ಪಂಜಾಬ್: ಜೈಲಿನಿಂದಲೇ ಕೊರಿಯರ್‌ಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ; ಗ್ಯಾಂಗ್‌ಸ್ಟರ್ ವಿರುದ್ಧ ಪ್ರಕರಣ ದಾಖಲು

ಸಾಗರ್ ಪುನಿತ್ ಬೈನ್ಸ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದಾನೆ. ಈ ಹಿಂದೆಯೂ ಜೈಲಿನೊಳಗಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಸಿರುವ ಘಟನೆ ನಡೆದಿದೆ. ಈತ ಜೈಲಿನಲ್ಲಿ ಕುಳಿತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರನಾಗಿ ಕೆಲಸ ಮಾಡುತ್ತಾನೆ. ಯುವಕರು ಇನ್ಸ್ಟಾಗ್ರಾಮ್ ಮೂಲಕ ಸಾಗರ್ ಸಂಪರ್ಕಕ್ಕೆ ಬರುತ್ತಿದ್ದರು.

ಪಂಜಾಬ್: ಜೈಲಿನಿಂದಲೇ ಕೊರಿಯರ್‌ಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ; ಗ್ಯಾಂಗ್‌ಸ್ಟರ್ ವಿರುದ್ಧ ಪ್ರಕರಣ ದಾಖಲು
ಜೈಲು
Follow us
ರಶ್ಮಿ ಕಲ್ಲಕಟ್ಟ
|

Updated on: Dec 18, 2023 | 5:40 PM

ಲುಧಿಯಾನ ಡಿಸೆಂಬರ್ 18:  ಮಧ್ಯಪ್ರದೇಶದಿಂದ (Madhya pradesh) ಕೊರಿಯರ್‌ಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಗ್ಯಾಂಗ್‌ಸ್ಟರ್ ಸಾಗರ್ ನ್ಯೂಟ್ರಾನ್ (Sagar neutron) ವಿರುದ್ಧ ಲುಧಿಯಾನ (Ludhiana) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಗ್ಯಾಂಗ್​​ಸ್ಟರ್​​ನ್ನು ವಿಚಾರಣೆಗಾಗಿ ಪ್ರೊಡಕ್ಷನ್ ವಾರಂಟ್ ಮೇಲೆ ಗೋಯಿಂಡ್ವಾಲ್ ಜೈಲಿನಿಂದ ಕರೆತಂದಿದ್ದಾರೆ. ಗ್ಯಾಂಗ್ ಸ್ಟರ್ ನ್ಯೂಟ್ರಾನ್ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುತ್ತಿದ್ದ ಮತ್ತು ನಂತರ ಅಪರಾಧ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದ ಎಂಬುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಡಿಸೆಂಬರ್ 10 ರಂದು ಲೂಧಿಯಾನ ಪೊಲೀಸ್ ಕಮಿಷನರೇಟ್‌ನ ಸಿಐಎ-1 ಆರೋಪಿಯನ್ನು 6 ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿದೆ ಎಂದು ಹೇಳಲಾಗುತ್ತಿದೆ. ಈ ಆರೋಪಿಗಳಿಂದ 4 ಅಕ್ರಮ 32 ಬೋರ್ ಪಿಸ್ತೂಲ್, 14 ಲೈವ್ ಕಾಟ್ರಿಡ್ಜ್, 51 ಗ್ರಾಂ ಹೆರಾಯಿನ್ ಹಾಗೂ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಸೂಚನೆ ಮೇರೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಾಗಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೈನ್ಸ್ ತಂಡದ ಸದಸ್ಯ

ಸಾಗರ್ ಪುನಿತ್ ಬೈನ್ಸ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದಾನೆ. ಈ ಹಿಂದೆಯೂ ಜೈಲಿನೊಳಗಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಸಿರುವ ಘಟನೆ ನಡೆದಿದೆ. ಇದಕ್ಕೂ ಮೊದಲು ಫೆಬ್ರವರಿ 17 ರಂದು ಲುಧಿಯಾನ ಪೊಲೀಸರು ಮುನೀಶ್ ಅಲಿಯಾಸ್ ಲಾಲು ಮತ್ತು ಅನಿಕೇತ್ ತಲ್ವಾರ್ ಅವರನ್ನು 6 ಅಕ್ರಮ ಪಿಸ್ತೂಲ್‌ಗಳು, 8 ಮ್ಯಾಗಜೀನ್‌ಗಳು ಮತ್ತು 12 ಲೈವ್ ಕಾರ್ಟ್ರಿಡ್ಜ್‌ಗಳೊಂದಿಗೆ ಬಂಧಿಸಿದ್ದರು. ಆ ಸಮಯದಲ್ಲಿ ಸಾಗರ್‌ನನ್ನು ಪಂಜಾಬ್‌ನ ಹೆಚ್ಚಿನ ಭದ್ರತೆಯ ನಭಾ ಜೈಲಿನಲ್ಲಿ ಇರಿಸಲಾಗಿತ್ತು. ಇಂದೋರ್‌ನಿಂದ ಶಸ್ತ್ರಾಸ್ತ್ರಗಳನ್ನು ತರಲು ಈತ ಸಹಚರರನ್ನು ಕಳುಹಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿಪುಣೆ: ಹೋಟೆಲ್‌ನಿಂದ ಮೊಟ್ಟೆ ಕದ್ದಿದ್ದಾರೆ ಎಂದು ಶಂಕಿಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ

ಸಾಗರ್ ಜೈಲಿನಲ್ಲಿ ಕುಳಿತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರನಾಗಿ ಕೆಲಸ ಮಾಡುತ್ತಾನೆ. ಯುವಕರು ಇನ್ಸ್ಟಾಗ್ರಾಮ್ ಮೂಲಕ ಸಾಗರ್ ಸಂಪರ್ಕಕ್ಕೆ ಬರುತ್ತಿದ್ದರು. ಸಾಗರ್ ಅವರಿಗೆ ಹಣದ ಆಮಿಷವೊಡ್ಡುತ್ತಾನೆ ಮತ್ತು ತನಗಾಗಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವಂತೆ ಕೇಳುತ್ತಾನೆ.. ಆರೋಪಿಗಳು ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರಗಳನ್ನು ಸಾಗರ್ ಅವರ ಕೆಲವು ಆಪ್ತರಿಗೆ ಹಸ್ತಾಂತರಿಸುವ ಮೊದಲು, ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ