Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರ ಸಮ್ಮತಿಯೊಂದಿಗೆ ಬೆಡ್​ರೂಮಿಗೆ ಬಂದ ಮಹಿಳೆಯನ್ನು ಜರ್ಮನಿಯ ಈ ಸರ್ಜನ್ ಕೊಂದ ವಿಧಾನ ಮಾತ್ರ ಆಘಾತಕಾರಿ!

ವಿಚಾರಣೆ ನಡೆಯುತ್ತಿದ್ದಾಗ ಅವನು, ತನ್ನ ಶಿಶ್ನದ ಮೇಲೆ ಒಂದಳೆ ಕೊಕೇನ್ ಸಿಂಪಡಿಸಿದ್ದು ಸಂತ್ರಸ್ತೆಗೆ ಗೊತ್ತಿತ್ತು ಅಂತ ಹೇಳಿದ. ಅವಳು ಓರಲ್ ಸೆಕ್ಸ್ ಆರಂಭಿಸಿದ ಕೂಡಲೇ ಉಸಿರಾಟದ ಸಮಸ್ಯೆಗೆ ಒಳಗಾಗಿ ಕುಸಿದು ಬಿದ್ದಿದ್ದಳು.

ಪರಸ್ಪರ ಸಮ್ಮತಿಯೊಂದಿಗೆ ಬೆಡ್​ರೂಮಿಗೆ ಬಂದ ಮಹಿಳೆಯನ್ನು ಜರ್ಮನಿಯ ಈ ಸರ್ಜನ್ ಕೊಂದ ವಿಧಾನ ಮಾತ್ರ ಆಘಾತಕಾರಿ!
ಸಂತ್ರಸ್ತೆ ಇವಾನ್ ಮತ್ತು ಹಂತಕ ಸರ್ಜನ್ ಡೇವಿಡ್ Image Credit source: The New York Post
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 26, 2022 | 8:07 AM

ಕೊಲೆ ಮಾಡಲು ಹಂತಕರು (killers) ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ, ಆದರೆ ಒಬ್ಬ ಮಾಜಿ ಸರ್ಜನ್ ತನ್ನ ಪ್ರೇಯಸಿಯನ್ನು ಕೊಲ್ಲಲು ಬಳಸಿದ ವಿಧಾನ ದಿಗ್ಭ್ರಮೆ ಮೂಡಿಸುತ್ತದೆ. ಇವನು ಮಾಡಿದ್ದೇನು ಗೊತ್ತಾ? ತನ್ನ ಗರ್ಲ್ಫ್ರೆಂಡ್ ನೊಂದಿಗೆ ಬೆಡ್ ರೂಮಿನಲ್ಲಿದ್ದಾಗ ತನ್ನ ಮರ್ಮಾಂಗದ (penis) ಮೇಲೆ ಮಾದಕ ದ್ರವ್ಯವೊಂದನ್ನು ಸಿಂಪಡಿಸಿ ಅವಳಿಗೆ ಓರಲ್ ಸೆಕ್ಸ್ (oral sex) ನಡೆಸುವಂತೆ ಹೇಳಿದ್ದ. ಆ ಮಹಿಳೆಯ ಬಾಯಿಯ ಮೂಲಕ ಡ್ರಗ್ಸ್ ದೇಹವನ್ನು ಸೇರಿ ಉಸಿರಾಟದ ತೊಂದರೆಗೆ ಅಕೆ ಸಿಕ್ಕು ಸತ್ತೇ ಬಿಟ್ಟಳು. ಇದು ನಡೆದಿದ್ದು 2019ರಲ್ಲಿ. ಜರ್ಮನಿಯ ಈ ಕಿಲ್ಲರ್ ಸರ್ಜನನ್ನು ಅಲ್ಲಿನ ಮಾಧ್ಯಮಗಳು ‘ಡಾ ಕೋಕ್ ಪೆನಿಸ್’ ಅಂತಲೇ ಉಲ್ಲೇಖಿಸುತ್ತಿವೆ.

ಪ್ರೇಯಸಿಯನ್ನು ಹಾಗೆ ಕೊಂದ ಸರ್ಜನ್ ಹೆಸರು ಡೇವಿಡ್ ನೀದರ್ಬಿಚ್ಲರ್. 9 ವರ್ಷಗಳ ಸೆರೆವಾಸ ವಿಧಿಸಿದ್ದ ಜರ್ಮನಿಯ ಒಂದು ಕೋರ್ಟ್ ಈಗ ತನ್ನ ಗೆಳತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿದೆ.

ವಿಚಾರಣೆ ನಡೆಯುತ್ತಿದ್ದಾಗ ಅವನು, ತನ್ನ ಶಿಶ್ನದ ಮೇಲೆ ಒಂದಳೆ ಕೊಕೇನ್ ಸಿಂಪಡಿಸಿದ್ದು ಸಂತ್ರಸ್ತೆಗೆ ಗೊತ್ತಿತ್ತು ಅಂತ ಹೇಳಿದ. ಅವಳು ಓರಲ್ ಸೆಕ್ಸ್ ಆರಂಭಿಸಿದ ಕೂಡಲೇ ಉಸಿರಾಟದ ಸಮಸ್ಯೆಗೆ ಒಳಗಾಗಿ ಕುಸಿದು ಬಿದ್ದಿದ್ದಳು.

ಆದರೆ ಜನನಾಂಗಕ್ಕೆ ಕೊಕೇನ್ ಲೇಪಿಸಿದ ಸಂಗತಿ 38-ವರ್ಷ-ವಯಸ್ಸಿನ ಇವಾನ್ ಎಮ್ ಗೆ ಗೊತ್ತಿತ್ತು ಅಂತ ಅವನು ಹೇಳಿದ್ದು ಅಂಗೀಕರಿಸಲು ಕೋರ್ಟ್ ನಿರಾಕರಿಸಿತ್ತು.

ಜರ್ಮನಿಯ ಮಗ್ದೆಬರ್ಗ್ ನಗರದಲ್ಲಿರುವ ಕೋರ್ಟೊಂದು ಕೇಶ ವಿನ್ಯಾಸಕಿಯಾಗಿದ್ದ ಇವಾನ್ ಸಾಯುವ ಮೊದಲು ಅವಳ ಚಿಕಿತ್ಸೆಗೆ ಹಣ ವ್ಯಯಿಸಿದ ಐಕೆಕೆ ಜಿಸಂಡ್ ಪ್ಲಸ್ ವೈದ್ಯಕೀಯ ವಿಮೆ ಕಂಪನಿಗೆ ರೂ. 11 ಲಕ್ಷ ನೀಡುವಂತೆ ಡೇವಿಡ್ ಗೆ ಆದೇಶಿಸಿದೆ.

ಇವಾನ್ ಸ್ವಇಚ್ಛೆಯಿಂದ ಕೋಕೇನ್ ಸೇವಿದಳೆಂದು ವಾದಿಸಿದ್ದ ಡೇವಿಡ್ ನ ವಕೀಲ ಮೊದಲಿಗೆ ಸದರಿ ಮೊತ್ತವನ್ನು ನೀಡಲು ನಿರಾಕರಿಸಿದ್ದ.

ಇವಾನ್ ಳ ಗಂಡ ಹಾಗೂ ಮಗನಿಗೆ ರೂ. 24 ಲಕ್ಷಗಳಷ್ಟು (£25,000) ಪರಿಹಾರ ನೀಡಬೇಕೆಂದು ಸಹ ಕೋರ್ಟ್ ಡೇವಿಡ್ ಗೆ ಆದೇಶಿಸಿದೆ.

ಮತ್ತೊಂದು ಕೋರ್ಟ್ ಸಹ ಇವಾನ್ ಸಾವಿಗೆ ಅವನೇ ಜಬಾಬ್ದಾರನಾಗಿದ್ದಾನೆ, ಹಾಗಾಗಿ ವೈದ್ಯಕೀಯ ವಿಮೆ ಕಂಪನಿಗೆ ಪರಿಹಾರ ನೀಡಲೇಬೇಕೆಂದು ಹೇಳಿದೆ.

ಇದಕ್ಕೂ ಮೊದಲು ನಡೆದ ವಿಚಾರಣೆಗಳಲ್ಲಿ ಡೇವಿಡ್ ಇತರ ಮೂರು ಮಹಿಳೆಯರ ಮೇಲೂ ಇದೇ ತೆರನಾದ ಸ್ಟಂಟ್ ಪ್ರಯೋಗಿಸಿದ್ದ ಅನ್ನೋದು ಬೆಳಕಿಗೆ ಬಂದಿತ್ತು. ಸರ್ಕಾರಿ ವಕೀಲರ ಪ್ರಕಾರ ಡೇವಿಡ್ ಗೌಪ್ಯವಾಗಿ ಶಾಂಪೇನ್ ತುಂಬಿದ ಗ್ಲಾಸುಗಳಲ್ಲಿ, ಲಿಪ್ ಸ್ಟಿಕ್ ಮತ್ತು ಟೂಥ್ ಪೇಸ್ಟ್ ಗಳ ಮೇಲೆ ಕೊಕೇನ್ ಸಿಂಪಡಿಸಿದ್ದನಂತೆ.

ಆರಂಭಿಕ ವಿಚಾರಣೆಯಲ್ಲಿ ಡೇವಿಡ್ ನನ್ನು ‘ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಚಿತ್ರದಲ್ಲಿ ಬರುವ ಕ್ರಿಶ್ಚಿಯನ್ ಗ್ರೇ ಪಾತ್ರಕ್ಕೆ ಹೋಲಿಸಲಾಗಿತ್ತು. ಅವನು ಜರ್ಮಿನಿಯ ಸ್ಯಾಕ್ಸೋನಿ-ಅನ್ಹಲ್ಟ್ ರಾಜ್ಯದ ಹಾಲ್ಬರ್ ಸ್ಟ್ಯಾಟ್ ನಲ್ಲಿರುವ ಅಮಿಯೋಸ್ ಕ್ಲಿನಿಕ್ ಫಾರ್ ಪ್ಲಾಸ್ಟಿಕ್, ಎಸ್ಥೆಟಿಕ್ ಮತ್ತು ಹ್ಯಾಂಡ್ ಸರ್ಜರಿಯಲ್ಲಿ ಹೆಡ್ ಫಿಸಿಶಿಯನ್ ಆಗಿ ಕೆಲಸ ಮಾಡುತ್ತಿದ್ದ.

ಅದಕ್ಕೂ ಮೊದಲು, ಅವನು ಡೆಸಾವು ಮುನ್ಸಿಪಲ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್, ಸೌಂದರ್ಯ ಮತ್ತು ಕೈ ಶಸ್ತ್ರಚಿಕಿತ್ಸೆಯ ಮುಖ್ಯ ವೈದ್ಯರಾಗಿ ಕೆಲಸ ಮಾಡಿದ್ದ.

ಡೇವಿಡ್ ಮತ್ತು ಇವಾನ್ ಪರಸ್ಪರ ಸಮ್ಮತಿಯ ಮೇರೆಗೆ ಲೈಂಗಿಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಡೇಟಿಂಗ್ ವೆಬ್‌ಸೈಟ್‌ನಲ್ಲಿ ಭೇಟಿಯಾಗಿದ್ದರು.

ಜುರ್ಗೆನ್ ಎಮ್ ಎಂದು ಮಾತ್ರ ಗುರುತಿಸಲ್ಪಡುವ ಇವಾನ್ ಳ 64-ವರ್ಷದ ತಂದೆ, ಬಿಲ್ಡ್‌ ಹೆಸರಿನ ವೆಬ್ ಸೈಟ್ ಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ಮಗಳು ಡೇವಿಡ್ ರೋಗಿಯಾಗಿದ್ದಳು ಎಂದು ಹೇಳಿದ್ದಾರೆ. ಅವನು ಉದ್ದೇಶಪೂರ್ವಕವಾಗಿ ತನ್ನ ಮಗಳನ್ನು ಬಲಿಪಶುವಾಗಿ ಆರಿಸಿಕೊಂಡಿದ್ದ ಅಂತ ತನಗೆ ಮನವರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ಅವಳನ್ನು ವಾಸಿ ಮಾಡುತ್ತೇನೆ ಅಂತ ಡೇವಿಡ್ ಆಶ್ವಾಸನೆ ನೀಡಿದ್ದ, ಆದರೆ ಕಾಮುಕ ಧೂರ್ತ ಅವಳನ್ನು ಕೊಂದೇಬಿಟ್ಟ!’

‘ನನ್ನ ಮಗಳು ಬಹಳ ಸುಂದರಿಯಾಗಿದ್ದಳು ಮತ್ತು ಡೇವಿಡ್ ಎರಡು ಬಾರಿ ಆವಳ ಟೆಂಡೊನೈಟಿಸ್ (ಸ್ನಾಯು ಉರಿಯೂತ) ಸಮಸ್ಯೆಗಾಗಿ ಆಪರೇಶನ್ ಮಾಡಿದ್ದ,’ ಎಂದು ಜುರ್ಗೆನ್ ಹೇಳಿದ್ದಾರೆ.

‘ನನ್ನ ಮಗಳ ಮಗಳ ಯೋಚಿಸುವುದನ್ನು ನಾನು ಕಡಿಮೆ ಮಾಡಬೇಕು, ಇಲ್ಲದಿದ್ದರೆ ನನಗೆ ಹುಚ್ಚು ಹಿಡಿದು ಬಿಡುತ್ತದೆ.’

‘ಅವಳು ಅಪಘಾತವೊಂದರಲ್ಲಿ ಸತ್ತಿದ್ದರೆ ಆ ಸಂಗತಿಯನ್ನು ಅರಗಿಸಿಕೊಳ್ಳಬಹುದಿತ್ತು. ಆದರೆ ಇಂಥ ಸಾವನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ,’ ಎಂದು ಜುರ್ಗೆನ್ ಹೇಳಿದ್ದಾರೆ.

ಇವಾನ್ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಜುರ್ಗೆನ್ ಅವರಿಗೆ ಹೃದಯಾಘಾತವಾಗಿತ್ತು. ಅವರ ಎರಡು ರಕ್ತನಾಳಗಳಿಗೆ ಸ್ಟೆಂಟ್ ಗಳನ್ನು ಅಳವಡಿಸಲಾಗಿದೆ.

ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ