ಗುಜರಾತ್: ಸ್ನೇಹಿತನ 3 ವರ್ಷದ ಮಗು ಮೇಲೆ ವ್ಯಕ್ತಿಯಿಂದ ಅತ್ಯಾಚಾರ
ವ್ಯಕ್ತಿಯೊಬ್ಬ ಮೂರು ವರ್ಷದ ಮಗು ಮೇಲೆ ಅತ್ಯಾಚಾರವೆಸಗಿರುವ ಹೃದಯ ವಿದ್ರಾವಕ ಘಟನೆ ಗುಜರಾತ್ನಲ್ಲಿ ನಡೆದಿದೆ.ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಉಮರ್ಗಾಮ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು, ತಕ್ಷಣ ಕ್ರಮ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ವ್ಯಕ್ತಿಯೊಬ್ಬ ತನ್ನ ಸ್ನೇಹಿತನ 3 ವರ್ಷದ ಮಗು ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ನ ವಲ್ಸಾದ್ನಲ್ಲಿ ನಡೆದಿದೆ. ಮೂರು ವರ್ಷದ ಮಗು ಮೇಲೆ ಆಕೆಯ ತಂದೆಯ ಆಪ್ತ ಸ್ನೇಹಿತನೇ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಅಪರಾಧ ಎಸಗಿ ನಂತರ ಪರಾರಿಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಉಮರ್ಗಾಮ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು, ತಕ್ಷಣ ಕ್ರಮ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಆರೋಪಿ ಸಿಕ್ಕಿಬಿದ್ದಿದ್ದು, ಮಧ್ಯಾಹ್ನದೊಳಗೆ ಊರಿಗೆ ಕರೆತರಲಾಗುವುದು ಎಂದು ಪೊಲೀಸರು ಪ್ರತಿಭಟನಾಕಾರರ ಬಳಿ ತಿಳಿಸಿದ್ದಾರೆ.
ಆದರೂ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದರು.
ಮತ್ತಷ್ಟು ಓದಿ: Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್
2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಚರಂಡಿಗೆ ಎಸೆದು ಕೊಂದ ಯುವಕ ಭೀಕರ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ವ್ಯಕ್ತಿಯೊಬ್ಬ 2 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಬಾಲಕಿಯ ಮನೆಯವರು ಆತನನ್ನು ಹಿಂಬಾಲಿಸಿಕೊಂಡು ಹೋದಾಗ ಆತ ಹೆದರಿಕೊಂಡು ಆ ಮಗುವನ್ನು ಚರಂಡಿಗೆ ಎಸೆದು ಓಡಿಹೋಗಿದ್ದಾನೆ.
ತೀವ್ರವಾದ ಗಾಯದಿಂದಾಗಿ ಆ ಬಾಲಕಿ ಮೃತಪಟ್ಟಿದ್ದು, ಆಕೆಯ ಶವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ವಿವರಗಳನ್ನು ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್, ಶುಕ್ರವಾರ ತಡರಾತ್ರಿ 20 ವರ್ಷದ ಮೋಯಿಶ್ ಎಂಬಾತ ಮೀರತ್‌ನ ಸದರ್ ಪ್ರದೇಶದಲ್ಲಿ ಮನೆಯಿಂದ ಹೊರಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ 2 ವರ್ಷದ ಬಾಲಕಿಯನ್ನು ತನ್ನ ಮನೆಯ ಹೊರಗಿನಿಂದ ಅಪಹರಿಸಿದ ಘಟನೆ ನಡೆದಿದೆ.
ಕುಟುಂಬದ ಸದಸ್ಯರು ಎಚ್ಚರಗೊಂಡ ನಂತರ, ತಮ್ಮ ಮನೆಯ ಮಗು ಇಲ್ಲವೆಂದು ಗೊತ್ತಾಗಿದೆ. ತಕ್ಷಣ ಆರೋಪಿಯನ್ನು ಹಿಂಬಾಲಿಸಿ ಹೋಗಿದ್ದಾರೆ. ಆದರೆ, ಆತ ಆ ಬಾಲಕಿಯನ್ನು ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಇದರಿಂದ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Wed, 28 August 24