ಗದಗ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಗ್ ಟ್ವಿಸ್ಟ್, ಪ್ರಕರಣದ ಹಿಂದೆ ಹೆಣ್ಣಿನ ಕೈವಾಡ ಶಂಕೆ..!

ಆತ ಕಾಂಗ್ರೆಸ್ ಕಾರ್ಯಕರ್ತ, ಪಕ್ಷದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದ. ನಿನ್ನೆ(ಮಾ.12) ಗ್ಯಾರಂಟಿ ಸಮಾವೇಶದ ಸಂಭ್ರಮದ ವೇಳೆಯೇ ಆತ ಭೀಕರ ಹತ್ಯೆಯಾಗಿದ್ದ. ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ರಾಜಕೀಯ ಕೊಲೆಯಲ್ಲ, ಬದಲಾಗಿ ಇದರಲ್ಲಿ  ಹೆಣ್ಣಿನ ಕೈವಾಡ ಶಂಕೆ ವ್ಯಕ್ತವಾಗಿದೆ. ಜೊತೆಗೆ ಕೊಲೆಯಾದ ವ್ಯಕ್ತಿ ‘ಕೊಲ್ಲುವುದಾದ್ರೆ ಕೊಂದು ಬಿಡಿ, ಹೀಗೆ ಕಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅದಕ್ಕೆ ಪುಷ್ಟಿ ನೀಡುವಂತೆ ಕೊಲೆಯ ಬೆದರಿಕೆಯ ಮೇಸೆಜ್​ ಕೂಡಾ ಪತ್ತೆಯಾಗಿವೆ. 

ಗದಗ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಗ್ ಟ್ವಿಸ್ಟ್, ಪ್ರಕರಣದ ಹಿಂದೆ ಹೆಣ್ಣಿನ ಕೈವಾಡ ಶಂಕೆ..!
ಮೃತ ವ್ಯಕ್ತಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 13, 2024 | 4:25 PM

ಗದಗ, ಮಾ.13: ಜಿಲ್ಲೆಯ ಮುಂಡರಗಿ(Mundaragi) ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ಮದ್ಯದ ಕಾಲುವೆ ಬಳಿ ಭೀಕರವಾಗಿ ಕಾಂಗ್ರೆಸ್ ಕಾರ್ಯಕರ್ತ ಶರಣಪ್ಪ ಸಂದಿಗೌಡ್ರು(40) ಎನ್ನುವಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನಿನ್ನೆಯವರಿಗೆ ರಾಜಕೀಯ ಹಿನ್ನಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು, ಕೊಲೆಯ ಹಿಂದೆ ಹೆಣ್ಣಿನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಹತ್ತಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ.

ಪೊಲೀಸರ ಪ್ರಮುಖ ಸಾಕ್ಷಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ಶರಣಪ್ಪ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಜೀವ ಬೆದರಿಕೆಗೆ ಬಗ್ಗಲ್ಲ, ಜಗ್ಗಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು. ಸಾವನ್ನೂ ಕೂಡ ಪ್ರೀತಿಸುವೆ, ಕೊಲ್ಲುವುದಾದರೇ ಕೊಂದು ಬಿಡಿ, ಹೀಗೆ ಕಾಡಬೇಡಿ. ನಾನೇ ಮುಂದೆ ಬಂದು ನಿಲ್ಲುತ್ತೇನೆ ಕೊಂದು ಹಾಕಿ. ನನ್ನ ಹುಡುಕೋದು ನಿಮಗೆ ತ್ರಾಸ್ ಆಗುತ್ತದೆ. ನಾನು ನಾಯಿ, ನರಿ ಅಲ್ಲ ಎಂದು ಘರ್ಜನೆ ಮಾಡಿದ್ದ. ಕಳೆದ ಒಂದು ತಿಂಗಳಿಂದೆ ಈ ರೀತಿ ಪೋಸ್ಟ್ ಹಾಕಿದ್ದ. ಇದಾದ ಮೇಲೆ ನಿನ್ನೆ(ಮಾ.12) ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಒಂದು ಕಾರು ಹಾಗೂ ಬೈಕ್ ಮೂಲಕ, ಶರಣಪ್ಪನ ಬೈಕ್ ಹಿಂಬಾಲಿಸಿಕೊಂಡು ಬಂದ ಹಂತಕರು ಕೊಲೆ ಮಾಡಿದ್ದರು.

ಇದನ್ನೂ ಓದಿ:ಗದಗ: ಕಾಂಗ್ರೆಸ್ ಕಾರ್ಯಕರ್ತನನ್ನು ಅಟ್ಟಾಡಿಸಿ ಕೊಲೆಗೈದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು

ಪತ್ನಿಯೇ ಸುಫಾರಿ ನೀಡಿ ಕೊಲೆ ಮಾಡಿಸಿದಳಾ?

ಈ ಕೊಲೆಯಾದ ಶರಣಪ್ಪ ಸಂದಿಗೌಡ್ರು, ಸಹೋದರ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಮೃತ ಶರಣಪ್ಪ, ಅವನ ಪತ್ನಿ ಮಲ್ಲವ್ವ ಕಳೆದ ಮೂರು ವರ್ಷಗಳಿಂದ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಮಲ್ಲವ್ವ ತನ್ನ ಮಗಳ ಜೊತೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ. ಮೃತ ವ್ಯಕ್ತಿ ಯಲ್ಲಮ್ಮ ಗುಡ್ಡಕ್ಕೆ ಹೋಗಿ ನರಗುಂದ ಮಾರ್ಗವಾಗಿ ವಾಪಾಸ್ ಡೋಣಿಗೆ ಬರುವಾಗ ಈ ಕೊಲೆಯಾಗಿದೆ. ಅದು ಕೂಡ ಕಾರದಪುಡಿ ಹಾಕಿ, ಪ್ಲಾಸ್ಟಿಕ್ ಹಗ್ಗದಿಂದ ಕಾಲು ಕೈ ಕಟ್ಟಿ, ನಂತರ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೀಗಾಗಿ ಶರಣಪ್ಪನ ಪತ್ನಿ ಸುಫಾರಿ ನೀಡಿ ಕೊಲೆ ಮಾಡಿಸಿರೋ ಶಂಕೆ ವ್ಯಕ್ತವಾಗಿದೆ.

ಇನ್ನು ಶರಣಪ್ಪನ ಮೊಬೈಲ್​ಗೆ ಮಾಮಾ ಎನ್ನುವ ಹೆಸರಿನಿಂದ ಜೀವ ಬೇದಿಕೆ ಮೆಸೇಜ್ ಕೂಡಾ ಬಂದಿವೆ. ನಿನ್ನ ಕೊಲೆ ಮಾಡೋದು ಯಾವ್ ಲೆಕ್ಕ, ನಿನ್ನ ಕೊಲೆ ಮಾಡಿ, ಪೊಲೀಸರಿಗೆ ಕ್ಯಾಸ್ ಕೊಡುತ್ತೇವೆ. ಜೊತೆಗೆ ವಕೀಲರಿಗೆ ಹಣ ಕೊಟ್ಟು ಬೇಲ್ ಮೇಲೆ ಹೊರಗಡೆ ಬರುತ್ತೇವೆ ಎನ್ನುವ ಮೆಸೇಜ್ ಕೂಡ ಸಾಕಷ್ಟು ವೈರಲ್ ಆಗಿವೆ. ಹೀಗಾಗಿ ಪಕ್ಕಾ ಹೆಣ್ಣಿನಿಂದ ಕೊಲೆಯಾಗಿದೆ ಎನ್ನುವುದು ಖಾತರಿ ಆಗುತ್ತಿದೆ. ಇದರ ಜೊತೆಗೆ ಈತನ ವ್ಯಾಪಾರ ಹಾಗೂ ರಾಜಕೀಯ ಹಿನ್ನೆಲೆ ಸೇರಿದಂತೆ 360 ಎಂಗಲ್‌ನಲ್ಲಿ‌ ತನಿಖೆ ಮಾಡುತ್ತಿದ್ದೇವೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಅವರು ಹೇಳುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತನ ಸಿನಿಮೀಯ ರೀತಿಯಲ್ಲಿ ಹತ್ಯೆ ಇಡೀ ಗ್ರಾಮವೇ ಬೆಚ್ಚಿಬಿಸಿಳಿಸಿದೆ. ಮೊದ ‌ಮೊದಲು ಇದೊಂದು ರಾಜಕೀಯ ಹಿನ್ನೆಲೆ ಎಂದು ಕಂಡು ಬಂದಿತ್ತು. ಇವಾಗ ಇದು ಕೌಟುಂಬಿಕ ಕಲಹ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಒಟ್ಟಿನಲ್ಲಿ ಪೊಲೀಸರು 360 ಎಂಗಲ್​ನಲ್ಲಿ ತನಿಖೆ ಮಾಡುತ್ತಿದ್ದಾರೆ. ರಾಜಕೀಯ ಹಿನ್ನೆಲೆಯೂ ಅಥವಾ ಹೆಣ್ಣಿನ ಕೈವಾಡವಾ? ಎನ್ನುವದು ಪೊಲೀಸ ತನಿಖೆಯಿಂದ ಬಯಲಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ