ಪ್ರಿಯತಮ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆ ಮಸಣ ಸೇರಿದಳು
ಚಿತ್ರದುರ್ಗ: ಅವ್ನು ಸಿನಿಮಾ ಸ್ಟೈಲ್ನಲ್ಲಿ ಬಂದು ಮದ್ವೆ ಮಾತುಕತೆಗೆ ಅಡ್ಡ ಹಾಕಿದ್ದ. ಅವಳು ಅಪ್ಪಟ ಪ್ರೇಮದಾಸಿಯಾಗಿ ಪೋಷಕರನ್ನ ಒಪ್ಪಿಸಿ ಇನಿಯನ ಜೊತೆ ಮದ್ವೆಗೆ ಸಜ್ಜಾಗಿದ್ಲು. ಆದ್ರೆ ಕೊನೇ ಗಳಿಗೆಯಲ್ಲಿ ಪ್ರಿಯತಮ ಅದೇನ್ ಹೇಳಿದ್ನೋ ಗೊತ್ತಿಲ್ಲ. ಪರಿಣಾಮ ಆಗಿದ್ದು ಮಾತ್ರ ಪ್ರೀತಿಯ ಸಾವು. ಹೀಗೆ ಪ್ರೀತಿಯ ಗುಂಗಲ್ಲಿ ಗುನುಗ್ತಿದ್ಲು.. ಖುಷಿಯ ಅಲೆಯಲ್ಲಿ ತೇಲ್ತಿದ್ಲು.. ರೆಕ್ಕೆ ಬಂದ ಪಕ್ಷಿಯಂತೆ ಹಾರಾಡ್ತಿದ್ಲು.. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡು ನಾಚಿ ನೀರಾಗ್ತಿದ್ಲು.. ನಿನ್ನ ಒಲವು ಇನ್ನೂ ಬೇಕಾಗಿದೆ ಅಂತಾ ಚಡಪಡಿಸ್ತಿದ್ಲು. ಇದೇ […]
ಚಿತ್ರದುರ್ಗ: ಅವ್ನು ಸಿನಿಮಾ ಸ್ಟೈಲ್ನಲ್ಲಿ ಬಂದು ಮದ್ವೆ ಮಾತುಕತೆಗೆ ಅಡ್ಡ ಹಾಕಿದ್ದ. ಅವಳು ಅಪ್ಪಟ ಪ್ರೇಮದಾಸಿಯಾಗಿ ಪೋಷಕರನ್ನ ಒಪ್ಪಿಸಿ ಇನಿಯನ ಜೊತೆ ಮದ್ವೆಗೆ ಸಜ್ಜಾಗಿದ್ಲು. ಆದ್ರೆ ಕೊನೇ ಗಳಿಗೆಯಲ್ಲಿ ಪ್ರಿಯತಮ ಅದೇನ್ ಹೇಳಿದ್ನೋ ಗೊತ್ತಿಲ್ಲ. ಪರಿಣಾಮ ಆಗಿದ್ದು ಮಾತ್ರ ಪ್ರೀತಿಯ ಸಾವು.
ಹೀಗೆ ಪ್ರೀತಿಯ ಗುಂಗಲ್ಲಿ ಗುನುಗ್ತಿದ್ಲು.. ಖುಷಿಯ ಅಲೆಯಲ್ಲಿ ತೇಲ್ತಿದ್ಲು.. ರೆಕ್ಕೆ ಬಂದ ಪಕ್ಷಿಯಂತೆ ಹಾರಾಡ್ತಿದ್ಲು.. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡು ನಾಚಿ ನೀರಾಗ್ತಿದ್ಲು.. ನಿನ್ನ ಒಲವು ಇನ್ನೂ ಬೇಕಾಗಿದೆ ಅಂತಾ ಚಡಪಡಿಸ್ತಿದ್ಲು. ಇದೇ ಥರ ಸಂತಸದಲ್ಲಿದ್ದ ರಾಜೇಶ್ವರಿ ಅನ್ನೋ ಹುಡ್ಗಿಗೆ ಪೋಷಕರು ಒಂದ್ ಶಾಕಿಂಗ್ ನ್ಯೂಸ್ ಕೊಟ್ಟಿದ್ರು. ಏಕಾಏಕಿ ರಾಜೇಶ್ವರಿಯನ್ನ ನೋಡೋಕೆ ಗಂಡಿನ ಕಡೆಯವ್ರು ಬಂದ್ಬಿಟ್ಟಿದ್ರು. ಆಗ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆರೆಯಾಗಲಹಳ್ಳಿಯ ರಾಜೇಶ್ವರಿ ಮನೆಗೆ ಹೀರೋ ರೇಂಜ್ಗೆ ಒಬ್ನು ಎಂಟ್ರಿ ಕೊಟ್ಟಿದ್ದ. ಆತ ಬೇರೆ ಯಾರೂ ಅಲ್ಲ ರಾಜೇಶ್ವರಿಯ ಲವ್ ಬಾಯ್ ತಿಪ್ಪೇಸ್ವಾಮಿ.
ಫಿಲ್ಮ್ ಸ್ಟೈಲ್ನಲ್ಲಿ ಬಂದ ತಿಪ್ಪೇಸ್ವಾಮಿ ನಾನು ರಾಜೇಶ್ವರಿಯನ್ನ ಮದ್ವೆ ಆಗ್ತೀನಿ ಅಂದ. ಕೆಲ ದಿನಗಳು ಬಿಟ್ಟು ಮದ್ವೆ ಮಾತುಕತೆಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ. ಆಗ 5 ಲಕ್ಷ ವರದಕ್ಷಿಣೆ, 3 ತೊಲೆ ಚಿನ್ನ ಹಾಗೂ ಛತ್ರದಲ್ಲಿ ಮದ್ವೆ ಮಾಡಿಕೊಡಿ ಅಂತಾ ಡಿಮ್ಯಾಂಡ್ ಮಾಡಿದ್ನಂತೆ. ಅಷ್ಟು ಕೊಡೋಕೆ ಆಗಲ್ಲ ಅಂದಾಗ ಎದ್ದು ಹೋದ್ರಂತೆ. ಬಳಿಕ ರಾಜೇಶ್ವರಿಗೆ ಫೋನ್ ಮಾಡಿದ ತಿಪ್ಪೇಸ್ವಾಮಿ, ನನ್ನ ಅಪ್ಪನ ಅಮ್ಮನ ಮಾತು ಮೀರಿ ನಿನ್ನ ಮದ್ವೆ ಆಗೋಕೆ ಆಗಲ್ಲ ಅಂದ್ನಂತೆ. ಇದ್ರಿಂದ ನೊಂದ ರಾಜೇಶ್ವರಿ ನೇಣಿಗೆ ಕೊರಳೊಡ್ಡಿದ್ಲು. ಆದ್ರೆ ಮಗ್ಳು ತೀರಿಕೊಂಡ 15 ದಿನಗಳ ಬಳಿಕ ಇದೀಗ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇನ್ನು ಸಾವಿಗೂ ಮುನ್ನ ರಾಜೇಶ್ವರಿ ಡೆತ್ನೋಟ್ ಬರೆದಿಟ್ಟಿದ್ದಾಳೆ. ನನ್ನ ಸಾವಿಗೆ ನನ್ನ ಗಂಡನೇ ಕಾರಣ, ಅವ್ನು ಮೋಸ ಮಾಡ್ತಾನೆ ಅನ್ಕೊಂಡಿರಲಿಲ್ಲ. ನಾನು ಅವನನ್ನ ಕ್ಷಮಿಸಲ್ಲ ಅಂದಿದ್ದಾಳೆ. ಈ ಬಗ್ಗೆ ಹೊಳಲ್ಕೆರೆ ಠಾಣೆಯಲ್ಲಿ ಕೇಸ್ ದಾಖಲಾಗಿ ಎರಡು ವಾರಗಳೇ ಆದ್ರೂ ತಿಪ್ಪೇಸ್ವಾಮಿ ಕುಟುಂಬಸ್ಥರನ್ನ ಬಂಧಿಸಿಲ್ಲ.
ಇಷ್ಟು ದಿನ ಸೈಲೆಂಟ್ ಇದ್ದ ರಾಜೇಶ್ವರಿ ಕುಟುಂಬಸ್ಥರು ಈಗ ಎಸ್ಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ನಮ್ಗೆ ನ್ಯಾಯ ಬೇಕು ಅಂದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ತಿಪ್ಪೇಸ್ವಾಮಿ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಸಿಕ್ಕ ಮೇಲೆ ಅವ್ರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತೀವಿ ಅಂತಿದ್ದಾರೆ. ಒಟ್ನಲ್ಲಿ ದುಡ್ಡಿನ ಮೇಲೆ ಆಸೆಗೋ, ಪೋಷಕರು ಏನಾದ್ರೂ ಹೇಳಿದ್ರೋ ಗೊತ್ತಿಲ್ಲ. ಆದ್ರೆ ತಿಪ್ಪೇಸ್ವಾಮಿ ಕೈಕೊಟ್ಟಿದ್ದಕ್ಕೆ ರಾಜೇಶ್ವರಿ ಸಾವಿನ ಕದ ತಟ್ಟಿದ್ದು ಮಾತ್ರ ದುರಂತ.
Published On - 8:10 am, Fri, 20 December 19