ ಟೌನ್ ಪೊಲೀಸರು ವಾಹನ ಅಡ್ಡಗಟ್ಟಿ ನಿಲ್ಲಿಸಿದ್ದರು.

ಕುಡಿದ ಮತ್ತಿನಲ್ಲಿದ ಗಿರೀಶ್ ಟ್ರಾಫಿಕ್ ಪೊಲೀಸ್ ಶಂಕರ್ ಪಾಟೀಲ್ ಹಾಗೂ ಟೌನ್ ಪೊಲೀಸ್ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಟ್ರಾಫಿಕ್ ಠಾಣೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾನೆ. ಕುಡಿದು ವಾಹನ ಚಾಲಾಯಿಸುತ್ತಿದ್ದಕ್ಕೆ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಚಾಲಕ ಗಿರೀಶ್ ವಿರುದ್ಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada