ಅನೈತಿಕ ಸಂಬಂಧ ಆರೋಪ: ಯುವಕನನ್ನ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಪತಿ
ಬಾಗಲಕೋಟೆ: ಕೊಡಲಿಯಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೀಮಿಕೇರಿಯಲ್ಲಿ ನಡೆದಿದೆ. ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಚಂದ್ರು ಹೊರಕೇರಿ(24) ಎಂಬ ಯುವಕನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಊರಿನ ಕಾವೇರಿ ಎಂಬುವ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಮಹಿಳೆಯ ಪತಿ ಹನುಮಂತ ಹಾಗೂ ಮಾವ ಮಲ್ಲಪ್ಪ ಸೇರಿ ಈ ಕೃತ್ಯ ಎಸಗಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ಕೊಡಲಿಯಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೀಮಿಕೇರಿಯಲ್ಲಿ ನಡೆದಿದೆ. ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಚಂದ್ರು ಹೊರಕೇರಿ(24) ಎಂಬ ಯುವಕನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಊರಿನ ಕಾವೇರಿ ಎಂಬುವ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಮಹಿಳೆಯ ಪತಿ ಹನುಮಂತ ಹಾಗೂ ಮಾವ ಮಲ್ಲಪ್ಪ ಸೇರಿ ಈ ಕೃತ್ಯ ಎಸಗಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.