ಗದಗ: ಸಹೋದರಿಯನ್ನ ಚುಡಾಯಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಪುಡಿ ರೌಡಿಗಳಿಂದ ಹಲ್ಲೆ: ಮೂವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2024 | 3:31 PM

ಗದಗನ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿ ಫೆಬ್ರವರಿ 8 ರಂದು ಅವಳಿ ನಗರದಲ್ಲಿ ಮತ್ತೆ ಪುಡಿ ರೌಡಿಗಳು ಅಟ್ಟಹಾಸ‌‌‌ ಮೆರೆದಿದ್ದು, 20 ವರ್ಷದ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹೋದರಿಗೆ ಯಾಕೇ ಚುಡಾಯಿಸುತ್ತೀರಿ ಅಂತ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಆರೋಪ ಮಾಡಲಾಗಿದೆ. ಎಂಟು ಯುವಕರ ಗುಂಪಿನಿಂದ ಅಟ್ಯಾಕ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗದಗ: ಸಹೋದರಿಯನ್ನ ಚುಡಾಯಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಪುಡಿ ರೌಡಿಗಳಿಂದ ಹಲ್ಲೆ: ಮೂವರ ಬಂಧನ
ಹಲ್ಲೆಗೊಳಗಾದ ಯುವಕ
Follow us on

ಗದಗ, ಫೆಬ್ರವರಿ 12: ಅವಳಿ ನಗರದಲ್ಲಿ ಮತ್ತೆ ಪುಡಿ ರೌಡಿಗಳು (rowdies) ಅಟ್ಟಹಾಸ‌‌‌ ಮೆರೆದಿದ್ದು, 20 ವರ್ಷದ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಗದಗನ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿ ಫೆಬ್ರವರಿ 8 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವಕ ತೇಜಸ್ ಮೇಹರವಾಡಿ ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಹೋದರಿಗೆ ಯಾಕೆ ಚುಡಾಯಿಸುತ್ತೀರಿ ಅಂತ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಆರೋಪ ಮಾಡಲಾಗಿದೆ. ಎಂಟು ಯುವಕರ ಗುಂಪಿನಿಂದ ಅಟ್ಯಾಕ್​ ಮಾಡಿದ್ದು, ಸದ್ಯ ಮೂವರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಪುಡಿರೌಡಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಲ್ಲೆಗೊಳಗಾದ ಯುವಕನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಒಬ್ಬನೇ ಮಗನನ್ನು ಐಸಿಯುನಲ್ಲಿ ನೋಡಿ ಹೆತ್ತವರು ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಾರಿಗೆ ಬಸ್ ಅಡ್ಡಗಟ್ಟಿದ ಪುಂಡರ ಗ್ಯಾಂಗ್​: ಚಾಲಕನ ಮೇಲೆ ಹಲ್ಲೆ

ಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ ಅಡ್ಡಗಟ್ಟಿ ಪುಂಡರ ಗ್ಯಾಂಗ್​ವೊಂದು ಚಾಲಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಇತ್ತೀಚೆಗೆ ಗದಗ ಹೊರವಲಯದ ಅಸುಂಡಿ ಬಳಿ ನಡೆದಿತ್ತು. ಗದಗನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ ನಿಲ್ಲಿಸಿ ವಾಗ್ವಾದ ನಡೆಸಿದ್ದರು. ಅಸುಂಡಿ ಬಳಿ ಸ್ವಿಫ್ಟ್ ಕಾರ್​ನಲ್ಲಿ ನಾಲ್ವರು ಹೊರಟ್ಟಿದ್ದರು. ಹಿಂಬದಿಯಿಂದ ಹೊರಟಿದ್ದ ಸಾರಿಗೆ ಬಸ್ ಚಾಲಕ ಹಾರ್ನ್ ಹಾಕಿದ್ದಾನೆ.

ಇದನ್ನೂ ಓದಿ: ಕೊಪ್ಪಳ: ಪತಿಯನ್ನು ಥಳಿಸಿ ಮಹಿಳೆಯ ಮೇಲೆ ಅತ್ಯಾಚಾರ, ಐವರು ಆರೋಪಿಗಳು ಅರೆಸ್ಟ್

ಕಾರ್ ಸೈಡ್ ಮೀರರ್ ಕ್ಲೋಸ್ ಮಾಡಿದ್ದನ್ನ ಗಮನಿಸಿ ಬಸ್ ಡ್ರೈವರ್ ಐದಾರು ಬಾರಿ ಹಾರ್ನ್ ಮಾಡಿದ್ದಾನೆ. ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡು ಬಸ್ ಅಡ್ಡಗಟ್ಟಿ ನಿಲ್ಲಿಸಿ ವಾಗ್ವಾದಕ್ಕಿಳಿದ್ದರು. ಯಾಕೆ ಹಾರ್ನ್ ಹಾಕಿದೆ ಅಂತ ತಗಾದೆ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಗಲಾಟೆಯಲ್ಲಿ ಬಸ್ ಡ್ರೈವರ್ ಸಂತೋಷ್ ಅಸೂಟಿಗೆ ಗಾಯಗೊಂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಮದ್ಯದಂಗಡಿ ತೆರೆದಿದ್ದಕ್ಕೆ ಗ್ರಾಮಸ್ಥರ ಆಕ್ರೋಶ: ಬಾರ್ ಒಳನುಗ್ಗಿ ಮಹಿಳೆಯರಿಂದ ಗ್ಲಾಸ್​ ಪೀಸ್ ಪೀಸ್

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದ ಬಳಿ ಕಳೆದ ಕೆಲ ದಿನಗಳಿಂದ ನೂತನ ಬಾರ್ ಅಂಡ್ ರೆಸ್ಟೊರೆಂಟ್ ಓಪನ್ ಮಾಡಿರುವುದು ಗ್ರಾಮಸ್ಥರನ್ನ ಕೆರಳಿಸಿತ್ತು. ಬಂಡಹಳ್ಳಿ ಗ್ರಾಮದಲ್ಲೆ ಶಾಲೆ ಹಾಗೂ ದೇವಸ್ಥಾನದಿಂದ ಕೂಗಳತೆ ದೂರದಲ್ಲಿ ಸ್ಥಳಿಯ ಬಿಜೆಪಿ ಮುಖಂಡ ಸುರೇಶ್ ಎನ್ನುವವರು ಮೊದಲಿಗೆ ಶಾಲೆ ಕಟ್ಟುತ್ತಿರುವುದಾಗಿ ಹೇಳಿ ಇದೀಗ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಿದ್ದಾರಂತೆ. ಹೀಗಾಗಿ ಗ್ರಾಮದಲ್ಲೆ ಬಾರ್ ಒಪನ್ ಆಗಿರುವ ಕಾರಣ ಗ್ರಾಮದ ಬಡ ಜನರು ಬೆಳಗಾದ್ರೆ ದುಡಿದ ಅಲ್ಪ ಸ್ವಲ್ಪ ಹಣವನ್ನು ತೆಗೆದುಕೊಂಡು ಹೋಗಿ ಬಾರ್ ಗೆ ಇಟ್ಟು ಮದ್ಯಪಾನ ಮಾಡಲಿದ್ದು ಗ್ರಾಮದಲ್ಲಿ ಬಾರ್ ಬೇಡ ಅಂತ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದರು.

ಇದನ್ನೂ ಓದಿ: ಉಡುಪಿ: ಪಿಎಸ್​ಐ, ಗೃಹರಕ್ಷಕ ದಳದ ಅಧಿಕಾರಿ ಮೇಲೆ ತಂಡದಿಂದ ಹಲ್ಲೆ, ಜೀಪು ಜಖಂ

ಜೊತೆಗೆ ಕಟ್ಟಡ ಕಟ್ಟುವಾಗಲಿಂದಲು ಸಹ ಗ್ರಾಮಸ್ಥರು ಬಾರ್ ಬೇಡ ಅಂತ ಹೇಳಿಕೊಂಡು ಬರ್ತಿದ್ದು ಇದೀಗ ಮದ್ಯದಂಗಡಿ ಓಪನ್ ಮಾಡಿದ್ದಾರೆ ಅಂತ ಕಳೆದ ಎರಡು ದಿನಗಳಿಂದ ಬಾರ್ ಮುಂದೆ ಧರಣಿ ನಡೆಸಿದ್ದರು. ಜೊತೆಗೆ ಜನರು ಧರಣಿ ಮಾಡ್ತಿದ್ರು ಬಾರ್ ಓಪನ್ ಮಾಡ್ತಿದ್ದಾರೆ ಅಂತ ರೊಚಿಗೆದ್ದ ಮಹಿಳೆಯರು ಬಾರ್ ಒಳಗಡೆ ನುಗ್ಗಿ ಕಿಟಕಿ ಬಾಗಿಲುಗಳ ಗ್ಲಾಸ್ಗಳನ್ನ ಮತ್ತು ಮಾಲೀಕನ ಕಾರಿನ ಗ್ಲಾಸ್ಗಳನ್ನ ಹೊಡೆದು ಹಾಕಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.