AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ವರ್ಷದ ಹಳೆ ಕೇಸ್​​​: 24ನೇ ವಯಸ್ಸಿನಲ್ಲಿ ಕಳತನ ಮಾಡಿದ್ದ ಆರೋಪಿ 50ನೇ ವಯಸ್ಸಿನಲ್ಲಿ ಅರೆಸ್ಟ್​

26 ವರ್ಷಗಳ ಹಿಂದೆ ಜಯನಗರದ 5ನೇ ಬ್ಲಾಕ್‌ನಲ್ಲಿ ಶ್ರೀಮತಿ ವಸಂತ ಎಂಬುವರ ಸರವನ್ನು ಕದ್ದು ಆರೋಪಿ ಗುಲಾಬ್​ ಖಾನ್ ಪರಾರಿಯಾಗಿದ್ದನು. ಆರೋಪಿ ಗುಲಾಬ್​ ಖಾನ್ ವೆಲ್ಡಿಂಗ್​ ಕೆಲಸ ಮಾಡುತ್ತಾ ರಾಮನಗರದಲ್ಲಿ ವಾಸವಾಗಿದ್ದನು. ಇದೀಗ ಜಯನಗರ ಪೊಲೀಸರು ಹಳೆ ಪ್ರಕರಣಗಳನ್ನು ಇತ್ಯರ್ಥಕ್ಕೆ ನಿಂತಾಗ, ಆರೋಪಿ ಸಿಕ್ಕಿಬಿದ್ದಿದ್ದಾನೆ.

26 ವರ್ಷದ ಹಳೆ ಕೇಸ್​​​: 24ನೇ ವಯಸ್ಸಿನಲ್ಲಿ ಕಳತನ ಮಾಡಿದ್ದ ಆರೋಪಿ 50ನೇ ವಯಸ್ಸಿನಲ್ಲಿ ಅರೆಸ್ಟ್​
ಗುಲಾಬ್‌ ಖಾನ್ ಬಂಧಿತ ಆರೋಪಿಗುಲಾಬ್‌ ಖಾನ್ ಬಂಧಿತ ಆರೋಪಿ
TV9 Web
| Edited By: ವಿವೇಕ ಬಿರಾದಾರ|

Updated on: Feb 11, 2024 | 10:44 AM

Share

ಬೆಂಗಳೂರು, ಫೆಬ್ರವರಿ 11: ಸರಗಳ್ಳತನ (Chain snatching) ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು (Police) 26 ವರ್ಷಗಳ ಬಳಿಕ ಬಂಧಿಸಿದ್ದಾರೆ. ಗುಲಾಬ್‌ ಖಾನ್ ಬಂಧಿತ ಆರೋಪಿ. ಆರೋಪಿ ಗುಲಾಬ್​ ಖಾನ್​ 1998ರ ಜನವರಿ 20 ರಂದು ಜಯನಗರದ 5ನೇ ಬ್ಲಾಕ್‌ನಲ್ಲಿ ಶ್ರೀಮತಿ ವಸಂತ ಎಂಬುವರ ಸರವನ್ನು ಕದ್ದು ಪರಾರಿಯಾಗಿದ್ದನು. ಜಯನಗರದಲ್ಲಿ ಕಳ್ಳತನ ಮಾಡಿದ‌ ನಂತರ ಆರೋಪಿ ಗುಲಾಬ್​ ಖಾನ್​ ಯಾವುದೆ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ವೆಲ್ಡಿಂಗ್‌ ಕೆಲಸ ಮಾಡಿಕೊಂಡು ರಾಮನಗರದಲ್ಲಿ (Ramnagar) ನೆಲೆಸಿದ್ದನು. ಇದೀಗ ಪೊಲೀಸರು ದೂಳು ಹಿಡಿದಿರುವ ಹಳೆ ಪ್ರಕರಣಗಳಿಗೆ ಇತಿಶ್ರೀ ಹೇಳಲು ನಿಂತಾಗ, ಗುಲಾಬ್‌ ಖಾನ್ ಕೇಸ್​ ಆಚೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗುಲಾಬ್​ ಖಾನ್​ ರಾಮನಗರದಲ್ಲಿ ಇರುವುದು ತಿಳಿದಿದ್ದು, ಕೂಡಲೆ ಸ್ಥಳಕ್ಕೆ ತೆರಳಿ ಅರೆಸ್ಟ್ ಮಾಡಿದ್ದಾರೆ.

ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇನ್ನು ಗುಲಾಬ್​ ಖಾನ್​ 24ನೇ ವಯಸ್ಸಿನಲ್ಲಿ ಸರಗಳ್ಳತನ ಮಾಡಿದ್ದು, 50ನೇ ವಯಸ್ಸಿನಲ್ಲಿ ಅರೆಸ್ಟ್​ ಆಗುತ್ತಿದ್ದಾನೆ.

ಇದನ್ನೂ ಓದಿ: ಕಳ್ಳತನದ ಆರೋಪಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಅಮೃತಹಳ್ಳಿ ಪೊಲೀಸರು, ಮಾನವ ಹಕ್ಕುಗಳ ಆಯೋಗ ದಾಳಿ 

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಅಬ್ದುಲ್ ಖಾದರ್ ಬಿಜಾಪುರ, ನವಾಜ್​ಖಾನ್ ತರೀನ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ 81,600 ರೂ. ಮೌಲ್ಯದ 24 ಕ್ವಿಂಟಾಲ್​ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳು ಫಲಾನುಭವಿಗಳ ಬಳಿ ಕಡಿಮೆ ದರಕ್ಕೆ ಪಡಿತರ ಅಕ್ಕಿ ಖರೀದಿ ಮಾಡಿ, ಬೇರೆ ಕಡೆ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

ಬಳಿಕ ಆಹಾರ ಇಲಾಖೆ ನಿರೀಕ್ಷಕ ಅಬ್ದುಲ್ ಖತೀಬ ಸಮ್ಮುಖದಲ್ಲಿ ಪೊಲೀಶರು ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿ ಸಾಗಟ ಬಯಲಾಗಿದೆ. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್