Kempegowda International Airport: ಜೀನ್ಸ್ ಪ್ಯಾಂಟ್’ನಲ್ಲಿ ಚಿನ್ನದ ಪೇಸ್ಟ್ ಬಚ್ಚಿಟ್ಟಿದ್ದ ಭೂಪ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆರೆ!

| Updated By: Digi Tech Desk

Updated on: Feb 05, 2023 | 12:10 PM

ಬ್ಯಾಂಕಾಕ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ 38 ವರ್ಷದ ಖತರ್ನಾಕ್ ಸ್ಮಗ್ಲರ್ ಕಸ್ಟಾಮೈಸ್ ಮಾಡಿ ಹೊಲಿದ ಜೀನ್ಸ್'ನ ಸಣ್ಣ ಸಣ್ಣ ಜೇಬಿನಲ್ಲಿ 30 ಲಕ್ಷ ಬೆಲೆಬಾಳುವ ಗೋಲ್ಡ್ ಪೇಸ್ಟ್ ತಂದಿದ್ದು ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.

Kempegowda International Airport: ಜೀನ್ಸ್ ಪ್ಯಾಂಟ್ನಲ್ಲಿ ಚಿನ್ನದ ಪೇಸ್ಟ್ ಬಚ್ಚಿಟ್ಟಿದ್ದ ಭೂಪ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆರೆ!
ಗೋಲ್ಡ್ ಸ್ಮಾಗ್ಲರ್ ಬಂಧನ
Image Credit source: Tribune India
Follow us on

ಬೆಂಗಳೂರು: ಬ್ಯಾಂಕಾಕ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ 38 ವರ್ಷದ ಖತರ್ನಾಕ್ ಸ್ಮಗ್ಲರ್ ಕಸ್ಟಮೈಸ್ ಮಾಡಿ ಹೊಲಿದ ಜೀನ್ಸ್ನ ಸಣ್ಣ ಸಣ್ಣ ಜೇಬಿನಲ್ಲಿ 30 ಲಕ್ಷ ಬೆಲೆಬಾಳುವ ಗೋಲ್ಡ್ ಪೇಸ್ಟ್ ತಂದಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು ಕಸ್ಟಮ್ಸ್‌ನ ವಾಯು ಗುಪ್ತಚರ ಘಟಕ ಕೊಟ್ಟಿರುವ ಮಾಹಿತಿ ಪ್ರಕಾರ ಕರ್ನಾಟಕ ಮೂಲದ ಈ ಸ್ಮಗ್ಲರ್ ಗುರುವಾರ ಥಾಯ್ ಏರ್ವೇಸ್ ಫ್ಲೈಟ್ ಟಿಜಿ 325 ಫ್ಲೈಟ್ನಲ್ಲಿ ಸೆರೆಯಾಗಿದ್ದಾನೆ. ಈತನ ಥೈಲ್ಯಾಂಡ್‌ ನ ಸಣ್ಣ ಪ್ರವಾಸವು ಅನುಮಾನವನ್ನು ಹುಟ್ಟಿಸಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ಸ್ಮಗ್ಲರ್ ಧರಿಸಿದ್ದ ಪ್ಯಾಂಟ್‌ನಲ್ಲಿ ಅನುಮಾನಾಸ್ಪದ ಹೊಲಿಗೆ ಕಂಡು ಅವರನ್ನು ಪರಿಶೀಲಿಸಿದರು. ಪರಿಶೀಲನೆ ನಂತರ ಈತ ತನ್ನ ಜೀನ್ಸ್ ನಲ್ಲಿ ಸಣ್ಣ ಸಣ್ಣ ಜೇಬುಗಳನ್ನು ಹೊಲಿದಿದ್ದು ಅದರಲ್ಲಿ 30 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್ ತುಂಬಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್​ಗೆ ನುಗ್ಗಿ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ

2023 ರ ಜನವರಿಫೆಬ್ರವರಿ ತಿಂಗಳಲ್ಲಿ ಮಹಿಳೆಯೊಬ್ಬಳು 7 ಕೋಟಿ ಮೌಲ್ಯದ 686 ಗ್ರಾಂ ಕೋಕೈನ್(cocaine) ಕಳ್ಳಸಾಗಣೆ ಮಾಡಲು ಹೋಗಿ ಕೆಂಪೇಗೌಡ ನಿಲ್ದಾಣದಲ್ಲಿ ಸೆರೆಯಾಗಿದ್ದಳು, ಅಷ್ಟೇ ಅಲ್ಲದೆ ಅಪರೂಪದ ಪ್ರಾಣಿಗಳನ್ನು ಸ್ಮಗ್ಗಲ್ ಮಾಡಿದ ಮೂರು ಜನರ ಬಂಧನವಾಗಿದೆ.

Published On - 12:10 pm, Sun, 5 February 23