ಆಟೋಗಾಗಿ ಕಾಯುತ್ತಿದ್ದ ಮಹಿಳೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ: ಚಾಲಕ ಬಂಧನ

ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.20ರ ಮುಂಜಾನೆ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಮುಬಾರಕ್ (28) ಎಂಬ ಆಟೋ ಚಾಲಕ ಅತ್ಯಾಚಾರವೆಸಗಿ ಕೊಂದಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆಟೋ ಚಾಲಕ ಮುಬಾರಕ್ ಬಂಧಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಆಟೋಗಾಗಿ ಕಾಯುತ್ತಿದ್ದ ಮಹಿಳೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ: ಚಾಲಕ ಬಂಧನ
ಬಂಧಿತ ಆರೋಪಿ ಮುಬಾರಕ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 01, 2024 | 3:06 PM

ಬೆಂಗಳೂರು, ಮಾರ್ಚ್​​ 1: ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆ (woman) ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.20ರ ಮುಂಜಾನೆ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಮುಬಾರಕ್ (28) ಎಂಬ ಆಟೋ ಚಾಲಕ ಅತ್ಯಾಚಾರವೆಸಗಿ ಕೊಂದಿದ್ದ. ಶಾಂತಿನಗರದ ಜನತಾಕೋ ಆಪರೇಟಿವ್ ಕಟ್ಟಡದ ಬಳಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಮಹಿಳೆ ಕಟ್ಟಡದಿಂದ ಬಿದ್ದು ಮೃತಪಟ್ಟಂತೆ ಕಾಣುತ್ತಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರವೆಸಗಿ ಕೊಂದಿರುವುದು ದೃಢವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆಟೋ ಚಾಲಕ ಮುಬಾರಕ್ ಬಂಧಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಮುಂಜಾನೆ ಮಾರ್ಕೆಟ್ ಬಳಿ ನಿಂತಿದ್ದ ಮಹಿಳೆಯನ್ನು ಸಂಪಂಗಿರಾಮನಗರಕ್ಕೆ ಆಟೋ ಚಾಲಕ ಕರೆತಂದಿದ್ದಾನೆ. ಜನತಾ ಕೋ ಆಪರೇಟಿವ್ ಕಟ್ಟಡದ ಮೊದಲ ಮಹಡಿಗೆ ಕರೆದೊಯ್ದಿದ್ದ. ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ. ಹತ್ಯೆಗೀಡಾಗಿರುವ ಮಹಿಳೆಯ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಸಂಪಂಗಿರಾಮನಗರ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಸಿಮೆಂಟ್​ ತುಂಬಿದ್ದ ಲಾರಿ ಪಲ್ಟಿ-ಚಾಲಕ ಸಾವು

ಚಾಮರಾಜನಗರ: ಸಿಮೆಂಟ್ ತುಂಬಿದ ಲಾರಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹನೂರು ಪಟ್ಟಣದ ಹುಲುಸುಗುಡ್ಡೆ ಬಳಿ ನಡೆದಿದೆ. ಬಾಬು ಮೃತ ಚಾಲಕ. ಲಾರಿ ಪಲ್ಟಿ ಹೊಡೆದ ಪರಿಣಾಮ ಲಾರಿ ಅಡಿಯಲ್ಲಿ ಸಿಲುಕಿ ಚಾಲಕ ಮೃತಪಟ್ಟರೆ ಕ್ಲೀನರ್ ಬಚಾವ್ ಆಗಿದ್ದಾನೆ.

ಇದನ್ನೂ ಓದಿ:  ಬೆಂಗಳೂರು: ಮುಖ ಜಜ್ಜಿ ಅಪರಿಚಿತ ಮಹಿಳೆಯನ್ನ ಕೊಲೆಗೈದ ದುಷ್ಕರ್ಮಿಗಳು

ತಮಿಳುನಾಡಿನಿಂದ ಮೈಸೂರಿಗೆ ಲಾರಿ ಸಿಮೆಂಟ್ ಕೊಂಡೊಯ್ಯುತ್ತಿದ್ದರು. ಸ್ಥಳೀಯರು, ಪೊಲೀಸರಿಂದ ಲಾರಿ ತೆರವಿಗೆ ಹರಸಾಹಸ ಮಾಡಲಾಗಿದೆ. ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿಗಳ ದಾಳಿಗೆ ಬಲಿ

ಮೈಸೂರು: ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿಗಳ ದಾಳಿಗೆ ಬಲಿ ಆಗಿರುವಂತಹ ಘಟನೆ ನಂಜನಗೂಡು ತಾಲ್ಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ. ಸುಮಾರು ಎರಡುವರೆ ವರ್ಷದ ಹೆಣ್ಣು ಜಿಂಕೆ ಮೃತಪಟ್ಟಿದೆ. ಗ್ರಾಮದ ಬಳಿ ಕಾಣಿಸಿಕೊಂಡ ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸಿವೆ. ಜಿಂಕೆಯ ಕತ್ತು, ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿ ಸಾಯಿಸಿವೆ. ನಾಯಿಗಳನ್ನ ಓಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್, ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.