ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಗಳಿಗೆ ಏಕಕಾಲಕ್ಕೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ 10 ಆರೋಪಿಗಳಿಗೆ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ನೀಡಿದೆ.
ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ ಕಾಣುತ್ತವೆ ಅಂತಾರಲ್ಲ, ಹಾಗೆ ಕಾಮುಕರ ಕಣ್ಣಿಗೆ ಮಕ್ಕಳು, ಮಹಿಳೆಯರು ಅನ್ನೋದು ಬೇಧವೆ ಇಲ್ಲದೆ ಅತ್ಯಾಚಾರವೆಸಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಾಮುಕರ ಅಟ್ಟಹಾಸಕ್ಕೆ ಮುದ್ದು ಮಕ್ಕಳು ಬಲಿಯಾಗುತ್ತಿರುವ ಪ್ರಕಣಗಳು ಹೆಚ್ಚಾಗುತ್ತಿವೆ. ಇನ್ನು ಗ್ರಾಮೀಣ ಭಾಗದಲ್ಲಿ ಅಕ್ಕಪಕ್ಕ ಜನರು ಅಂದರೆ ನಾವೆಲ್ಲರೂ ಸಹೋದರು ಅನ್ನೋ ಭಾವನೆ ಇದೆ. ಹೀಗಾಗಿ ವಿಶ್ವಾಸದಿಂದ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋದರೂ ತಲೆ ಕೆಡಿಸಿಕೊಳ್ಳಲ್ಲ. ಆದರೆ ಈಗ ಕಾಲ ಬದಲಾಗಿ ಹೋಗಿದೆ. ಯಾರೂ ಮೇಲೂ ವಿಶ್ವಾಸ ಇಡದಂತೆ ಸ್ಥಿತಿ ನಿರ್ಮಾಣವಾಗಿದೆ. ಚಾಕೂಲೇಟ್ ಆಸೆ, ಟಿವಿ ನೋಡುವ ಆಸೆ ತೋರಿಸಿ ಪುಟ್ಟ ಮಕ್ಕಳನ್ನು ಪುಸಲಾಯಿಸಿ ಕಾಮುಕರು ತಮ್ಮ ಅಟ್ಟಹಾಸ ನಡೆಸಿದ ಪ್ರಕರಣಗಳು ನಡೆಯುತ್ತಿವೆ.
ಅದು ಮಾರ್ಚ್ 22, 2020 ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘನಘೋರ ಕೃತ್ಯ ನಡೆದಿತ್ತು. ಅಂದು ಬೆಳಗ್ಗೆ 11ಗಂಟೆ ವೇಳೆ ಪುಟ್ಟ ಬಾಲಕಿಯನ್ನು ಧಾರವಾಹಿ ನೋಡು ಬಾ ಎಂದು ವ್ಯಕ್ತಿಯೋರ್ವ ತನ್ನ ಮನೆಗೆ ಕರೆಸಿದ್ದಾನೆ. ಧಾರವಾಹಿ ನೋಡಿ ಮಗು ಮನೆಗೆ ಹೊರಟಿದೆ. ಆದ್ರೆ, ಅಷ್ಟರಲ್ಲಿ ಬಾಲಕಿ ಮೇಲೆ ಕಾಮುಕನ ಕೆಟ್ಟು ಕಣ್ಣು ಬಿದ್ದಿತ್ತು. ಇನ್ನೊಂದು ಧಾರವಾಹಿ ಪುಟ್ಟಗೌರಿ ಚೆನ್ನಾಗಿದೆ, ನೋಡಿ ಹೋಗುವಂತೆ ಹೇಳಿದ್ದಾನೆ. ಆದ್ರೆ, ಬಾಲಕಿ ಎದ್ದು ಹೊರಟಾಗ ಅವಳ ಬಾಯಿ ಗಟ್ಟಿಯಾಗಿ ಹಿಡಿದು ಮನೆಯ ಕೋಣೆಗೆ ಕರೆದ್ಯೊಯ್ದು ಬಟ್ಟೆ ಬಿಚ್ಚಿ ರಕ್ಷಸನಂತೆ ಎರಗಿದ ಕಾಮಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಗದಗ ಜಿಲ್ಲೆಯಲ್ಲಿ ಅಪ್ರಾಪ್ತರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಗದಗ ಜಿಲ್ಲೆಯ ಪೊಲೀಸರು ಕೂಡ ಪೋಕ್ಸೋ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಬಲು ಬೇಗ ಮುಗಿಸಿ ನ್ಯಾಯಾಲಯಕ್ಕೆ ಪೋರಕವಾದ ಸಾಕ್ಷಿ, ದಾಖಲೆಗಳು ಒದಗಿಸುವ ಮೂಲಕ ಕಾಮುಕರಿಗೆ ಶಿಕ್ಷೆ ಆಗುವಂತೆ ನೋಡಿ ಕೊಂಡಿದ್ದಾರೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಅಪ್ರಾಪ್ತರ ಮೇಲೆ ಅಟ್ಟಹಾಸ ತೋರಿದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರೊಬ್ಬರಿ 10 ಆರೋಪಿಗಳಿಗೆ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ನೀಡಿದೆ. ಕಡಿಮೆ ಅವಧಿಯಲ್ಲೇ ಪ್ರಕರಣದ ವಿಚಾರಣೆ ನಡೆಸಿ 10, 15, 20 ವರ್ಷ ಶಿಕ್ಷೆ, ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಂಥ ನೀಚ, ರಾಕ್ಷಸ ಮನೋಭಾವದ ಕಾಮುಕರಿಗೆ ಎಂಥ ಶಿಕ್ಷೆ ನೀಡಿದರೂ ಕಡಿಮೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ನ್ಯಾಯಾಲಯದ ತೀರ್ಪು ಮಾತ್ರ ಕಾಮುಕರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ- ಸಂಜೀವ ಪಾಂಡ್ರೆ, ಟಿವಿ9 ಗದಗ