ಎ.ಎಸ್.ಐ ಮನೆಗೆ ನುಗ್ಗಿ ಪುತ್ರನ ಮೇಲೆ ಫೈರಿಂಗ್; ಮನೆಯಲ್ಲಿದ್ದ ಚಿನ್ನ, ಹಣ ದರೋಡೆ
ಎಎಸ್ಐ ಮನೆಗೆ ನುಗ್ಗಿ ದುಷ್ಕರ್ಮಿಗಳು ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಫುರ: ಎಎಸ್ಐ (ASI) ಮನೆಗೆ ನುಗ್ಗಿ ದುಷ್ಕರ್ಮಿಗಳು ಎಎಸ್ಐ ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ನಾಲ್ವರು ಆರೋಪಿಗಳಿಂದ ಕೃತ್ಯ ಎಸಗಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ನಾರಾಯಣಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆರೇಸಂದ್ರ ಗ್ರಾಮದ ಮಂಜುನಾಥ ಕಲ್ಯಾಣ ಮಂಟಪದ ಬಳಿ ಎ.ಎಸ್.ಐ ಮನೆ ಇದ್ದು, ಇಂದು (ನ.9) ಅವರ ಮನೆಗೆ ಬ್ರೀಜಾ ಕಾರಿನಲ್ಲಿ ಬಂದಿದ್ದ ನಾಲ್ವರು ನುಗ್ಗಿದ್ದಾರೆ. ಮನೆಗೆ ನುಗ್ಗಿ ಎಎಸ್ಐ ಪುತ್ರ ಶರತ್ಗೆ ಗುಂಡು 3 ಗುಂಡು ಹಾರಿಸಿದ್ದಾರೆ. ನಂತರ ಎಎಸ್ಐ ಪತ್ನಿ, ಸೊಸೆ ಮೈಮೇಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದ್ದಾರೆ. ಆರೋಪಿಗಳು ದರೋಡೆ ಮಾಡುತ್ತಿರುವ ವೇಳೆ ಎಎಸ್ಐ ನಾರಾಯಣಸ್ವಾಮಿ ಮನೆಗೆ ಬಂದಿದ್ದಾರೆ.
ಈ ವೇಳೆ ದರೋಡೆಕೋರರು ನಾರಾಯಾಣಸ್ವಾಮಿ ಅವರಿಗೆ ಬೆದರಿಸಿ ಮನೆಯಿಂದ ಓಡಿಸಿದ್ದಾರೆ. ನಂತರ ದರೋಡೆಕೋರರು ಕೂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಗಾಯಾಳು ಶರತ್ನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Wed, 9 November 22