ಮರುಭೂಮಿ ಹಲ್ಲಿಗಳನ್ನ ಮಾರಾಟ ಮಾಡಲು‌ ಯತ್ನ, ಆರೋಪಿಗಳು ಪೊಲೀಸರ ಬಲೆಗೆ

ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು‌ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್‌, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು. ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು: ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ‌ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ […]

ಮರುಭೂಮಿ ಹಲ್ಲಿಗಳನ್ನ ಮಾರಾಟ ಮಾಡಲು‌ ಯತ್ನ, ಆರೋಪಿಗಳು ಪೊಲೀಸರ ಬಲೆಗೆ
ಸಾಧು ಶ್ರೀನಾಥ್​

Updated on: Dec 12, 2019 | 4:02 PM

ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು‌ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್‌, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು.

ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು:
ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ‌ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ ನೀಡಿದ್ದ ಮತ್ತೋರ್ವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Published On - 3:49 pm, Thu, 12 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us