ನಟಿ ರಿಷಿಕಾ ಕಾರು ಅಪಘಾತ ಪ್ರಕರಣ: ಚಾಲಕ ವಿರುದ್ಧ FIR ದಾಖಲು
ಬೆಂಗಳೂರು: ಚಿತ್ರನಟಿ ರಿಷಿಕಾ ಸಿಂಗ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾಲಕ ಆರ್ಯ ವಿರುದ್ಧ FIR ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 279, 338ರ ಅಡಿಯಲ್ಲಿ FIR ದಾಖಲಾಗಿದೆ. ಇದನ್ನೂ ಓದಿ: ಚಿತ್ರನಟರ ಪುತ್ರಿಯರ ಕಾರು ಅಪಘಾತ, ಮೂವರಿಗೆ ಗಾಯ ಯಲಹಂಕ ಸಂಚಾರಿ ಠಾಣೆಯಲ್ಲಿ FIR ದಾಖಲಾಗಿದ್ದು ಗಾಯಾಳು ರೋಹಿಣಿ ಸಿಂಗ್ ಅಲಿಯಾಸ್ ರಿಷಿಕಾ ಸಿಂಗ್ರ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ರ ಕಾರಿನ ಚಾಲಕ ಆರ್ಯನ ಅಜಾಗರೂಕ ಚಾಲನೆಯಿಂದ […]
ಬೆಂಗಳೂರು: ಚಿತ್ರನಟಿ ರಿಷಿಕಾ ಸಿಂಗ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾಲಕ ಆರ್ಯ ವಿರುದ್ಧ FIR ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 279, 338ರ ಅಡಿಯಲ್ಲಿ FIR ದಾಖಲಾಗಿದೆ.
ಇದನ್ನೂ ಓದಿ: ಚಿತ್ರನಟರ ಪುತ್ರಿಯರ ಕಾರು ಅಪಘಾತ, ಮೂವರಿಗೆ ಗಾಯ
ಯಲಹಂಕ ಸಂಚಾರಿ ಠಾಣೆಯಲ್ಲಿ FIR ದಾಖಲಾಗಿದ್ದು ಗಾಯಾಳು ರೋಹಿಣಿ ಸಿಂಗ್ ಅಲಿಯಾಸ್ ರಿಷಿಕಾ ಸಿಂಗ್ರ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ರ ಕಾರಿನ ಚಾಲಕ ಆರ್ಯನ ಅಜಾಗರೂಕ ಚಾಲನೆಯಿಂದ ಮರಕ್ಕೆ ಕಾರು ಡಿಕ್ಕಿ ಹೊಡೆಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 29ರಂದು ಯಲಹಂಕದ ಮಾವಳ್ಳಿಪುರ ಬಳಿ ಅಪಘಾತ ಸಂಭವಿಸಿದ್ದು ಇದರಲ್ಲಿ ನಟ ಜೈ ಜಗದೀಶ್ ಪುತ್ರಿಯೊಬ್ಬರು ಸಹ ಗಾಯಗೊಂಡಿದ್ದರು.