ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ: ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿದಂತೆ ಮೂವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2024 | 7:22 PM

ಒಡಿಶಾದಿಂದ ಬೆಂಗಳೂರಿಗೆ 2 ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿದಂತೆ ಬೆಂಗಳೂರಿನ ಮೂವರನ್ನು ಆಂಧ್ರಪ್ರದೇಶದ ಗುಂಟೂರು ಪೊಲೀಸರಿಂದ ಅರೆಸ್ಟ್‌ ಮಾಡಲಾಗಿದೆ. ಬಂಧಿತರಿಂದ 60 ಕೆಜಿ ಗಾಂಜಾ, ಏಳು ಮೊಬೈಲ್, ಎರಡು ಕಾರು ಮತ್ತು 2.28 ಲಕ್ಷ ನಗದು ಸೇರಿದಂತೆ ಒಟ್ಟು 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ: ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿದಂತೆ ಮೂವರ ಬಂಧನ
ಬಂಧಿತರಿಂದ ಜಪ್ತಿ ಮಾಡಿದ ಗಾಂಜಾ
Follow us on

ಆನೇಕಲ್, ಫೆಬ್ರುವರಿ 2: ಒಡಿಶಾದಿಂದ ಬೆಂಗಳೂರಿಗೆ 2 ಕಾರಿನಲ್ಲಿ ಅಕ್ರಮವಾಗಿ ಗಾಂಜಾ (ganja) ಸಾಗಾಟ ಮಾಡುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಗಾಂಜಾ ಸಮೇತ ಸಿಕ್ಕಿಬಿದಿದ್ದಾರೆ. ಹೆಚ್​ಎಸ್​ಆರ್ ಬಡಾವಣೆ ವಾಸಿ ಕಿಶೋರ್ ಪ್ರಕಾಶ್ ರೆಡ್ಡಿ(34), ಸುದ್ದಗುಂಟೆಪಾಳ್ಯ ಮಾಜಿ ಕಾರ್ಪೊರೇಟರ್ ಮಗ ಅಭಿನವ್(30) ಮತ್ತು ಬಾಲಾಜಿ ನಗರ ವಾಸಿ ಸುಮಂತ್ ಕುಮಾರ್ (24) ಬಂಧಿತರು. 60 ಕೆಜಿ ಗಾಂಜಾ, ಏಳು ಮೊಬೈಲ್, ಎರಡು ಕಾರು ಮತ್ತು 2.28 ಲಕ್ಷ ನಗದು ಸೇರಿದಂತೆ ಒಟ್ಟು 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಚುನಾವಣೆ ಹಿನ್ನೆಲೆ ಪೊತ್ತೂರಿನ ಚೆಕ್ ಪೊಸ್ಟ್​ನಲ್ಲಿ ತಪಾಸಣೆ ವೇಳೆ ಒಂದು ಕಾರಿನಲ್ಲಿ 48 ಕೆಜಿ ಗಾಂಜಾ ಮತ್ತೊಂದು ಕಾರಿನಲ್ಲಿ 12 ಗಾಂಜಾ ಪತ್ತೆ ಆಗಿದೆ. ಒಡಿಶಾದ ಕೋರಾಪುಟ್ ಜಿಲ್ಲೆಯ ಅರಗೊಂಡ ಗ್ರಾಮದಿಂದ ಗಾಂಜಾ ಖರೀದಿ ಮತ್ತು ಮಾರಾಟದ ಬಗ್ಗೆ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ತುಮಕೂರು: ತಾಲೂಕಿನ ಊರುಕೆರೆ ಬಳಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆ ಆಗಿದೆ. ಕಳೆದ‌ ಎರಡು ದಿನಗಳ ಹಿಂದೆ ಬೇರೆಡೆ ಕೊಲೆಗೈದು ಶವ ತಂದು‌ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.  ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೊತೆಯಲ್ಲೇ ಪಾರ್ಟಿ ಮಾಡಿ ಓರ್ವ ವ್ಯಕ್ತಿಯ ಹತ್ಯೆ

ಹಾಸನ: ಜೊತೆಯಲ್ಲೇ ಪಾರ್ಟಿ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವಂತಹ ಘಟನೆ  ಹಾಸನ ಹೊರವಲಯದ ಬುಸ್ತೇನಹಳ್ಳಿ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಎರಡು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 40 ಪ್ರಾಯದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ವ್ಯಕ್ತಿಯ ಬಲಗೈ ಮೇಲೆ ಲಕ್ಷ್ಮಿ ಎಂಬ ಹಚ್ಚೆ ಗುರುತಿದೆ.

ಇದನ್ನೂ ಓದಿ: ಗ್ರಾಮ ದೇವತೆ ಜಾತ್ರೆ ನಡೆಯುತ್ತಿದ್ದಾಗ ಪ್ರೀತಿಸಿ ಮದುವೆ ಆದವಳ ಹೊಡೆದು ಸಾಯಿಸಿದ ಗಂಡ

ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಮೀನು ಹಿಡಿಯುವಾಗ ವ್ಯಕ್ತಿ ಕೆರೆ ಪಾಲು

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕೆರೆ ಪಾಲಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಯಲಗುರ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೀರಲ್ಲಿ ಮುಳುಗಿ 55 ವರ್ಷದ ಮುನಿಯಪ್ಪ ಎಂಬುವವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಕ್ಕೆ ತಾಯಿಯನ್ನ ಕೊಂದ ಮಗ

ಸ್ಥಳಕ್ಕೆ ಪೆರೇಸಂದ್ರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಇನ್ನೂ ಮುನಿಯಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:53 pm, Fri, 2 February 24