ತುಮಕೂರು ಸಿದ್ಧಗಂಗಾ ಮಠದ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಗ್ಯಾಂಗ್ ​ರೇಪ್

| Updated By: ವಿವೇಕ ಬಿರಾದಾರ

Updated on: Mar 07, 2024 | 2:13 PM

ಸಿದ್ದಗಂಗಾ ಮಠದ ಜಾತ್ರೆಗೆ ಬಂದಿಂದ ಬಾಲಕಿಯನ್ನು ಕರೆದೊಯ್ದು ತುಮಕೂರು ನಗರದ ಬಂಡೆಪಾಳ್ಯದ ಮನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಪ್ರಕರಣ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತುಮಕೂರು ಸಿದ್ಧಗಂಗಾ ಮಠದ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಗ್ಯಾಂಗ್ ​ರೇಪ್
ಸಾಂದರ್ಭಿಕ ಚಿತ್ರ
Follow us on

ತುಮಕೂರು, ಮಾರ್ಚ್​​ 07: ಸಿದ್ದಗಂಗಾ ಮಠದ (Siddaganga Math) ಜಾತ್ರೆಗೆ ಬಂದಿಂದ ಬಾಲಕಿಯನ್ನು ಕರೆದೊಯ್ದು ತುಮಕೂರು (Tumakur) ನಗರದ ಬಂಡೆಪಾಳ್ಯದ ಮನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಪ್ರಕರಣ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೂವರನ್ನ ಬಂಧಿಸಲಾಗಿದೆ. ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಬಂಧಿತ ಆರೋಪಿಗಳು. ಮೊಬೈಲ್​ನಲ್ಲಿ ಬಾಲಕಿ ತನ್ನ ಬಾಯ್ ಫ್ರೇಂಡ್ ಜೊತೆ ಇದ್ದ ದೃಶ್ಯವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ವಿಡಿಯೋವನ್ನು ಬಾಲಕಿಗೆ ತೋರಿಸಿ, ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಬಲವಂತವಾಗಿ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ

ಹಾಸನ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಕತ್ತು ಸೀಳಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ನಡೆದಿತ್ತು. ಬೆಳಗುಂಬ ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ಮೃತ ವಿದ್ಯಾರ್ಥಿನಿ. ಶಾಲೆ ಮುಗಿಸಿ ಹೋಗುವಾಗ ವಿದ್ಯಾರ್ಥಿನಿಯನ್ನು ಹತ್ಯೆಗೈದ ಯುವಕ ಶರತ್​ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅರಸೀಕೆರೆ ತಾಲೂಕಿನ ಬಂಡಿಹಳ್ಳಿ‌ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿದ್ದಾನೆ. ಅರಸೀಕೆರೆ ನಗರದ ಖಾಸಗಿ ಕಾಲೇಜಿನಲ್ಲಿ ಶರತ್ ಪದವಿ ಓದುತ್ತಿದ್ದನು. ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಆಟೋಗಾಗಿ ಕಾಯುತ್ತಿದ್ದ ಮಹಿಳೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ: ಚಾಲಕ ಬಂಧನ

ಹಬ್ಬಕ್ಕೆ ಪತಿ ಕರೆದೊಯ್ಯಲು ಬಾರದ ಹಿನ್ನಲೆ ಮನನೊಂದು ಪತ್ನಿ ಆತ್ಮಹತ್ಯೆ

ಚಾಮರಾಜನಗರ: ಹಬ್ಬಕ್ಕೆ ಕರೆದೊಯ್ಯಲು ಪತಿ ಬಾರದಿದ್ದಕ್ಕೆ ಸೋಮವಾರಪೇಟೆಯಲ್ಲಿ ನೇಣುಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕಳೆದ ಐದು ವರ್ಷದ ಹಿಂದೆ ಕೊತ್ತಲವಾಡಿಯ ಸೋಮೇಶ್ ಜತೆ ರಚನಾಳ ವಿವಾಹವಾಗಿತ್ತು.

ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಯಲ್ಲಿದ್ದ ರಚನಾ, ಕೊತ್ತಲವಾಡಿಯಲ್ಲಿ ಮಾರಮ್ಮನ ಹಬ್ಬ ಇರುವುದರಿಂದ ಪತಿ ಕರೆದುಕೊಂಡು ಹೋಗಲು ಬರುತ್ತಾನೆಂದು ಕಾಯುತ್ತಿದ್ದರು . ಪತಿ ಬಾರದ್ದಕ್ಕೆ ಮನನೊಂದು ನೇಣುಬಿಗಿದುಕೊಂಡು ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಾಮರಾಜನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:40 pm, Thu, 7 March 24